ವೋಟಿಂಗ್ ಬಲು ಜೋರು, 'ಸೋಲು ಗೊತ್ತೆ ಇಲ್ಲ' ಎಂದ ಟ್ರಂಪ್!

By Suvarna NewsFirst Published Nov 4, 2020, 1:27 AM IST
Highlights

ಅಮೆರಿಕ ಅಧ್ಯಕ್ಷೀಯ ಚುನಾವಣೆ/ ಮತದಾನಕ್ಕೆ ಉತ್ಸಾಹ/ ಕೊರೋನಾ ಆತಂಕದ ನಡುವೆ ಚುನಾವಣೆ/ ನ್ಯೂಯಾರ್ಕ್ ನಲ್ಲಿ ಮತದಾನ ಆರಂಭ/ ಟ್ರಂಪ್ ಮತ್ತು ಬಿಡನ್ ನಡುವೆ ಹಣಾಹಣಿ/ ಭಾರತೀಯ ಮೂಲದವರಿಗೆ ಎಲ್ಲಿಲ್ಲದ ಪ್ರಾಮುಖ್ಯ

ವರ್ಜೀನಿಯಾ(ನ.04) ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತದಾದ ಬಿರುಸುಗೊಂಡಿದೆ. ಕೊರೋನಾ ಇದ್ದರೂ ಹಿಂದೆಂದಿಗಿಂತಲೂ ಉತ್ಸಾಹ ಮತದಾರರಲ್ಲಿ ಕಂಡುಬರುತ್ತಿದೆ.

ವರ್ಜೀನಿಯಾದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಜನತೆ ರಿಪಬ್ಲಿಕನ್ ಪಕ್ಷದ ಜತೆ ನಿಲ್ಲಲಿದ್ದಾರೆ ಎಂದಿದ್ದಾರೆ.

ಟ್ರಂಪ್ ಅಧ್ಯಕ್ಷಗಿರಿ ಬಲಿ ಪಡೆದುಕೊಳ್ಳುತ್ತಾ ಕೊರೋನಾ?

ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಕೊರೋನಾ ಆತಂಕದ ನಡುವೆಯೂ ಮತದಾನ ಪ್ರಗತಿಯಲ್ಲಿದೆ.   ಗೆಲ್ಲುವುದು ಬಹಳ ಸುಲಭ, ಆದರೆ ಸೋಲು ಯಾವಾಗಲೂ ನನ್ನ ಹತ್ತಿರವೂ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ. 

ಆರಂಭಿಕ ಮತದಾನದಲ್ಲಿ ಸುಮಾರುರು 100 ಮಿಲಿಯನ್ ಅಮೆರಿಕನ್ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.  ಈ ಬಾರಿ ಒಟ್ಟು 239 ಮಿಲಿಯನ್ ಅಮೆರಿಕನ್ನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. 

 

 

Not thinking about concession speech or acceptance speech yet. Hopefully, we'll be doing only one of those two. Winning is easy, losing is never easy - not for me, it's not. When you see rallies, there's tremendous love going on in this country, tremendous unity: US President https://t.co/tDR2eh15aU

— ANI (@ANI)
click me!