ಭಾರತಕ್ಕೆ ಆಗಮಿಸಿದ ಪಾಕ್‌ ಸಚಿವ ಭುಟ್ಟೋ: ಪಾಕಲ್ಲಿ 50 ಹಿಂದೂಗಳ ಮತಾಂತರ

Published : May 05, 2023, 09:27 AM IST
ಭಾರತಕ್ಕೆ ಆಗಮಿಸಿದ ಪಾಕ್‌ ಸಚಿವ ಭುಟ್ಟೋ: ಪಾಕಲ್ಲಿ 50 ಹಿಂದೂಗಳ ಮತಾಂತರ

ಸಾರಾಂಶ

ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ಭಾಗಿಯಾಗಲು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಗುರುವಾರ ಗೋವಾಗೆ ಆಗಮಿಸಿದರು. ಇದು 12 ವರ್ಷಗಳ ಬಳಿಕ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತ ಭೇಟಿಯಾಗಿದೆ.

ಬೆನೌಲಿಂ: ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ಭಾಗಿಯಾಗಲು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಗುರುವಾರ ಗೋವಾಗೆ ಆಗಮಿಸಿದರು. ಇದು 12 ವರ್ಷಗಳ ಬಳಿಕ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತ ಭೇಟಿಯಾಗಿದೆ. ಈ ವೇಳೆ ಯಾವುದೇ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.  ಅಂತಾರಾಷ್ಟ್ರೀಯ ಭಯೋತ್ಪಾದನೆಗೆ (international terrorism)ಸಹಕಾರ ನೀಡುತ್ತಿದೆ ಎಂಬ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹಳಸಿರುವ ನಡುವೆಯೇ ಭುಟ್ಟೋ (Bilawal Bhutto) ಭಾರತ ಪ್ರವಾಸ ಕೈಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಶಾಂಘೈ ಸಹಕಾರ ಸಂಘದ ವಿದೇಶಾಂಗ ಸಚಿವರ (Foreign Minister) ಸಭೆಯಲ್ಲಿ ಭಾಗಿಯಾಗಲು ಗೋವಾಗೆ ಬಂದಿರುವುದು ಹಾಗೂ ಈ ಸಭೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವುದು ಸಂತೋಷ ನೀಡಿದೆ. ವಿದೇಶಾಂಗ ಸಚಿವರ ಸಭೆ ಫಲ ನೀಡಲಿ ಎಂದು ನಾನು ಆಶಿಸುತ್ತೇನೆ ಎಂದು ಭುಟ್ಟೋ ಹೇಳಿದ್ದಾರೆ. 2011ರಲ್ಲಿ ಕಡೆಯ ಬಾರಿ ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್‌ (Heena Rabbani Khar) ಭಾರತಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ನವಾಜ್‌ ಷರೀಫ್‌ ಭಾರತಕ್ಕೆ ಬಂದಿದ್ದರು.

ಪಾಕ್‌ಗೆ ರಹಸ್ಯ ಮಾಹಿತಿ ರವಾನೆ: ಪುಣೆಯಲ್ಲಿ ಡಿಆರ್‌ಡಿಒ ವಿಜ್ಞಾನಿ ಸೆರೆ

ಹಿಂದೂಗಳು ಇಸ್ಲಾಂಗೆ ಮತಾಂತರ

ಈ ನಡುವೆ  ಪಾಕಿಸ್ತಾನದ ದಕ್ಷಿಣ ಸಿಂಧ್‌ ಪ್ರಾಂತ್ಯದಲ್ಲಿ 10 ಕುಟುಂಬಗಳಿಗೆ ಸೇರಿದ 50 ಮಂದಿ ಹಿಂದೂಗಳನ್ನು ಇಸ್ಲಾಂಗೆ ಮತಾಂತರಗೊಳಿಸಲಾಗಿದೆ (converted to Islam). ಬೈಟುಲ್‌ ಇಮಾನ್‌ ಕಾಲೋನಿಯಲ್ಲಿ (Baitul Iman Colony) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಗೆ ಸೇರಿದ ಹಿಂದೂಗಳನ್ನು ಮತಾಂತರ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

23 ಮಹಿಳೆಯರು, 1 ವರ್ಷದ ಒಂದು ಹೆಣ್ಣುಮಗು ಸೇರಿದಂತೆ 10 ಕುಟುಂಬಕ್ಕೆ ಸೇರಿದ 50 ಮಂದಿ ಮತಾಂತರ ಆಗಿದ್ದಾರೆ. ಇವರೆಲ್ಲರೂ ಸ್ವ ಇಚ್ಚೆಯಿಂದ ಇಸ್ಲಾಂಗೆ ಮತಾಂತರವಾಗಿದ್ದಾರೆ. ಯಾರನ್ನು ಬಲವಂತ ಮಾಡಲಾಗಿಲ್ಲ ಎಂದು ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಕ್ವಾರಿ ತೈಮೂರ್‌ ರಜಪೂತ್‌ (Kwari Taimur Rajput) ಹೇಳಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿಂದೂ ಹೋರಾಟಗಾರರು, ಸರ್ಕಾರವೇ ಹಣದ ಆಮಿಷ ತೋರಿಸಿ ಬಡವರನ್ನು ಇಸಲಾಂಗೆ ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

Shocking! ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್‌ ಲಾಕ್‌! ನೆರೆಯ ದೇಶದಲ್ಲಿ ಇದೆಂತಾ ದುಸ್ಥಿತಿ..

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!