ನಾನು ಅಧ್ಯಕ್ಷನಾಗಿದ್ದರೆ ಕಾಬೂಲ್ ದಾಳಿ ನಡೆಯುತ್ತಿರಲಿಲ್ಲ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಟ್ರಂಪ್

By Suvarna News  |  First Published Aug 27, 2021, 9:14 PM IST
  • ಜೋ ಬೈಡನ್ ನಿರ್ಧಾರವನ್ನು ಮೊದಲಿನಿಂದಲೇ ವಿರೋಧಿಸಿದ್ದ ಟ್ರಂಪ್
  • ನಾನು ಅಧ್ಯಕ್ಷನಾಗಿದ್ದರೆ, ಕಾಬೂಲ್ ದಾಳಿಗೆ ಅವಕಾಶ ನೀಡುತ್ತಿರಲಿಲ್ಲ
  • ಜೋ ಬೈಡೆನ್ ವಿರುದ್ಧ ಡೋನಾಲ್ಡ್ ಟ್ರಂಪ್ ಆಕ್ರೋಶ
  • ಸೇನೆ ಹಿಂತೆಗೆತ ವಿರುದ್ಧ ಅಸಮಾಧಾನ ಹೊರಹಾಕಿದ್ದ ಟ್ರಂಪ್

ನ್ಯೂಯಾರ್ಕ್(ಆ.27): ಆಫ್ಘಾನಿಸ್ತಾನದಿಂದ ಸೇನೆ ಹಿಂತೆಗೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧಾರವನ್ನು ವಿರೋಧಿಸಿದ್ದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇದೀಗ ಕಾಬೂಲ್ ಮೇಲೆ ಬಾಂಬ್ ದಾಳಿಗೆ ಬೈಡನ್ ಅಸಮರ್ಥ ನಡೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಶ್ಮೀರ ಕೈವಶ ಮಾಡಲು ತಾಲಿಬಾನ್ ನಾಯಕರ ಭೇಟಿಯಾದ ಜೈಶ್ ಇ ಮೊಹಮ್ಮದ್ ಮುಖ್ಯಸ್ಥ!

Latest Videos

undefined

ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 13 ಮಂದಿ ಅಮೆರಿಕ ಸೈನಿಕರು ಸಾವನ್ನಪ್ಪಿದ್ದಾರೆ. ನಾನು ಅಧ್ಯಕ್ಷನಾಗಿದ್ದರೆ ಕಾಬೂಲ್ ಮೇಲಿನ ದಾಳಿ ನಡೆಯುತ್ತಿರಲಿಲ್ಲ ಎಂದು ಡೋನಾಲ್ಡ್ ಟ್ರಂಪ್  ಹೇಳಿದ್ದಾರೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಮೆರಿಕ ಸೈನಿಕರ ಕುಟುಂಬಕ್ಕೆ ಸಂತಾಪ ಸೂಚಿಸಿದ ಡೋನಾಲ್ಡ್ ಟ್ರಂಪ್, ಕಠಿಣ ಪರಿಸ್ಥಿತಿಯಲ್ಲಿ ಅಮೆರಿಕ ಸೈನಿಕರು ತಮ್ಮವರನ್ನು ಸ್ಥಳಾಂತರ ಮಾಡಲು ಮುಂದಾಗಿದ್ದರು. ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಬಾಂಬ್ ಸ್ಫೋಟಿಸಲಾಗಿದೆ. ದೇಶದ ಪ್ರಜೆಗಳ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಸೈನಿಕರು ಅಜರಾಮರ ಎಂದು ಟ್ರಂಪ್ ಹೇಳಿದ್ದಾರೆ.

ಭಾರತಕ್ಕೆ ಆಗಮಿಸುವ ಆಫ್ಘಾನಿಸ್ತಾನ ನಾಗರೀಕರಿಗೆ 6 ತಿಂಗಳ ವೀಸಾ; ಕೇಂದ್ರ ಸರ್ಕಾರ!

ಒಂದರ ಮೇಲೊಂದರಂತೆ ಜೋ ಬೈಡನ್ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ. ನಾನು ಅಧ್ಯಕ್ಷನಾಗಿದ್ದರೆ ಅಮೆರಿಕ ಸೈನಿಕರ ಪ್ರಾಣತ್ಯಾಗ ಆಗುತ್ತಿರಲಿಲ್ಲ. ಇಷ್ಟೇ ಅಲ್ಲ ಕಾಬೂಲ್ ಮೇಲೆ ದಾಳಿ ನಡೆಯಲು ಅವಕಾಶವೇ ಇರುತ್ತಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಹೇಳಿಕೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಬೂಲ್ ಮೇಲಿನ ದಾಳಿ ಹಿಂದಿನ ರೂವಾರಿ ಯಾರು ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. IS-k ಉಗ್ರರು ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಇತ್ತ ಜೋ ಬೈಡನ್ ತಾಲಿಬಾನ್‌ಗೆ ಕ್ಲೀನ್ ಚಿಟ್ ನೀಡಿದ್ದಾರೆ. ಇದರ ನಡುವೆ ಈ ದಾಳಿಗೆ ಅವಕಾಶ ಇರಲಿಲ್ಲ ಅನ್ನೋ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. 
 

click me!