ಬಾಂಗ್ಲಾದಲ್ಲಿರುವ ಭಾರತದ ನಿವಾಸಿಗಳಿಗೆ ಸಲಹಾವಳಿ, ಹೆಲ್ಪ್‌ಲೈನ್ ಬಿಡುಗಡೆ ಮಾಡಿದ ಹೈ ಕಮೀಷನರ್

By Anusha KbFirst Published Jul 18, 2024, 2:51 PM IST
Highlights

ಬಾಂಗ್ಲಾದೇಶದ ಢಾಕಾದಲ್ಲಿರುವ ಭಾರತದ ಹೈಕಮೀಷನರ್‌ ಇಂದು ಬಾಂಗ್ಲಾದೇಶದಲ್ಲಿರುವ ಭಾರತೀಯರಿಗೆ  ಪ್ರಯಾಣ, ಪ್ರವಾಸ ಮಾಡುವುದನ್ನು ಸ್ವಲ್ಪ ಕಾಲದ ಮಟ್ಟಿಗೆ ಮುಂದೂಡುವಂತೆ ಸೂಚಿಸಿದೆ. 

ಢಾಕಾ: ಬಾಂಗ್ಲಾದೇಶದ ಢಾಕಾದಲ್ಲಿರುವ ಭಾರತದ ಹೈಕಮೀಷನರ್‌ ಇಂದು ಬಾಂಗ್ಲಾದೇಶದಲ್ಲಿರುವ ಭಾರತೀಯರಿಗೆ  ಪ್ರಯಾಣ, ಪ್ರವಾಸ ಮಾಡುವುದನ್ನು ಸ್ವಲ್ಪ ಕಾಲದ ಮಟ್ಟಿಗೆ ಮುಂದೂಡುವಂತೆ ಸೂಚಿಸಿದೆ. ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಕ್ ಹಸೀನಾ ಸರ್ಕಾರದ ವಿರುದ್ಧ ಉದ್ಯೋಗ ಖೋಟಾ ನಿಯಮಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿದೆ, ಇದು ಹಿಂಸಾರೂಪವನ್ನು ತಾಳಿದ್ದು, ಆರು ಜನ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಹೈ ಕಮೀಷನರ್‌ ಈ ಸೂಚನೆ ನೀಡಿದ್ದು, ಈಗಾಗಲೇ ಬಾಂಗ್ಲಾದೇಶಕ್ಕೆ ತೆರಳಿರುವವರ ಸುರಕ್ಷತೆಯ ದೃಷ್ಟಿಯಿಂದ  ತುರ್ತು ದೂರವಾಣಿ ಸಂಖ್ಯೆಯ ಜೊತೆಗೆ ಸಲಹಾವಳಿಯನ್ನು ಕೂಡ ಬಿಡುಗಡೆ ಮಾಡಿದೆ. 

ಇಂದು ಭಾರತೀಯರಿಗೆ ಮನವಿ ಮಾಡಿರುವ ಢಾಕಾದಲ್ಲಿರುವ ಭಾರತದ ರಾಯಭಾರ ಕಚೇರಿ, ಭಾರತೀಯರಿಗೆ  ಬಾಂಗ್ಲಾದೇಶಕ್ಕೆ ಪ್ರವಾಸ ಮಾಡುವುದನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ಸೂಚಿಸಿದೆ. ಜೊತೆಗೆ ಪ್ರವಾಸಿ ಸಲಹಾವಳಿಯನ್ನು ಬಿಡುಗಡೆ ಮಾಡಿರುವ ಭಾರತದ ಹೈ ಕಮೀಷನ್  ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಭಾರತೀಯ ಸಮುದಾಯದ ಸದಸ್ಯರು ಹಾಗೂ ಬಾಂಗ್ಲಾದೇಶದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಹಾಗೂ ನೀವು ವಾಸ ಮಾಡುವ ಸ್ಥಳದಲ್ಲಿ ನಿಮ್ಮ ತಿರುಗಾಟವನ್ನು ಕಡಿಮೆ ಮಾಡುವಂತೆ ಸೂಚಿಸಲಾಗುತ್ತಿದೆ. ಇದರ ಜೊತೆಗೆ ತುರ್ತು ಅಗತ್ಯದ ಪ್ರಕರಣಗಳಿದ್ದಲ್ಲಿ ಹಾಗೂ ಸಹಾಯದ ಅಗತ್ಯ ಇದಲ್ಲಿ ದಯವಿಟ್ಟು  ಭಾರತೀಯ ಹೈ ಕಮೀಷನ್ ಕಚೇರಿಯನ್ನು ಹಾಗೂ ನಮ್ಮ ಸಹಾಯಕ ಹೈ ಕಮೀಷನ್‌ ಕಚೇರಿಯನ್ನು ಸಂಪರ್ಕಿಸುವಂತೆ ಹೈ ಕಮೀಷನರ್ ಕಚೇರಿ ಸೂಚಿಸಿದೆ. ಇದರ ಜೊತೆಗೆ ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. 

Latest Videos

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ನಮ್ಮ ಪ್ರಧಾನಿ ಮೋದಿ ಭೇಟಿ: ಹಲವು ಮಹತ್ವದ ಒಪ್ಪಂದಗಳಿಗೆ ಸಹಿ

ಉದ್ಯೋಗದಲ್ಲಿ ಮೀಸಲಾತಿ ಕೋಟಾ ವಿರೋಧಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ, ಮೀಸಲಾತಿ ಕೋಟಾ ವಿರೋಧಿಸುತ್ತಿರುವ ಬಣವೊಂದು ಪ್ರತಿಭಟನೆ ವೇಳೆ ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆಯೊಂದಿಗೆ ಕಿತ್ತಾಟಕ್ಕೆ ಇಳಿದಿದ್ದು, ಪೊಲೀಸರ ವರದಿ ಪ್ರಕಾರ ಈ ತಿಕ್ಕಾಟದಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಕಳೆದ ವಾರ ಈ ಘಟನೆ ನಡೆದಿದ್ದು, 

ಇಂದು ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ.  ಢಾಕಾ ಟ್ರಿಬ್ಯೂನ್ ವರದಿ ಪ್ರಕಾರ ಮೆರೂಲ್ ಬಡ್ಡಾ ಪ್ರದೇಶದಲ್ಲಿರುವ ಬ್ರಾಕ್‌ ವಿಶ್ವವಿದ್ಯಾಲಯದ ಆವರಣದಲ್ಲಿ  ವಿದ್ಯಾರ್ಥಿಗಳು ಹಾಗೂ ಆಡಳಿತದ ಮಧ್ಯೆ ಗಲಾಟೆಗಳು ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ದೂರ ಚದುರಿಸಲು  ಟೀಯರ್ ಗ್ಯಾಸ್‌ ಫೈರ್ ಮಾಡಿದ್ದರು.  ಪ್ರತಿಭಟನಾ ನಿರತರು ಸಂಪೂರ್ಣ  ಬಂದ್‌ಗೆ ಸೂಚಿಸಿದ್ದು, ಢಾಕಾ ರಸ್ತೆಯಲ್ಲಿ ಕೆಲವೇ ಕೆಲವು ವಾಹನಗಳು ಕಾಣಿಸಿಕೊಂಡಿವೆ. ನಿನ್ನೆ ಕೆಲ ಸಂಘಟನೆಗಳು ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳನ್ನು ಅನಿರ್ದಿಷ್ಟಾವಧಿ ಮುಚ್ಚುವಂತೆ ಘೋಷಣೆ ಮಾಡಿದ್ದರು. ಇನ್ನು ಈ ಪ್ರತಿಭಟನೆ ವೇಳೆ ಮೃತಪಟ್ಟವರ ಸಾವಿನ ತನಿಖೆಗೆ  ಸರ್ಕಾರ ನ್ಯಾಯಾಂಗ ಸಮಿತಿ ರಚನೆ ಮಾಡಲಿದೆ ಎಂದು ಪ್ರಧಾನಿ ಶೇಕ್ ಹಸೀನಾ ಅವರು ಹೇಳಿದ್ದಾರೆ. 

ಬೆಂಗಳೂರಲ್ಲಿ 25 ಅಕ್ರಮ ಬಾಂಗ್ಲಾದೇಶಿಗಳು ವಶಕ್ಕೆ 

Advisory on the ongoing situation in Bangladesh. pic.twitter.com/mjXouAST2M

— India in Bangladesh (@ihcdhaka)

 

click me!