ದೀಪಾವಳಿ ಆಚರಣೆ ವೇಳೆ ಕೆನಡಾದಲ್ಲಿ ಖಲಿಸ್ತಾನಿಗಳು ಭಾರತೀಯರ ನಡುವೆ ಹೊಯ್‌ಕೈ: ವೀಡಿಯೋ ವೈರಲ್‌

By Anusha Kb  |  First Published Nov 15, 2023, 11:44 AM IST

ದೀಪಾವಳಿ ಆಚರಣೆ ವೇಳೆ ಕೆನಡಾದ ನಗರವೊಂದರಲ್ಲಿ ಭಾರತೀಯ ಹಿಂದೂಗಳು ಹಾಗೂ ಖಲಿಸ್ತಾನಿ ಬೆಂಬಲಿಗರ ಮಧ್ಯೆ ಪರಸ್ಪರ ಸ್ಪರ್ಧೆ ಏರ್ಪಟ್ಟು ಹೊಡೆದಾಡಿದ್ದಾರೆಂದು ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ


ದೀಪಾವಳಿ ಆಚರಣೆ ವೇಳೆ ಕೆನಡಾದ ನಗರವೊಂದರಲ್ಲಿ ಭಾರತೀಯ ಹಿಂದೂಗಳು ಹಾಗೂ ಖಲಿಸ್ತಾನಿ ಬೆಂಬಲಿಗರ ಮಧ್ಯೆ ಪರಸ್ಪರ ಸ್ಪರ್ಧೆ ಏರ್ಪಟ್ಟು ಹೊಡೆದಾಡಿದ್ದಾರೆಂದು ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಬೀದಿಯಲ್ಲಿ ದೀಪಾವಳಿ ಆಚರಿಸುತ್ತಿದ್ದು, ಈ ವೇಳೆ ಖಲಿಸ್ತಾನಿ ಧ್ವಜ ಹಿಡಿದಿರುವ ಗುಂಪೊಂದು ನೆಲದಿಂದ ಕಲ್ಲು ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಹಬ್ಬ ಆಚರಿಸುತ್ತಿರುವವರ ಮೇಲೆ ಎಸೆಯುತ್ತಿರುವ ದೃಶ್ಯವಿದೆ. 

ಇದು ಕೆನಡಾದ ಬ್ರಂಟನ್‌ ಎಂಬಲ್ಲಿ ನಡೆದ ಘಟನೆ ಎಂದು ವರದಿಯಾಗಿದೆ. ಖಲಿಸ್ತಾನಿ ಬೆಂಬಲಿಗರು (Khalistan Supporter) ಹಾಗೂ ಹಬ್ಬ ಆಚರಿಸುತ್ತಿರುವ ಹಿಂದೂ ಸಮುದಾಯದ (Hindu Comunity) ಮಧ್ಯೆ ಕಿತ್ತಾಟ ನಡೆದಿದೆ ಖಲಿಸ್ತಾನಿ ಧ್ವಜ ಹಿಡಿದ ಕೆಲ ಕಿಡಿಗೇಡಿಗಳು ನೆಲದಿಂದ ಕೈಗೆ ಸಿಕ್ಕ ವಸ್ತುಗಳನ್ನು ಹೆಕ್ಕಿ ಹಬ್ಬ ಆಚರಿಸುತ್ತಿದ್ದವರ ಮೇಲೆ ಎಸೆಯುತ್ತಿದ್ದರು ಎಂದು ಟೊರಂಟೋ ಸನ್ ವರದಿ ಮಾಡಿದೆ.

Tap to resize

Latest Videos

ಆ ಕಟ್ಟಡದಿಂದ ಈ ಕಟ್ಟಡಕ್ಕೆ ಹಾಸ್ಟೆಲ್ ಹುಡುಗರ ರಾಕೆಟ್ ವಾರ್: ಆಘಾತಕಾರಿ ವೀಡಿಯೋ ವೈರಲ್

ಸೋಶಿಯಲ್ ಮೀಡಿಯಾ ಬಳಕೆದಾರರ ಪ್ರಕಾರ ಈ ಘಟನೆ ಮಲ್ಟನ್‌ನ ವೆಸ್ಟ್‌ವುಡ್ ಮಾಲ್‌ (Westwood Mall) ಬಳಿ ನಡೆದಿದೆ. ಈ ಗಲಾಟೆಯ ನಂತರ ಅಲ್ಲಿಗೆ ಬಂದ ಪೊಲೀಸರು ಜನರನ್ನು ಅಲ್ಲಿಂದ ತೆರಳುವಂತೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಫೀಲ್‌ನ ಪ್ರಾದೇಶಿಕ ಪೊಲೀಸರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು,  ಈ ಘಟನೆ ನವಂಬರ್ 12 ರಂದು ವೆಸ್‌ವುಡ್‌ ಸ್ಕ್ವೇರ್ ಮಾಲ್‌ನಲ್ಲಿ ನಡೆದ ಘಟನೆ ಆಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ. ಈ ಬಗ್ಗೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಅಗತ್ಯವಿರುವ ಯಾವುದೇ ಕ್ರಮಗಳಿಗಾಗಿ ಮಿಸ್ಸಿಸ್ಸೌಗಾ ನಗರದೊಂದಿಗೆ  ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. 

ಬೈಕ್ ಮೇಲೆ ಪಟಾಕಿ ಶಾಟ್ಸ್‌ ಇಟ್ಟು ಸ್ಪೋಟಿಸುತ್ತಾ ವ್ಹೀಲಿಂಗ್ : ಭಯಾನಕ ವೀಡಿಯೋ ವೈರಲ್: ಬೈಕರ್ ಅಂದರ್

ವೈರಲ್ ಆದ ವೀಡಿಯೋದಲ್ಲಿ ಒಂದು ಗುಂಪು ಖಲಿಸ್ತಾನ್‌ ಜಿಂದಾಬಾದ್ ಎಂದು ಹೇಳಿದರೆ ಮತ್ತೊಂದು ಗುಂಪು ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿರುವ ದೃಶ್ಯವಿದೆ. ಮತ್ತೊಂದು ಕಡೆ ಜನ ಹೂಕುಂಡ ಪಟಾಕಿ ಸೇರಿದಂತೆ ವಿವಿಧ ತರಹದ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ಒಂದು ಕಡೆ ಖಲಿಸ್ತಾನ್ ಧ್ವಜ ಹಿಡಿದ ಜನ ಕೂಗುತ್ತಿದ್ದರೆ ಮತ್ತೊಂದು ಕಡೆ ಭಾರತದ ರಾಷ್ಟ್ರಧ್ವಜ ಹಿಡಿದ ಜನ ಘೋಷಣೆ ಕೂಗುವುದನ್ನು ನೋಡಬಹುದಾಗಿದೆ. 

ಇಂಟರ್‌ನೆಟ್‌ನಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯರು ರೊಚ್ಚಿಗೆದ್ದಿದ್ದು, ಖಲಿಸ್ತಾನಿಯರಿಗೆ ಅಲ್ಲಿಯೇ ಬುದ್ಧಿ ಕಲಿಸುವಂತೆ ಆಗ್ರಹಿಸಿದ್ದಾರೆ. 

😌Jai Haryana Jai bharat 🇮🇳 pic.twitter.com/NgNP0scMg8

— Neeraj Choudhary (@Neeraj6561)

Kalesh b/w Some khalistani and Indian guys on Brampton Street during Diwali celebrations pic.twitter.com/LL66BPaLHn

— Ghar Ke Kalesh (@gharkekalesh)

 

click me!