
ಬೀಜಿಂಗ್/ತೈಪೆ: ತೈವಾನ್‌ನ ನೂತನ ಅಧ್ಯಕ್ಷ ಲಾಯ್ ಚಿಂಗ್ ಟೆ ಚೀನಿ ಸಾರ್ವಭೌಮತ್ವದ ಕುರಿತು ಆಕ್ಷೇಪವೆತ್ತಿ ಸ್ವಾತಂತ್ರ್ಯದ ಕುರಿತು ಮಾತನಾಡಿದ ಬೆನ್ನಲ್ಲೇ ಸಿಟ್ಟಿಗೆದ್ದಿರುವ ಕಮ್ಯುನಿಸ್ಟ್ ಸರ್ಕಾರ, ತೈವಾನ್ ಸುತ್ತಲೂ ಭಾರೀ ಪ್ರಮಾನದ ಸಮರಾಭ್ಯಾಸದ ಮೂಲಕ ದಿಗ್ಬಂಧನ ವಿಧಿಸಿದೆ. ಅಲ್ಲದೆ ಸ್ವಾತಂತ್ರ್ಯದ ಮಾತನಾಡುವವರಿಗೆ ರಕ್ತಪಾತದ ಎಚ್ಚರಿಕೆಯನ್ನೂ ರವಾನಿಸಿದೆ.
ಚೀನಾ ಸೇನೆ ತನ್ನ ಭೂ, ವಾಯು, ನೌಕಾಸೇನೆಯನ್ನು ಒಟ್ಟುಗೂಡಿಸಿ ತೈವಾನ್ ಜಲಸಂಧಿ, ತೈವಾನ್ ಉತ್ತರ, ದಕ್ಷಿಣ ಮತ್ತು ಪೂರ್ವ ಪ್ರದೇಶದ ಸಮುದ್ರದಲ್ಲಿ ಜಾಯಿಂಟ್ ಸ್ವಾರ್ಡ್ 2024-ಎ ಎಂಬ ಹೆಸರಿನಲ್ಲಿ ಸಮರಾಭ್ಯಾಸ ಆರಂಭಿಸಿದೆ. ಇದನ್ನು ಚೀನಾ ವಿದೇಶಾಂಗ ಮಂತ್ರಿಯು ‘ಶಿಕ್ಷಾ ಸಮರಾಭ್ಯಾಸ’ ಎಂಬುದಾಗಿ ಬಣ್ಣಿಸಿದ್ದು, ತಮ್ಮನ್ನು ಎದುರು ಹಾಕಿಕೊಂಡಲ್ಲಿ ತೈವಾನ್ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ತೋರಿಸುವ ಸಲುವಾಗಿ ಈ ಸಮರಾಭ್ಯಾಸವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
2 ಕಾಲು, 1 ಕೈ ಇಲ್ಲದ ಗೋವಾ ಯುವಕ ಎವರೆಸ್ಟ್ ಬೇಸ್‌ಕ್ಯಾಂಪ್ ಏರಿ ದಾಖಲೆ!
ತೈವಾನ್ ಪ್ರತಿರೋಧ: ಸಮರಾಭ್ಯಾಸದ ಹೆಸರಿನಲ್ಲಿ ತನ್ನ ದೇಶದ ಕಡೆಗೆ ಬರುತ್ತಿದ್ದ ಚೀನಿ ಜೆಟ್‌ಗಳನ್ನು ನಿಗ್ರಹಿಸಲು ಹರಸಾಹಸ ಪಟ್ಟಿದ್ದು, ತನ್ನ ಕಡೆಯಿಂದಲೂ ಸಮರಾಭ್ಯಾಸದ ಹೆಸರಿನಲ್ಲಿ ಮಿಸೈಲ್‌ಗಳನ್ನು ಹಾರಿಸುವ ಮೂಲಕ ಪ್ರತಿರೋಧ ಒಡ್ಡಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ