Latest Videos

ಡಾಗ್‌ಮೀಮ್‌ನಿಂದಲೇ ಪ್ರಸಿದ್ಧವಾಗಿದ್ದ ಶ್ವಾನ ಕಬೋಸು ನಿಧನ!

By Santosh NaikFirst Published May 24, 2024, 3:25 PM IST
Highlights

Kabosu no more:  Dogecoin ಮತ್ತು ಇತರ ಜನಪ್ರಿಯ ಮೀಮ್‌ಗಳ ಹಿಂದಿದ್ದ ವಿಶ್ವಪ್ರಸಿದ್ಧ ನಾಯಿ Kabosu ಶುಕ್ರವಾರ ನಿಧನವಾಯಿತು. 17 ವರ್ಷದ ನಾಯಿಯ ಸಾವಿನ ಸುದ್ದಿಯನ್ನು ಆಕೆಯ ಮಾಲೀಕರು ಬ್ಲಾಗ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
 

ನವದೆಹಲಿ (ಮೇ.24): ಡಾಗ್‌ಕಾಯ್ನ್‌ (Dogecoin) ಮತ್ತು ಹಲವಾರು ಇತರ ಮೀಮ್‌ ಟೋಕನ್‌ಗಳ ಹಿಂದಿದ್ದ ಜನಪ್ರಿಯ ನಾಯಿ ಕಬುಸೋ ಶುಕ್ರವಾರ ನಿಧನವಾಯಿತು. ಆಕೆಯ ಮಾಲೀಕ ಅಟ್ಸುಕೊ ಸಾಟೊ ಅವರು 17 ವರ್ಷದ ನಾಯಿಯ ಸಾವಿನ ಸುದ್ದಿಯನ್ನು ಬ್ಲಾಗ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಶಿಬಾ ಇನು ಎಂದು ಹೆಸರಿಸಲಾದ ಈ ನಾಯಿಯು "ಡಾಗ್" ಮೀಮ್‌ಅನ್ನು ರಚಿಸುವ ಮೂಲಕ ಇಂಟರ್ನೆಟ್ ಸೆನ್ಸೇಷನ್‌ ಎನಿಸಿಕೊಂಡಿತ್ತು. "ನಾನು ಅವಳನ್ನು ಮುದ್ದಿಸುತ್ತಿರುವಾಗಾಲೇ, ಅವಳು ನಿದ್ರಿಸುತ್ತಿರುವಂತೆ ಸದ್ದಿಲ್ಲದೆ ತೀರಿಹೋಗಿದ್ದಾಳೆ" ಎಂದು ಅಟ್ಸುಕೊ ಸಾಟೊ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಡಾಗ್‌ ಮೀಮ್‌ನ ಫೇಸ್‌ ಆದ ಈ ಶ್ವಾನಕ್ಕೆ ಕಬುಸೋ ಎಂದು ಅಭಿಮಾನಿಗಳೇ ಹೆಸರು ಇಟ್ಟಿದ್ದರು. ಈ ವೇಳೆ ಎಲ್ಲಾ ಅಭಿಮಾನಿಗಳಿಗೂ ಅಟ್ಸುಕೊ ಥ್ಯಾಂಕ್ಸ್‌ ಎಂದಿದ್ದಾರೆ.

ಮೇ 26 ರ ಭಾನುವಾರದಂದು ಕಬೋ-ಚಾನ್‌ಗೆ ವಿದಾಯ ಪಾರ್ಟಿ ನಡೆಯಲಿದೆ ಎಂದು ನಾಯಿ ಮಾಲೀಕರು ಹೇಳಿದ್ದಾರೆ. ಪಾರ್ಟಿಯು ಜಪಾನ್‌ನ ನಾರಾ ನಗರದಲ್ಲಿ ಮಧ್ಯಾಹ್ನ 1 ರಿಂದ 4 ರವರೆಗೆ ನಡೆಯಲಿದೆ. ಮಾಧ್ಯಮ ವರದಿಗಳ ಪ್ರಕಾರ, ಕಬೋಸು 2022 ರಲ್ಲಿ ಕೋಲಾಂಜಿಯೋಹೆಪಟೈಟಿಸ್ ಮತ್ತು ದೀರ್ಘಕಾಲದ ಲಿಂಫೋಮಾ ಲ್ಯುಕೇಮಿಯಾದಿಂದ ಬಳಲುತ್ತಿತ್ತು.
ಮಾರಣಾಂತಿಕ ಕಾಯಿಲೆಯ ನಡುವೆಯೂ ಕಬೋಸು ತನ್ನ ಮಾಲೀಕ ಅಟ್ಸುಕೊ ಸಾಟೊ ಅವರ ಮಡಿಲಲ್ಲಿ ನಿದ್ರೆಯಲ್ಲಿ 'ಸದ್ದಿಲ್ಲದೆ' ನಿಧನವಾಗಿದೆ. ಅವಳ ಸಾವಿನ ಹಿಂದಿನ ರಾತ್ರಿ, ಅವಳು "ಅನ್ನವನ್ನು ತಿಂದಿದ್ದಳು ಮತ್ತು ಎಂದಿನಂತೆ ಸಾಕಷ್ಟು ನೀರು ಕುಡಿದಿದ್ದಳಯ" ಎಂದು ಸಾಟೊ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಸ್ಯಾಟೋ ತನ್ನ ಸಾಕುಪ್ರಾಣಿಗಳನ್ನು "ವಿಶ್ವದ ಅತ್ಯಂತ ಸಂತೋಷದ ನಾಯಿ" ಎಂದು ವ್ಯಾಖ್ಯಾನ ಮಾಡಿದರು. ಆಕೆ ಇದ್ದ ಕಾರಣಕ್ಕೆ ನಾನೂ ಕೂಡ ಪ್ರಪಂಚದ ಅತ್ಯಂತ ಸಂತೋಷದ ವ್ಯಕ್ತಿಯಾಗಿದ್ದೆ ಎಂದು ಹೇಳಿದ್ದಾರೆ.

ಕಬೋಸು ಯಾರು?: ಕಬೋಸು ಎಂಬುದು ಶಿಬಾ ಇನು ನಾಯಿಯಾಗಿದ್ದು, ವೈರಲ್ ಫೋಟೋ ಜೊತೆ ಖ್ಯಾತಿಗೆ ಏರಿತು, ಇದು ಡಾಗ್‌ ಮೀಮ್‌ನ ಮೂಲಕ್ಕೆ ಕಾರಣವಾಯಿತು.  ಇದು ಮಾತ್ರವಲ್ಲದೆ, ವೈರಲ್ ಫೋಟೋವು ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ತರಂಗಗಳನ್ನು ಹುಟ್ಟುಉಹಾಕಿತು.. ಇದರಿಂದಾಗಿಯೇ ಡಾಗ್‌ಕಾಯಿನ್, ಶಿಬಾ ಇನು ಮತ್ತು ಫ್ಲೋಕಿಯಂತಹ ಕ್ರಿಪ್ಟೋಕರೆನ್ಸಿಗಳ ರಚನೆಗೆ ಕಾರಣವಾಯಿತು. ಅಟ್ಸುಕೊ ಸಾಟೊ 2008 ರಲ್ಲಿ ಕಬೋಸುವನ್ನು ದತ್ತು ಪಡೆದಿದ್ದರು. ಪಪ್ಪಿ ಮಿಲ್‌ ಮುಚ್ಚಿದ ಬಳಿಕ ಇದನ್ನು ಪ್ರಾಣಿಗಳ ಆಶ್ರಯ ತಾಣಕ್ಕೆ ಕಳಿಸಲಾಗಿತ್ತು. ಅಲ್ಲಿಂದ ಸಾಟೋ ಇದನ್ನು ದತ್ತು ಪಡೆದಿದ್ದರು.

Viral Video: 1 ನಾಯಿಗೆ ಸಾವಿರ, ಹಿಡಿದವರಿಗೆ 50 ರೂಪಾಯಿ, ಮಾಂಸಕ್ಕಾಗಿ 40ಕ್ಕೂ ಅಧಿಕ ಬೀದಿನಾಯಿಗಳ ಕಳ್ಳಸಾಗಣೆ!

ಡಾಗ್‌ಮೀನ್‌ ವೈರಲ್ ಚಿತ್ರವು NFT ಡಿಜಿಟಲ್ ಕಲಾಕೃತಿಯಾಗಿ ಮಾರ್ಪಟ್ಟಿತು ಮತ್ತು $4 ಮಿಲಿಯನ್‌ಗೆ ಮಾರಾಟವಾಯಿತು. ಈ ಚಿತ್ರವು Dogecoin ಗೆ ಸ್ಫೂರ್ತಿಯಾಯಿತು, ಇದು ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ತಮಾಷೆಯಾಗಿ ಪ್ರಾರಂಭವಾದ ಕ್ರಿಪ್ಟೋಕರೆನ್ಸಿಯಾಗಿದ್ದು, ಇದರ ಮೌಲ್ಯವೀಗ $23 ಶತಕೋಟಿ ಮಾರುಕಟ್ಟೆ ಬಂಡವಾಳದೊಂದಿಗೆ ಎಂಟನೇ-ಅತ್ಯಂತ ಮೌಲ್ಯಯುತ ಕ್ರಿಪ್ಟೋಕರೆನ್ಸಿಯಾಗಿ ನಿಂತಿದೆ.

ಸೇನೆಯಿಂದ ನಿವೃತ್ತಿಯಾದ ಮೇರು ನಾಯಿಗೆ ಭಾವುಕ ಬೀಳ್ಕೊಡುಗೆ, ಎಸಿ ಕೋಚ್‌ನಲ್ಲಿ ತವರಿಗೆ ಪ್ರಯಾಣ!

click me!