ಕಮಲಾ ಹ್ಯಾರೀಸ್ ಹೆಣ್ಣು ಮಕ್ಕಳಿಗೆ ಮಾರಕ: ಡೊನಾಲ್ಡ್ ಟ್ರಂಪ್

Suvarna News   | Asianet News
Published : Nov 04, 2020, 04:05 AM IST
ಕಮಲಾ ಹ್ಯಾರೀಸ್ ಹೆಣ್ಣು ಮಕ್ಕಳಿಗೆ ಮಾರಕ: ಡೊನಾಲ್ಡ್ ಟ್ರಂಪ್

ಸಾರಾಂಶ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸಿನಿಂದ ಸಾಗಿದೆ. ಮತ್ತೆ ಆಯ್ಕೆ ಬಯಸಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಚುನಾವಣಾ ಕಲಿಯಾಗಿದ್ದಾರೆ. ಪದೆ ಪದೇ ಭಾರತದ ಪ್ರಧಾನಿ ಮೋದಿ ಸ್ನೇಹವನ್ನು ಉಲ್ಲೇಖಿಸಿರುವ ಟ್ರಂಪ್, ಭಾರತೀಯ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಡೆಮೋಕ್ರಾಟಿಕ್ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿ ಭಾರತೀಯ ಸಂಜಾತೆ ಕಮಲಾ ಹ್ಯಾರೀಸ್ ಆಗಿರುವುದರಿಂದ ಭಾರತೀಯರ ಒಲವು ಯಾರೆಡೆಗೆ ಎಂಬುವುದು ಸ್ಪಷ್ಟವಾಗಿಲ್ಲ.

ವಾಷಿಂಗ್ಟನ್ (ನ.4): ಅಮೆರಿಕ ಬಿರುಸಿನ ಮತದಾನಕ್ಕೆ ಸಾಕ್ಷಿಯಾಗಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧೆಡೆ ಪ್ರಚಾರ ನಡೆಸಿ, ಅನೇಕ ಕಸರತ್ತುಗಳನ್ನು ಮುಂದವರಿಸಿದರು. ಎಲ್ಲೆಡೆ ಚುನಾವಣೆಯಂತೆ ಅಮೆರಿಕದ ಚುನಾವಣೆಯಲ್ಲಿಯೂ ಈ ಸಾರಿ ಆರೋಪ, ಪ್ರತ್ಯಾರೋಪಗಳು ಎಂದಿಗಿಂತ ತುಸು ಹೆಚ್ಚಾಗಿಯೇ ಇತ್ತು. 

ಅಮೆರಿಕ ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ ಅವರನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮೋಕ್ರಾಟಿಕ್ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಕಮಲಾ ಉಪಾಧ್ಯಕ್ಷರಾಗುತ್ತಾರೆ. ಅಕಸ್ಮಾತ್ ಮಧ್ಯದಲ್ಲಿ ಜೋ ಬೈಡನ್‌ಗೆ ಏನಾದರೂ ಆದಲ್ಲಿ, ಅಮೆರಿಕವನ್ನು ಕಮಲಾ ಅವರೇ ಮುನ್ನಡೆಸಬೇಕಾಗುತ್ತದೆ. ಆ ಮೂಲಕ ರಾಷ್ಟ್ರದ ಚುಕ್ಕಾಣಿ ಹಿಡಿಯಲಿರುವ ಮೊದಲ ಮಹಿಳೆಯಾಗುತ್ತಾರೆ. ಹಾಗದಲ್ಲಿ ಹೆಣ್ಣುಮಕ್ಕಳಿಗೆ ಮಾರಕವಾಗಲಿದೆ, ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ಇಂಥದ್ದೊಂದು ಹೇಳಿಕೆ ನೀಡುವ ಮೂಲಕ ಮತದಾರರನ್ನು ಸೆಳೆಯಲು ವಿಭಿನ್ನವಾಗಿ, ಹೊಸ ರೀತಿಯಲ್ಲಿ ಯತ್ನಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಸಾಮಾನ್ಯವಾಗಿ ಟ್ರಂಪ್ ಪ್ರತಿಯೊಂದೂ ಸಂದರ್ಶನ ಹಾಗೂ ಪ್ರಚಾರ ಭಾಷಣದಲ್ಲಿ ತಮ್ಮನ್ನು ಹೊಗಳಿಕೊಂಡಿದ್ದಲ್ಲದೇ, ಪ್ರತಿಪಕ್ಷವನ್ನು ಹೀಯಾಳಿಸುತ್ತಲೇ ಪ್ರಚಾರ ಕೈಗೊಂಡಿದ್ದರು. ಆದರೆ, ಈ ರೀತಿ ಅದರಲ್ಲಿಯೂ ಮಹಿಳಾ ಸೆನೇಟರ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದು ಇದೇ ಮೊದಲು. 2016ರಲ್ಲಿ ಅಲ್ಪ ಮತದಲ್ಲಿ ಗೆದ್ದಿದ್ದ ಟ್ರಂಪ್ ಈ ಬಾರಿ ಅತ್ಯಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಇನ್ನು ಮತದಾನ ಭರದಿಂದ ಸಾಗುತ್ತಿರುವಾಗಲೇ ಟ್ರಂಪ್ ತಾವೇ ಗೆದ್ದಿದ್ದಾಗಿ ಪರೋಕ್ಷವಾಗಿ ಘೋಷಿಸಿಕೊಂಡಿದ್ದಾರೆ.

ಗೆಲುವಿನ ಬಗ್ಗೆ ಮಾತನಾಡಲು ಜೋ ನಕಾರ:
ಆದರೆ, ಜೋ ಬೈಡನ್ ಚುನಾವಣೆ ಫಲಿತಾಂಶವೂ ಮುನ್ನ ಗೆಲುವಿನ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಚುನಾವಣೆಗೆ ಮತದಾರರು ತಮ್ಮ ಮತ ಚಲಾಯಿಸುವ ಮೂಲಕ ಅತ್ತುತ್ಯಮ ಪ್ರತಿಕ್ರಿಯೆ ತೋರಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2016ರ ಚುನಾವಣೆಯಲ್ಲಿ ಟ್ರಂಪ್ ಕೂದಲೆಳೆ ಅಂತರದಿಂದ ಗೆಲವು ಸಾಧಿಸಿದ ವಿಶ್ವದ ದೊಡ್ಡಣ್ಣ ಅಮೆರಿಕದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆಗ ಯಾರು ಚುನಾವಣಾ ಪ್ರಕ್ರಿಯೆಯಲ್ಲಿ ಯಾರು ಸಕ್ರಿಯವಾಗಿ ಭಾಗವಹಿಸಿ ಇರಲಿಲ್ಲವೋ, ಈ ಸಾರಿ ಅತ್ಯುತ್ಸಾಹದಿಂದ ಮತ ಚಲಾಯಿಸಿದ್ದು, ಟ್ರಂಪ್ ವಿರೋಧಿ ಅಲೆ ಅಮೆರಿಕದಲ್ಲಿ ಕೆಲಸ ಮಾಡಲಿದೆ, ಎಂದೂ ಹೇಳಲಾಗುತ್ತಿದೆ. 

ಅಮೆರಿಕ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲವು ರಾಜ್ಯಗಳಲ್ಲಿ ಬೈಡನ್ ಮುನ್ನಡೆ ಸಾಧಿಸಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಯಾರು ಅಧ್ಯಕ್ಷರಾಗುತ್ತಾರೆಂಬ ಸ್ಪಷ್ಟ ಮಾಹಿತಿ ಸಿಗಲಿದೆ. 

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯರಿಗೆ ಮಣೆ

ಭಾರತೀಯ ಸಂಜಾತೆ ಕಮಲಾ ಹ್ಯಾರೀಸ್ ಸಹ ನಮ್ಮ ದೇಶದ ಆಹಾರವಾದ ಇಡ್ಲಿ ಸಾಂಬಾರು ಹಾಗೂ ಟಿಕ್ಕಾ ಅಚ್ಚುಮೆಚ್ಚು ಹಾಗೂ ಭಾರತೀಯ ಪ್ರಜಾಪ್ರಭುತ್ವವನ್ನು ವ್ಯವಸ್ಥೆಯನ್ನು ಹಾಡಿ ಹೊಗಳುವ ಮೂಲಕ ಭಾರತೀಯ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ. 

ಅಮೆರಿಕ ಚುನಾವಣೆಯಲ್ಲಿ ಭಾರತೀಯ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಮೋದಿಯೊಂದಿಗಿನ ಸ್ನೇಹ ಹಾಗೂ ಚೀನಾದೊಂದಿನ ವೈರತ್ವದಿಂದ ಭಾರತೀಯರು ಈ ಸಾರಿ ಟ್ರಂಪ್ ಪರ ಎಂದು ಹೇಳಬಹುದಾದರೂ, ವೀಸಾ ಸಂಬಂಧ ಟ್ರಂಪ್ ನಿಲವು ಸದಾ ಅನ್ಯ ದೇಶೀಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರಲ್ಲಿ ಅನುಮಾನವೇ ಇಲ್ಲ. 

ಸೋಲು ಗೊತ್ತೇ ಇಲ್ಲವೆಂದ ಡೊನಾಲ್ಡ್ ಟ್ರಂಪ್

ಶಾಂತವಾಗಿ ನಡೆದ ಮತದಾನ:
ಶಾಂತವಾಗಿ ಸರತಿ ಸಾಲಿನಲ್ಲಿ ನಿಂತು ಲೈಬ್ರರಿ, ಶಾಲೆಗಳು ಹಾಗೂ ಇತರೆ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ ಅಮೆರಿಕನ್ನರು. ಕೋವಿಡ್ 19  ಅಮೆರಿಕವನ್ನು ಸಿಕ್ಕಾಪಟ್ಟೆಇನ್ನೂ ತೀವ್ರವಾಗಿ ಬಾಧಿಸುತ್ತಿದ್ದು, ಸಾಮಾನ್ಯವಾಗಿ ಎಲ್ಲ ಮತದಾರರು ಮಾಸ್ಕ್ ಧರಿಸಿದ್ದರು.  ತಮ್ಮ ಕರ್ತವ್ಯವನ್ನು ನಾಗರಿಕರು ನಿಷ್ಠೆಯಿಂದ ನಿಭಾಯಿಸಿದಂತೆ ಭಾಸವಾಗುತ್ತಿದೆ. 

ರಾಷ್ಟ್ರವನ್ನು ಬೆಂಬಡದೇ ಕಾಡುತ್ತಿರುವ ಕೊರೋನಾ ವೈರಸ್ ಹಾಗೂ ಇತ್ತೀಚೆಗೆ ದೇಶವನ್ನು ಕಾಡಿದ ಜನಾಂಗೀಯ ನಿಂದನೆ ಹಾಗೂ ಅದರಿಂದ ಸೃಷ್ಟಿಯಾದ ಉದ್ವಿಗ್ನತೆ ಅಧ್ಯಕ್ಷೀಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಅನುಮಾನವೇ ಇಲ್ಲ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!