* ಕೆನಡಾದಲ್ಲಿ ಕೈ ಮಮೀರಿದ ಪರಿಸ್ಥಿತಿ
* ಒಟ್ಟಾವಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
* ಕಡ್ಡಾಯ ಲಸಿಕಾ ಅಭಿಯಾನಕ್ಕೆ ವ್ಯಾಪಕ ವಿರೋಧ
ಒಟ್ಟಾವಾ (ಫೆ. 08) ಒಂದು ಕಡೆ ಕೊರೋನಾ (Coronavirus) ನಿಯಂತ್ರಣಕ್ಕೆ ನಿಯಮಗಳು. ಲಸಿಕೆ(Vaccine), ಲಾಕ್ ಡೌನ್ (Lockdown) ಮಾರ್ಗೋಪಾಯಗಳನ್ನು ಪಾಲನೆ ಮಾಡಬೇಕಾದ ಪರಿಸ್ಥಿತಿಯೇ ಇದೆ. ಆದೆ ಕೆನಡಾದಲ್ಲಿ)Canada) ಕೋವಿಡ್ ಲಸಿಕಾ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜಧಾನಿ ಒಟ್ಟಾವಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋದ ಪರಿಣಾಮ ಅನಿವಾರ್ಯವಾಗಿ ಇಂಥ ಕ್ರಮ ತೆಗೆದುಕೊಂಡಿದ್ದೇವೆ ಎಂದು ಮೇಯರ್ ಜಿಮ್ ವ್ಯಾಟ್ಸನ್ ಹೇಳಿದ್ದಾರೆ. ಕೆನಡಾ ಸರ್ಕಾರ ಕೋವಿಡ್ ಲಸಿಕೆ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ದೇಶದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಒಟ್ಟಾವಾಗೆ ಕಾಲಿಟ್ಟ ಪ್ರತಿಭಟನಾಕಾರರು ವಾಹನಗಳನ್ನು ಪ್ರಮುಖ ಬೀದಿಗಳಲ್ಲಿ ನಿಲ್ಲಿಸಿ ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
undefined
ಪ್ರತಿಭಟನಾಕಾರರು ಒಟ್ಟಾವಾ ನಗರ ಪ್ರದೇಶದ ಜನವಸತಿ ಪ್ರದೇಶಗಳಿಗೂ ನುಗ್ಗಿದ್ದು, ಜನಜೀವನದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರತಿಭಟನಾಕಾರರ ಸಂಖ್ಯೆ ಪೊಲೀಸರ ಸಂಖ್ಯೆಗಿಂತ ಜಾಸ್ತಿ ಇದೆ. ಪೊಲೀಸರೇ ತಮ್ಮ ಭದ್ರತೆಯ ಆತಂಕ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
Corbevax Vaccine: 5 ಕೋಟಿ ಡೋಸ್ ಕೋರ್ಬೆವ್ಯಾಕ್ಸ್ ಲಸಿಕೆ ಕೇಂದ್ರದಿಂದ ಖರೀದಿ
ಟ್ರಕ್ ನಲ್ಲಿಯೇ ರಾಜಧಾನಿಗೆ ಕಾಲಿಟ್ಟಿರುವ ಪ್ರತಿಭಟನಾಕಾರರು ಇಡೀ ನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದಾರೆ. ಕಂಡ ಕಂಡಲ್ಲಿ ವಾಹನ ನಿಲ್ಲಿಸಿಕೊಂಡು ಹಾರ್ನ್ ಮಾಡುತ್ತಿದ್ದಾರೆ. ಇಡೀ ಒಟ್ಟಾವಾದ ದೈನಂದಿನ ಜೀವನ ಅಸ್ತವ್ಯಸ್ಥವಾಗಿದ್ದು ಪರಿಸ್ಥಿತಿ ಕೈ ಮೀರಿ ಹೋಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತವರ ಕುಟುಂಬವನ್ನು ಅಜ್ಞಾತ ಕಳುಹಿಸಲಾಗಿದ್ದು ಸದ್ಯ ಇರುವ ಪರಿಸ್ಥಿತಿ ನಿಯಂತ್ರಣವೇ ದೊಡ್ಡ ಸವಾಲಾಗಿದೆ.
ವಾರದಿಂದ ಇದೇ ಸ್ಥಿತಿ: ಕೆನಡಾದಲ್ಲಿ ಕೋವಿಡ್ ಲಸಿಕೆ ವಿರೋಧಿ ಅಭಿಯಾನದಲ್ಲಿ ಭಾಗವಹಿಸಿರುವ ಸಾವಿರಾರು ಪ್ರತಿಭಟನಾಕಾರರು ಸಂಸತ್ತಿನ ಎದುರು ಪ್ರತಿಭಟನೆ ಆರಂಭಿಸಿದ್ದರು., ಕೋವಿಡ್ ಲಸಿಕೆ ಕಡ್ಡಾಯ ಮತ್ತು ಸಾರ್ವಜನಿಕ ಆರೋಗ್ಯದ ಇತರೆ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಈ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಇದು ಹಿಂಸಾರೂಪ ಪಡೆವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡ್ಯು ಮತ್ತು ಅವರ ಕುಟುಂಬ ನಾಪತ್ತೆಯಾಗಿದ್ದು, ಗೌಪ್ಯ ಸ್ಥಳಕ್ಕೆ ಕಳುಹಿಸಿಕೊಡಲಾಗಿತ್ತು.
ದೇಶದ ನಾನಾ ಭಾಗಗಳಿಂದ ಕಾಲ್ನಡಿಗೆಯಲ್ಲಿ ಸಂಸತ್ತಿಗೆ ಬಂದ ಟ್ರಕ್ ಚಾಲಕರು ಸೇರಿದಂತೆ ಇತರೆ ಜನರು, ಕೋವಿಡ್ ನಿರ್ಬಂಧ ಕ್ರಮಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ.
ಬೆಂಗಳೂರಲ್ಲಿ ಕುಸಿದ ಕೇಸ್: ಬೆಂಗಳೂರಿನಲ್ಲಿ ಕೊರೋನಾ ಮತ್ತಷ್ಟು ಇಳಿಕೆಯಾಗಿದೆ. ಹತ್ತು ಹದಿನೈದು ದಿನಗಳ ಹಿಂದೆ 25-30 ಸಾವಿರದವರೆಗೆ ದೈನಂದಿನ ಪ್ರಕರಣ ಕಂಡಿದ್ದ ನಗರದಲ್ಲಿ ಭಾನುವಾರ ಕೇವಲ 3,822 ಪ್ರಕರಣ ಮಾತ್ರ ಪತ್ತೆಯಾಗಿದೆ. ಜನವರಿ ತಿಂಗಳ ಕೊನೆಯ ವಾರಕ್ಕೆ ಹೋಲಿಸಿದರೆ ಹೊಸ ಸೋಂಕಿನ ಪ್ರಕರಣದಲ್ಲಿ ಶೇಕಡ 90ರಷ್ಟು ಕಡಿಮೆಯಾಗಿದೆ.
ಸೋಂಕಿತರ ಪೈಕಿ 1,454 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 63 ಮಂದಿ ಐಸಿಯು ಸಹಿತ ವೆಂಟಿಲೇಟರ್, 280 ಮಂದಿ ಐಸಿಯು, 143 ಮಂದಿ ಆಮ್ಲಜನಕಯುಕ್ತ ಬೆಡ್ ಮತ್ತು 968 ಮಂದಿ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9,893 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 51,987 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಶೇ.9.74 ಪಾಸಿಟಿವಿಟಿ ದರ ವರದಿಯಾಗಿದೆ. ನಗರದಲ್ಲಿ ಕೋವಿಡ್ ಕ್ಲಸ್ಟರ್‌ಗಳ ಸಂಖ್ಯೆ ಕಡಿಮೆ ಆಗಿದೆ.