3 ದಿನ ಅಮೆರಿಕದಲ್ಲಿ ನಾವಿಕ ವಿಶ್ವ ಕನ್ನಡ ಸಮ್ಮೇಳನ

Kannadaprabha News   | Asianet News
Published : Aug 27, 2021, 07:52 AM IST
3 ದಿನ ಅಮೆರಿಕದಲ್ಲಿ ನಾವಿಕ ವಿಶ್ವ ಕನ್ನಡ ಸಮ್ಮೇಳನ

ಸಾರಾಂಶ

ವಿಶ್ವಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಸತತ 3 ದಿನಗಳ ಕಾಲ ರಂಜಿಸಲು ನಾವಿಕ 6ನೇ ವಿಶ್ವ ಕನ್ನಡ ಸಮಾವೇಶ  ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಇಂದಿನಿಂದ 29ರ ವರೆಗೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮ 

ಫೀನಿಕ್ಸ್‌ (ಅಮೆರಿಕ): ವಿಶ್ವಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಸತತ 3 ದಿನಗಳ ಕಾಲ ರಂಜಿಸಲು ನಾವಿಕ 6ನೇ ವಿಶ್ವ ಕನ್ನಡ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಇಂದಿನಿಂದ 29ರ ವರೆಗೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಮೆರಿಕದ ಕರಾವಳಿ ಕಾಲಮಾನ ಸಂಜೆ 6ಕ್ಕೆ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷ ವಲ್ಲೀಶ ಶಾಸ್ತಿ್ರ ಮಾರ್ಗದರ್ಶನದಲ್ಲಿ 200ಕ್ಕೂ ಹೆಚ್ಚು ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ದೇಶಗಳ 80ಕ್ಕೂ ಹೆಚ್ಚು ಕನ್ನಡ ಸಂಘಗಳು, ಸುಮಾರು 175 ಕಲಾವಿದರು, ತಂತ್ರಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶವು ಕನ್ನಡ ಸಾಹಿತ್ಯ, ಸಂಸ್ಕೃತಿ, ನಾಟಕಗಳು, ಕಲಾಪ್ರದರ್ಶನಗಳು, ಶಾಸ್ತ್ರೀಯ ಮತ್ತು ಫ್ಯೂಷನ್‌ ಸಂಗೀತ, ಕನ್ನಡ ಚಲನಚಿತ್ರ ಗೀತೆಗಳು, ಕಥಾ ಸ್ಪರ್ಧೆ, ಕವನ ಸ್ಪರ್ಧೆಗಳಿಗೆ ಸಾಕ್ಷಿಯಾಗಲಿದೆ.

ನಾವಿಕ ಸಮ್ಮೇಳನಕ್ಕೆ ಸಕಲ ಸಿದ್ಧತೆ, ಸಂಗೀತ, ನೃತ್ಯ, ಹಾಸ್ಯದ ಹೂರಣ!

ಕನ್ನಡದ ಖ್ಯಾತ ಗಾಯಕ ಹೇಮಂತ್‌, ಕ್ಲಾಸಿಕ್‌ ಫ್ಯೂಷನ್‌ ಸಂಗೀತಗಾರ ಮಹೇಶ್‌ ರಾಘವನ್‌, ಪಂಪ ನೃತ್ಯ ಅಕಾಡೆಮಿ ನಿರ್ದೇಶಕಿ ನಿರ್ಮಲಾ ಮಾಧವ್‌ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಮಾಸ್ಟರ್‌ ರಾಹುಲ್‌ ವೆಲ್ಲಾಲ್‌, ಹಫೀಜ್‌ ಖಾನ್‌ ಮತ್ತು ರಯೀಸ್‌ ಖಾನ್‌ ಕಲಾ ಪ್ರದರ್ಶನಗಳನ್ನು ನೀಡಲಿದ್ದಾರೆ.

ಈಗಾಗಲೇ ನಡೆದಿರುವ ನಾಟಕಗಳು, ಛಾಯಾಗ್ರಹಣ ಸ್ಪರ್ಧೆ, ಕನ್ನಡ ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ, ಅಡುಗೆ, ಹಾಡುಗಾರಿಕೆ ಸ್ಪರ್ಧಾ ವಿಜೇತರ ವಿಡಿಯೋ, ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌, ಸುಜಿತ್‌ ಸೋಮಸುಂದರ್‌, ಶಾಂತಾ ರಂಗ ಸ್ವಾಮಿ ಮತ್ತು ಅಮೆರಿಕದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸಿಂಧು ಶ್ರೀಹರ್ಷ ಅವರ ಸಂದರ್ಶನ ಪ್ರಸಾರವಾಗಲಿದೆ.

ನಾವಿಕ ಸಮಾವೇಶವನ್ನು ವೀಕ್ಷಿಸಲು  https://www.nvks21.com/ ನಲ್ಲಿ ನೋಂದಾಯಿಸಿಕೊಳ್ಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!