Asianet Suvarna News Asianet Suvarna News

ಟ್ರೆಂಡ್ ಆಗ್ತಿದೆ #Melodi; ಮೆಲೋನಿ-ಮೋದಿ ಸೆಲ್ಫಿಗೆ ನೆಟ್ಟಿಗರು ಕಮೆಂಟ್ ಏನು?

ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಮೆಲೋನಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ, ಮೆಲೋಡಿ ಕಡೆಯಿಂದ ಹಾಯ್ ಗೆಳೆಯರೇ ಎಂದು ಬರೆದುಕೊಂಡಿದ್ದಾರೆ.

Italy s PM Giorgia Meloni s selfie video with PM Narendra Modi goes viral mrq
Author
First Published Jun 15, 2024, 1:58 PM IST

ನವದೆಹಲಿ: ಫೇಸ್‌ಬುಕ್, ಎಕ್ಸ್  ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ #Melodi ಟ್ರೆಂಡ್ ಆಗುತ್ತಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಪಿಎಂ ನರೇಂದ್ರ ಮೋದಿ ಜೊತೆಯಾಗಿ ಫೊಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಮೆಲೋನಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ, ಮೆಲೋಡಿ ಕಡೆಯಿಂದ ಹಾಯ್ ಗೆಳೆಯರೇ ಎಂದು ಬರೆದುಕೊಂಡಿದ್ದಾರೆ. ಇಂಟರ್‌ನೆಟ್ ಬಳಕೆದಾರರು ಈ ವಿಡಿಯೋವನ್ನು ಹೇಗೆ ನೋಡುತ್ತಾರೆ ಅನ್ನೋ ವಿಷಯ ಇಬ್ಬರಿಗೂ ಗೊತ್ತಿದೆ. ಆದ್ರೂ ಇಬ್ಬರು ಸಂತೋಷವಾಗಿರೋದನ್ನು ಕಾಣಸಬಹುದು ಎಂದು ಎಕ್ಸ್ ಖಾತೆಯ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇದು 2024ರ ಬಹು ನಿರೀಕ್ಷಿತ ಪೋಸ್ಟ್ ಎಂದು ಪ್ರತಿಕ್ರಿಯಿಸಿದ್ದಾರೆ.

ಇದು 2024ರ ಹೃದಯಸ್ಪರ್ಶಿ ವಿಡಿಯೋ ಇದಾಗಿದ್ದು, ನಿಮ್ಮಿಬ್ಬರ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಜಾರ್ಜಿಯಾ ಮೆಲೋನಿ ಮತ್ತು ಪಿಎಂ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.

ಭಾರತದ ದಕ್ಷ, ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ ಪಾಕಿಸ್ತಾನದ ನಾಯಕ

ಪಿಎಂ ಮೋದಿ ಮತ್ತು ಪಿಎಂ ಮೆಲೋನಿ ಅವರು ತಮ್ಮ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯ ಕುರಿತು ಉಭಯ ನಾಯಕರು ಪರಿಶೀಲನೆ ನಡೆಸಿದ್ದಾರೆ. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಸೇರಿದಂತೆ  ವಿಶ್ವದ ಹಲವು ವಿಷಯಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಲು ನಾಯಕರು ಒಪ್ಪಿಕೊಂಡಿದ್ದಾರೆ.

ಈ ಬಾರಿಯ ಜಿ7 ಶೃಂಗದ ಆತಿಥ್ಯ ವಹಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೃಂಗದ ಸ್ಥಳಕ್ಕೆ ನಮಸ್ತೆ ಎಂದು ಹೇಳುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಕೃತಜ್ಞತೆ ಸಲ್ಲಿಸುವ ಸಲುವಾಗಿ ಶೃಂಗಕ್ಕೆ ತಮ್ಮನ್ನು ಆಹ್ವಾನಿಸಿದ್ದ ಮೆಲೋನಿ ಅವರ ಜತೆ ಮೋದಿ ಆತ್ಮೀಯತೆಯಿಂದ ಮಾತನಾಡಿ 50ನೇ ಜಿ7 ಶೃಂಗದ ಯಶಸ್ವಿ ಆತಿಥ್ಯ ನಿರ್ವಹಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ನಮ್ಮ ಷರತ್ತುಗಳಿಗೆ ಒಪ್ಪಿದರೆ ಯುದ್ಧ ನಿಲ್ಲಿಸಲು ರೆಡಿ: ರಷ್ಯಾ ಅಧ್ಯಕ್ಷ ಪುಟಿನ್‌

Latest Videos
Follow Us:
Download App:
  • android
  • ios