ಕಾಶ್ಮೀರವನ್ನು ಮತ್ತೊಂದು ಪ್ಯಾಲೆಸ್ತೀನ್ ಎಂದು ರಷ್ಯಾ ಸರ್ಕಾರ ಹೇಳಿದೆ ಎಂದು ಸ್ಥಳೀಯ ಮಾಧ್ಯಮವೊಂದು ಮಾಡಿದ್ದ ವರದಿಯನ್ನು ರಷ್ಯಾ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ
ಮಾಸ್ಕೋ (ಫೆ. 08): ಕಾಶ್ಮೀರವನ್ನು (Kashmir) ಮತ್ತೊಂದು ಪ್ಯಾಲೆಸ್ತೀನ್ (Palestine) ಎಂದು ರಷ್ಯಾ ಸರ್ಕಾರ ಹೇಳಿದೆ ಎಂದು ಸ್ಥಳೀಯ ಮಾಧ್ಯಮವೊಂದು ಮಾಡಿದ್ದ ವರದಿಯನ್ನು ರಷ್ಯಾ ಸರ್ಕಾರ (Russia Government) ಸ್ಪಷ್ಟವಾಗಿ ತಳ್ಳಿಹಾಕಿದೆ. ಕಾಶ್ಮೀರವು ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತನ್ನ ನಿಲುವನ್ನು ಮತ್ತೊಮ್ಮೆ ಪುನರುಚ್ಛರಿಸಿದೆ.
1972ರ ಶಿಮ್ಲಾ ಒಪ್ಪಂದ ಹಾಗೂ 1999 ರ ಲಾಹೋರ್ ಘೋಷಣೆಯ ಮೂಲಕ ಭಾರತ ಹಾಗೂ ಪಾಕ್ ಕಾಶ್ಮೀರದ ವಿಷಯ ಬಗೆಹರಿಸಿಕೊಳ್ಳಲು ಪ್ರಯತ್ನ ನಡೆಸಿವೆ. ರಷ್ಯಾದ ಮಾಧ್ಯಮ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕೆ ಸರ್ಕಾರವು ಅದೇ ನಿಲುವನ್ನು ಹೊಂದಿದೆ ಎಂದರ್ಥವಲ್ಲ ಎಂದು ರಾಯಭಾರ ಇಲಾಖೆ ಸ್ಪಷ್ಟಪಡಿಸಿದೆ. ದ್ವಿಪಕ್ಷೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಮಾಸ್ಕೋ ಮುಂದುವರಿಸಿದೆ ಎಂದು ರಷ್ಯಾದ ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Russia Ukraine Crisis: ಉಕ್ರೇನ್-ರಷ್ಯಾ ‘ಯುದ್ಧ ಕಾರ್ಮೋಡ’
ಈ ಮಾಧ್ಯಮವು ಜಮ್ಮು ಮತ್ತು ಕಾಶ್ಮೀರದ ಸಾಕ್ಷ್ಯಚಿತ್ರದಲ್ಲಿ, ಕೇಂದ್ರಾಡಳಿತ ಪ್ರದೇಶವು "ವಸಾಹತುಶಾಹಿ ರಾಜ್ಯ" ಆಗುತ್ತಿದೆ ಎಂದು ಹೇಳಿದೆ. ವಿಡಿಯೋಗೆ "ಕಾಶ್ಮೀರ್: ಪ್ಯಾಲೆಸ್ಟೈನ್ ಇನ್ ದಿ ಮೇಕಿಂಗ್" ಎಂಬ ಶೀರ್ಷಿಕೆ ನೀಡಲಾಗಿದೆ. "ಆಡಳಿತ ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವನ್ನು ನಿರ್ಮಿಸಲು ಪ್ರಪಂಚದಾದ್ಯಂತ ತಳಮಟ್ಟದ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ" ಜನರ ಸಹಯೋಗದೊಂದಿಗೆ ಸಣ್ಣ ಮತ್ತು ಆಳವಾದ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವಲ್ಲಿ ಪರಿಣತಿ ಹೊಂದಿರುವ ಬಹು ಪ್ರಶಸ್ತಿ ವಿಜೇತ ಡಿಜಿಟಲ್ ಕಂಟೆಂಟ್ ಸೃಷ್ಟಿಕರ್ತ ಎಂದು ಸ್ಥಳೀಯ ಮಾಧ್ಯಮ ರೆಡ್‌ಫಿಶ್ ಚಾನೆಲ್ ಹೇಳುತ್ತದೆ.
"ರಷ್ಯಾ ರಾಜ್ಯ-ಸಂಯೋಜಿತ ಮಾಧ್ಯಮ" ಎಂದು ಟ್ವೀಟರ್‌ನಲ್ಲಿ ಈ ಚಾನಲ್‌ನ ದಾರಿ ತಪ್ಪಿಸುವ ಲೇಬಲ್ ಯಾವುದೇ ರಾಜ್ಯ ಬೆಂಬಲಕ್ಕೆ ಸ್ವಯಂಚಾಲಿತವಾಗಿ ಸಂಬಂಧಿಸಿಲ್ಲ" ಎಂದು ರಾಯಭಾರ ಕಚೇರಿ ಹೇಳಿದೆ. "ಚಾನೆಲ್ ತನ್ನ ಸಂಪಾದಕೀಯ ನೀತಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅದು ಹೇಳಿದೆ. ಆದಾಗ್ಯೂ, ರಾಯಭಾರ ಕಚೇರಿಯು ಈ ವಿಷಯ ಮತ್ತು ಇತರ ಪ್ರಾದೇಶಿಕ ಸಮಸ್ಯೆಗಳ ಸಂಕೀರ್ಣತೆ ಮತ್ತು ಐತಿಹಾಸಿಕ ಹಿನ್ನೆಲೆಗಳ ಬಗ್ಗೆ ಸರಿಯಾದ ತಿಳುವಳಿಕೆಯ ಮತ್ತು ಸಮತೋಲಿತ ನಿಲುವುಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಯಾವುದೇ ವೃತ್ತಿಪರ ಮಾಧ್ಯಮದಿಂದ ಇದನ್ನು ನಿರೀಕ್ಷಿಸಬಹುದು" ಎಂದು ಭರವಸೆ ನೀಡಿದೆ.
ಇದನ್ನೂ ಓದಿ: fact Check: ಹಿಂದುತ್ವ ಸಂದೇಶ ಸಾರಲು ರಷ್ಯಾ ರೈಲುಗಳ ಮೇಲೆ ಶ್ರೀಕೃಷ್ಣ!
ಹ್ಯುಂಡೈ ಬಳಿಕ ಪ್ರತ್ಯೇಕ ಕಾಶ್ಮೀರ ಕಿಡಿ ಹೊತ್ತಿಸಿ ಭಾರತೀಯರಲ್ಲಿ ಕ್ಷಮೆ ಕೇಳಿದ KFC!: ಪ್ರತ್ಯೇಕ ಕಾಶ್ಮೀರದ(Kashmir) ಕಿಡಿ ಹೊತ್ತಿಸಿದ ಹ್ಯುಂಡೈ, ಕೆಎಫ್‌ಸಿ ಇದೀಗ ದಂಡ ತೆತ್ತಿದೆ. ಭಾರತದಲ್ಲಿ ಬಾಯ್‌ಕಾಟ್ ಅಭಿಯಾನದಿಂದ ಬೆಚ್ಚಿ ಬಿದ್ದ ಹ್ಯುಂಡೈ ಕ್ಷಮೆ ಕೇಳಿ ಭಾರತದ ಸೌರ್ವಭೌಮಕ್ಕೆ ಧಕ್ಕೆಯಾಗಂತೆ ನೋಡಿಕೊಳ್ಳುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಇದೇ ಕಳೆದ ವರ್ಷ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿ ಟ್ವೀಟ್ ಮಾಡಿದ್ದ ಕೆಎಫ್‌ಸಿ(KFC) ವರ್ಷದ ಬಳಿಕ ಭಾರತೀಯರಲ್ಲಿ ಕ್ಷಮೆ ಯಾಚಿಸಿದೆ. ಪ್ರತ್ಯೇಕ ಕಾಶ್ಮೀರ ಹೋರಾಟ ಬೆಂಬಲಿಸಿ 202ರ ಫೆಬ್ರವರಿ 5 ರಂದು ಟ್ವೀಟ್ ಮಾಡಿದ್ದ KFC ಇದೀಗ ಬಾಯ್‌ಕಾಟ್ ಅಭಿಯಾನದಿಂದ ಎಚ್ಚೆತ್ತುಕೊಂಡು ಕ್ಷಮೆ(Apology) ಕೇಳಿದೆ.
ಟ್ವಿಟರ್ ಮೂಲಕ ಕೆಎಫ್‌ಸಿ ಭಾರತೀಯರಲ್ಲಿ(India) ಕ್ಷಮೆ ಯಾಚಿಸಿದೆ. ದೇಶದ ಹೊರಗಿನ KFC ಸಾಮಾಜಿಕ ಮಾಧ್ಯಮ ಖಾತೆ ಮಾಡಿರುವ ಪೋಸ್ಟ್‌ಗೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ. ಭಾರತವನ್ನು ಅತ್ಯಂತ ಗೌರವಿಸುತ್ತೇವೆ. ಎಲ್ಲಾ ಭಾರತೀಯರಿಗೆ ಹೆಮ್ಮೆಯಿಂದೆ ಸೇವೆ ಸಲ್ಲಿಸಿರುವ ಬದ್ಧತೆ ಮುಂದುವರಿಯಲಿದೆ ಎಂದು ಭಾರತದ KFC ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕ್ಷಮೆ ಹೇಳಿದೆ.
2021ರ ಫೆಬ್ರವರಿ 5 ರಂದು ಪಾಕಿಸ್ತಾನ KFC ಕಾಶ್ಮೀರ ಪ್ರತ್ಯೇಕಿಸುವ ಕುರಿತು ಟ್ವೀಟ್ ಮಾಡಿತ್ತು. ಆದರೆ 2022ರ ಫೆೆಬ್ರವರಿ 5 ರಂದು ಪಾಕಿಸ್ತಾನ ಹ್ಯುಂಡೈ ಮಾಡಿದ ಕಾಶ್ಮೀರ ಸ್ವತಂತ್ರ ಟ್ವೀಟ್‌ನಿಂದ ಇದೀಗ KFCಗೆ ಸಂಕಷ್ಟ ಎದುರಾಗಿದೆ. ಕಳೆದೊಂದು ವರ್ಷ ಬಚಾವ್ ಆಗಿದ್ದ ಕೆಎಪ್‌ಸಿ ಇದೀಗ ಬಹಿಷ್ಕಾರ ಅಭಿಯಾನದ ಬೆಂಕಿಗೆ ತುತ್ತಾಗಿದೆ. ಹೀಗಾಗಿ ಒಂದು ವರ್ಷದ ಬಳಿಕ ಇದೀಗ KFC ಕ್ಷಮೆ ಯಾಚಿಸುವ ಪರಿಸ್ಥಿತಿ ಎದುರಾಗಿದೆ. ಈ ಮೂಲಕ ಭಾರತೀಯರ ಆಕ್ರೋಶವನ್ನು ತಣಿಸುವ ಯತ್ನ ಮಾಡಿದೆ.