ವಾಶಿಂಗ್ಟನ್ (ಜು.12): ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗುವ ಮೊದಲು ಇದ್ದ ಇಮೇಜ್ ಈಗ ಇಲ್ಲ ಅನ್ನೋ ವಾದ ವಿವಾದ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸಕ್ಕೆ ಜೋ ಬೈಡನ್ ಕಾರಣ ಅನ್ನೋ ವಾದವೂ ಇದೆ. ಇದರ ನಡುವೆ ಇದೀಗ ಅಮೆರಿಕ ಅಧ್ಯಕ್ಷರ ವಯಸ್ಸು ಹೆಚ್ಚಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಡೆಮಾಕ್ರಟಿಕ್ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಸೇರಿದಂತೆ ನಾಗರೀಕರನ್ನೊಳಗೊಂಡ ಸರ್ವೆಯಲ್ಲಿ ಜೋ ಬೈಡನ್ ವಯಸ್ಸಿನ ಕುರಿತು ಅಪಸ್ವರಗಳು ಕೇಳಿಬಂದಿದೆ. ಜೋ ಬೈಡನ್ ಮುಂದಿನ ನವೆಂಬರ್ ತಿಂಗಳಲ್ಲಿ 80ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಜೋ ಬೈಡನ್ ಅಮೆರಿಕ ಕಂಡ ಅತೀ ಹಿರಿಯ ಅಧ್ಯಕ್ಷ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬೈಡನ್‌ಗಿಂತ ಇತರ ನಾಯಕರು ಸೂಕ್ತ ಎಂದು ತಮ್ಮದೇ ಪಕ್ಷದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸತತ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗುವ ಬೈಡೆನ್ ಕನಸಿಗೆ ಈಗಲೇ ಕೊಕ್ಕೆ ಬಿದ್ದಿದೆ.
2024ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ(american president election) ನಡೆಯಲಿದೆ. ಡೆಮಾಕ್ರಟಿಕ್ ಪಾರ್ಟಿ ನಾಯಕ ಜೋ ಬೈಡನ್ ಮತ್ತೆ ಅಧ್ಯಕ್ಷರಾಗಲು ಉತ್ಸುಕರಾಗಿದ್ದಾರೆ. ಸದ್ಯ ಬೈಡನ್ ಅವಧಿ ಇನ್ನು 2 ವರ್ಷಗಳಿವೆ. ಆದರೆ ಚುನಾವಣೆ ತಯಾರಿ ಈಗಿನಿಂದಲೇ ಆರಂಭಿಸಲು ಡೆಮಾಕ್ರಟಿಕ್ ಪಾರ್ಟಿ ಸಜ್ಜಾಗಿದೆ. ಮೊದಲ ಅವಧಿ ಮುಕ್ತಾಯವಾಗುವ ವೇಳೆ ಬೈಡನ್ ವಯಸ್ಸು 82ಕ್ಕೆ ಏರಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ವಯಸ್ಸನ್ನು ಪರಿಗಣಿಸಿದರೆ ಡೆಮಾಕ್ರಟಿಕ್ ಪಾರ್ಟಿ ಮತ್ತೊರ್ವ ನಾಯಕನನ್ನು ಅಧ್ಯಕ್ಷೀಯ ಚುನಾವಣೆಗೆ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತ ರಿಪಬ್ಲಿಕನ್ ಪಾರ್ಟಿ, ಜೋ ಬೈಡನ್‌ಗೆ ಮರೆಗುಳಿತನ ಇದೆ. ಅವರ ವಯಸ್ಸು ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ಮಾಡಿದೆ.
ಸೈಕಲ್‌ನಿಂದ ಕೆಳಗೆ ಬಿದ್ದ ಅಮೆರಿಕಾ ಅಧ್ಯಕ್ಷ : ವಿಡಿಯೋ ವೈರಲ್
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡ ಜೋ ಬೈಡನ್(america president) ವಯಸ್ಸಿನ ಕುರಿತು ತಮ್ಮದೇ ಡೆಮಾಕ್ರಟಿಕ್ ಪಾರ್ಟಿಯಲ್ಲಿ ಅಪಸ್ವರ ಇದೆ ಎಂದು ವರದಿ ಪ್ರಕಟಿಸಿದೆ. ರಷ್ಯಾ ಉಕ್ರೇನ್ ಯುದ್ಧ ಸಂದರ್ಭದಲ್ಲಿ ಅಮೆರಿಕ ನಿಜವಾದ ಪವರ್ ತೋರಿಸುವಲ್ಲಿ ವಿಫಲವಾಗಿದೆ ಅನ್ನೋ ಮಾತುಗಳು ಇವೆ. ಯುದ್ಧದಿಂದ ಸೃಷ್ಟಿಯಾದ ಹಣದುಬ್ಬರ ಸಮಸ್ಯೆಗಳನ್ನು ಬೈಡನ್ ಸಮಪರ್ಕವಾಗಿ ನಿರ್ವಹಿಸಿಲ್ಲ ಅನ್ನೋ ಆರೋಪನ್ನು ರಿಪಬ್ಲಿಕನ್ ಪಾರ್ಟಿ ಮಾಡಿದೆ. ಆದರೆ ವಯಸ್ಸಿನ ವಿಚಾರ ಬಂದಾಗ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಾರ್ಟಿ ಒಂದೇ ಉತ್ತರ ನೀಡಿದ್ದಾರೆ. ಬೈಡನ್ ನಿಂಗೆ ವಯಸ್ಸಾಯ್ತೋ ಎಂದಿದ್ದಾರೆ.
ಇತ್ತೀಚೆಗೆ ನಡೆದ ಜಿ7 ಶೃಂಗಸಭೆ ಬಳಿಕ ಅಮೆರಿಕ ಅಧ್ಯಕ್ಷರ ವಯಸ್ಸಿನ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಕೆನಡ ಅಧ್ಯಕ್ಷ ಜಸ್ಟಿನ್ ಟ್ರುಡೋ ಜೊತೆಗಿನ ಮಾತುಕೆ ಬಳಿಕ ವಯಸ್ಸಿನ ಚರ್ಚೆ ನಡೆದಿದೆ. ಟ್ರುಡೋ 50ರ ಹರೆಯದ ಅಧ್ಯಕ್ಷರಾಗಿದ್ದರೆ, ಬೈಡನ್ ವಯಸ್ಸು 79. ಇನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ವಯಸ್ಸು 44. ಇನ್ನು ಅತ್ಯಂತ ಜನಪ್ರಿಯ ನಾಯಕ ಭಾರತದ ಪ್ರಧಾನಿ ನರೇಂದ್ರ ಮೋದಿ(Indian Prime Minister) ವಯಸ್ಸು 71. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಾರ್ಟಿ ಯುವ ಸಮೂಹದ ಬೆಂಬಲ ಗಿಟ್ಟಿಸಿಕೊಳ್ಳಲು ಯುವ ನಾಯಕನಿಗೆ ಮಣೆ ಹಾಕಬೇಕು ಅನ್ನೋ ಅಭಿಪ್ರಾಯಗಳು ಪಕ್ಷದಲ್ಲಿ ವ್ಯಕ್ತವಾಗಿದೆ. ಈ ಮೂಲಕ ಜೋ ಬೈಡನ್ ಎರಡನೇ ಬಾರಿಗೆ ಅಧ್ಯಕ್ಷರಾಗಲು ವಯಸ್ಸು ಅತೀಯಾಯ್ತು ಅನ್ನೋದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ಮಾತನಾಡಿಸಲು ಓಡೋಡಿ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ವಿಡಿಯೋ ವೈರಲ್!
ಜೋ ಬೈಡನ್ ಬೆಂಬಲಿಗರು ಮಾತ್ರ ವಯಸ್ಸಿನ ಅಪಸ್ವರಕ್ಕೆ ತಿರುಗೇಟು ನೀಡಿದ್ದಾರೆ. ವಿಮಾನದಲ್ಲಿ ಪ್ರಯಾಣ ಮಾಡುವಾಗ ಎಲ್ಲಾ ಕಿರಿಯ ಅಧಿಕಾರಿಗಳು, ವಯಸ್ಸಿನಲ್ಲಿ ಚಿರ ಯುವಕರಾಗಿರವ ಹಲವರು ಮಲಗುತ್ತಾರೆ. ಆದರೆ ಜೋ ಬೈಡನ್ ವಿಮಾನದಲ್ಲೂ ಕಡತಗಳ ಪರಿಶೀಲನೆ, ದೇಶಿ ಪಾಲಿಸಿಗಳ ಕುರಿತು ಚರ್ಚೆ ಮಾಡಿ ಅಧಿಕಾರಿಗಳಿಂದ ಸಲಹೆ ಪಡೆಯುತ್ತಾರೆ. ವಯಸ್ಸಲ್ಲ ಮುಖ್ಯ. ಉತ್ಸಾಹ ಹಾಗೂ ಆಸಕ್ತಿ ಮುಖ್ಯ ಎಂದು ಜೋ ಬೈಡನ್ ಹಿರಿಯ ಸಲಹೆಗಾರ ಮೈಕ್ ಡೋನಿಲೋನ್ ಹೇಳಿದ್ದಾರೆ.
ಇದೇ ವೇಳೆ ರಿಪಬ್ಲಿಕನ್ ಪಾರ್ಟಿ ಆರೋಪಗಳಿಗೆ ಬೈಡನ್ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಕೂಡ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಟ್ರಂಪ್(Donald Trump) ವಯಸ್ಸು ಸದ್ಯ 76 ಎಂದು ತಿರುಗೇಟು ನೀಡಿದ್ದಾರೆ. ಇತ್ತ ಡೋನಾಲ್ಡ್ ಟ್ರಂಪ್ , ಹಲವರು 80 ಹಾಗೂ 90 ವಯಸ್ಸಿನಲ್ಲಿ ಚುರುಕುಗಾಗುತ್ತಾರೆ. ಆದರೆ ಜೋ ಬೈಡನ್ ಹಾಗಲ್ಲ. ಒಂದು ಮಾತಿದೆ ಬದುಕು ಶುರುವಾಗುವುದೇ 80 ರಿಂದ ಎಂದು ಟ್ರಂಪ್ ವಯಸ್ಸಿನ ಕುರಿತ ಬೈಡನ್ ಬೆಂಬಲಿಗರ ಟೀಕೆಗೆ ತಿರುಗೇಟು ನೀಡಿದ್ದಾರೆ.