ಪತ್ರಕರ್ತ ಟ್ವೀಟ್ ಮೂಲಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವ್ಯಂಗ್ಯವಾಡಿದ್ದ. ಒಮ್ಮೆ ಕುಳ್ಳಿ ಎಂದರೆ ಮತ್ತೊಮ್ಮೆ , ಫ್ಯಾಸಿಸ್ಟ್ ನಾಯಕನ ಜೊತೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದ ಪತ್ರಕರ್ತನಿಗೆ ಬರೋಬ್ಬರಿ 5.7 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ರೋಮ್(ಜು.18) ಪ್ರಧಾನಿ, ಸಚಿವರು, ಮುಖ್ಯಮಂತ್ರಿ ಸೇರಿದಂತೆ ಸಾರ್ವಜನಿಕ ಜೀವನದಲ್ಲಿರುವ ನಾಯಕರು ಭಾರತದಲ್ಲಿ ಟೀಕೆಗೆ, ವ್ಯಂಗ್ಯ, ಅಪಹಾಸ್ಯ, ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಹದ್ದು ಮೀರಿದಾಗ ಅಂದರೆ ಸಮುದಾಯ, ಜನಾಂಗೀಯ ನಿಂದನೆ, ಜಾತಿ ಸೇರಿದಂತೆ ಕೆಲ ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ವಿದೇಶದಲ್ಲಿ ಹಾಗಲ್ಲ, ಸುಖಾಸುಮ್ಮನೆ ಟೀಕಿಸಿದರೆ, ಗೇಲಿ ಮಾಡಿದರೂ ಶಿಕ್ಷೆ ತಪ್ಪಿದ್ದಲ್ಲ. ಇದೀಗ ಇಟಲಿ ಪ್ರಧಾನಿಯನ್ನು ಗೇಲಿ ಮಾಡಿದ ಪತ್ರಕರ್ತನಿಗೆ ಒಟ್ಟು 5.7 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.
ಪತ್ರಕರ್ತ ಗಿಯುಲಿಯಾ ಕೊರ್ಟೆಸೆ ಟ್ವೀಟ್ ಮೂಲಕ ವ್ಯಂಗ್ಯವಾಡುವುದು, ಅಣಕಿಸುವುದು ಮಾಡಿ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. 2021ರಿಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಟಾರ್ಗೆಟ್ ಮಾಡಿದ್ದ ಗಿಯುಲಿಯಾ ಎರಡು ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
undefined
ಟ್ರೆಂಡ್ ಆಗ್ತಿದೆ #Melodi; ಮೆಲೋನಿ-ಮೋದಿ ಸೆಲ್ಫಿಗೆ ನೆಟ್ಟಿಗರು ಕಮೆಂಟ್ ಏನು?
ಇತ್ತೀಚೆಗೆ ಪತ್ರಕರ್ತ ಗಿಯುಲಿಯಾ, ಟ್ವೀಟ್ ಮೂಲಕ ಜಾರ್ಜಿಯಾ ಮೆಲೋನಿಯನ್ನು ಟೀಕಿಸಿದ್ರು. ಮೆಲೋನಿಯನ್ನು ಫ್ಯಾಸಿಸ್ಟ್ ನಾಯಕ ಬೆನಿಟೋ ಮುಸೋಲಿನ್‌ಗೆ ಹೋಲಿಕೆ ಮಾಡಿದ್ದರು. ಮೆಲೋನಿ ಹಾಗೂ ಬೆನಿಟೋ ಮುಸೋಲಿನ್ ಫೋಟೋವನ್ನು ಎಡಿಟ್ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ವಿರುದ್ದ ಕೋರ್ಟ್ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಮೆಲೋನಿ ಪಾರ್ಟಿ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ವಿಚಾರಣೆ ನಡೆದ ಪತ್ರಕರ್ತನಿಗೆ 5,000 ಯೂರೋ( ಭಾರತೀಯ ರೂಪಾಯಿಗಳಲ್ಲಿ 4,57,215 ರೂಪಾಯಿ) ದಂಡ ವಿಧಿಸಲಾಗಿದೆ.
2021ರಲ್ಲಿ ಇದೇ ಪತ್ರಕರ್ತ ಗಿಯುಲಿಯಾ ಮೆಲೋನಿ ಎತ್ತರವನ್ನು ಟೀಕಿಸಿ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದು ಮಾತ್ರವಲ್ಲ 1 ಲಕ್ಷ ರೂಪಾಯಿ ದಂಡಕ್ಕೆ ಗುರಿಯಾಗಿದ್ದರು. ಜಾರ್ಜಿಯಾ ಮೆಲೋನಿ ನನ್ನನ್ನು ಬೆದರಿಸಬೇಡ, ಅಷ್ಟಕ್ಕೂ ನೀನು ಕೇವಲ 4 ಫೀಟ್ ಎತ್ತರ. ನನಗೆ ನೀನು ಕಾಣುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಎತ್ತರವನ್ನು ಗೇಲಿ ಮಾಡಿದ ಕಾರಣಕ್ಕೆ ಕೋರ್ಟ್ 1,09,731 ರೂಪಾಯಿ ದಂಡ ವಿಧಿಸಲಾಗಿತ್ತು.
ಜಾರ್ಜಿಯಾ ಮೆಲೋನಿ ವಿರುದ್ದ ಈ ರೀತಿ ವ್ಯಂಗ್ಯ, ಗೇಲಿ ಹಾಗೂ ಷಡ್ಯಂತ್ರಗಳು ನೆಯುತ್ತಲೇ ಇದೆ. ಮಾರ್ಚ್ ತಿಂಗಳಲ್ಲಿ ಡೇಫ್ ಫೇಕ್ ತಂತ್ರಜ್ಞಾನದ ಮೂಲಕ ಜಾರ್ಜಿಯಾ ಮೆಲೋನಿ ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ ಹರಿಬಿಡಲಾಗಿತ್ತು. ಈ ವಿಡಿಯೋ ಬಾರಿ ವೈರಲ್ ಆಗಿತ್ತು. ಇದರ ವಿರುದ್ಧ ದೂರು ದಾಖಲಿಸಿದ್ದ ಮೆಲೋನಿ 85 ಲಕ್ಷ ರೂಪಾಯಿ ಮಾನನಷ್ಟ ಪರಿಹಾರ ಆಗ್ರಹಿಸಿದ್ದರು. ಈ ಪ್ರಕರಣ ಸಂಬಂಧ ಇಬ್ಬರ ವಿರುದ್ದ ಕೇಸು ದಾಖಲಾಗಿದೆ.
ಜಿ7 ಮೀಟ್‌ಲ್ಲಿ ಪರಸ್ಪರ ತಬ್ಬಿ ಕಿಸ್ ಮಾಡಿದ ರಿಷಿ ಸುನಕ್ & ಜಾರ್ಜಿಯಾ ಮೆಲೋನಿ : ವೀಡಿಯೋ ವೈರಲ್