
ನವದೆಹಲಿ (ಡಿ.23): ಏಸು ಕ್ರಿಸ್ತ ಅವರ ಸಹೋದರ ಜೇಮ್ಸ್‌ನದ್ದು ಎಂದು ಹೇಳಲಾಗುವ 2 ಸಾವಿರ ವರ್ಷಗಳಷ್ಟು ಹಳೆಯ ಮೂಳೆಯ ಪೆಟ್ಟಿಗೆಯನ್ನು ಅಮೆರಿಕದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಮೂಳೆಯ ಪೆಟ್ಟಿಗೆಯ ಮೇಲೆ, 'ಜೇಮ್ಸ್, ಜೋಸೆಫ್ ಅವರ ಪುತ್ರ ಹಾಗೂ ಜೀಸಸ್ ಅವರ ಸಹೋದರ' ಎಂದು ಬರೆಯಲಾಗಿದೆ. ಇದರ ಸತ್ಯಾಸತ್ಯತೆಯ ಬಗ್ಗೆ ಇತಿಹಾಸಕಾರರು ಹಾಗೂ ದಾರ್ಶನಿಕರು ಚರ್ಚೆಯಲ್ಲಿರುವಾಗಲೇ ಇದರ ಪ್ರದರ್ಶನ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. 2,000 ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಅಸ್ಥಿಯ ಬಾಕ್ಸ್ ಅಥವಾ ಸಮಾಧಿ ಪೆಟ್ಟಿಗೆಯ ಮೇಲೆ ಯೇಸುವಿನ ಸಹೋದರನ ಹೆಸರನ್ನು ಕೆತ್ತಲಾಗಿದೆ, ಅಮೆರಿಕದಲ್ಲಿ ಇದನ್ನು ಅನಾವರಣ ಮಾಡಲಾಗಿದೆ. ಅರಾಮಿಕ್ ಭಾಷೆಯಲ್ಲಿ 'ಜೋಸೆಫ್‌ನ ಮಗ ಜೇಮ್ಸ್‌ನ ಮಗ, ಜೀಸಸ್‌ನ ಸಹೋದರ' ಎಂದು ಇದರ ಮೇಲೆ ಕೆತ್ತಲಾಗಿದೆ. ಪುರಾತನ ಮೂಳೆ ಪೆಟ್ಟಿಗೆಯು ಯೇಸುವನ್ನು ಶಿಲುಬೆಗೇರಿಸಿದ ನಂತರ ಜೆರುಸಲೆಮ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಮೊದಲ ನಾಯಕ ಜೇಮ್ಸ್ ದಿ ಜಸ್ಟ್‌ನ ಅವಶೇಷಗಳನ್ನು ಹೊಂದಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಪೆಟ್ಟಿಗೆಯ ಮೇಲೆ ಕೆತ್ತಲಾದ ಹೆಸರುಗಳು ಯೇಸುವಿನ ಸಹೋದರ ಮತ್ತು ತಂದೆಯ ಹೆಸರುಗಳಿಗೆ ಸಂಬಂಧಿಸಿವೆ.
ಯೇಸುವಿನ ಕಾಲದ 350 ಕಲಾಕೃತಿಗಳನ್ನು ಒಳಗೊಂಡ ಪ್ರದರ್ಶನದ ಭಾಗವಾಗಿ ಅಸ್ಥಿಯನ್ನು ಪ್ರಸ್ತುತ ಅಟ್ಲಾಂಟಾದ ಪುಲ್‌ಮನ್ ಯಾರ್ಡ್‌ನಲ್ಲಿ ಪ್ರದರ್ಶಿಸಲಾಗಿದೆ. 1976 ರಲ್ಲಿ ಇದನ್ನು ಪತ್ತೆ ಮಾಡಲಾಗಿದೆ. ಇದನ್ನು ಪ್ರದರ್ಶನದ ಸಂಘಟಕರು "ಕ್ರಿಸ್ತನ ಕಾಲದ ಅತ್ಯಂತ ಮಹತ್ವದ ಐಟಂ" ಎಂದು ಪ್ರಶಂಸಿಸಿದ್ದಾರೆ. 2002ರಲ್ಲಿ ಸಾರ್ವಜನಿಕವಾಗಿ ಇದನ್ನು ಮೊದಲ ಬಾರಿಗೆ ಪ್ರದರ್ಶನ ಮಾಡಿದ ಬಳಿಕ ಈ ಅಸ್ಥಿಯ ಬಾಕ್ಸ್ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಬೈಬಲ್ ಇತಿಹಾಸಕ್ಕೆ ಸಂಬಂಧಿಸಿದ ಇತರ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಂತೆಯೇ ಇದೂ ಕೂಡ ಚರ್ಚೆ ನಡೆದಿತ್ತು.
2003 ರಲ್ಲಿ, ಇಸ್ರೇಲಿ ಪ್ರಾಚೀನ ವಸ್ತುಗಳ ಸಂಗ್ರಾಹಕ ಓಡೆಡ್ ಗೋಲನ್ ಅವರು ನಕಲಿ ಮಾಡಿರುವ ಆರೋಪಗಳನ್ನು ಎದುರಿಸಿದರು, ತಜ್ಞರು "ಜೀಸಸ್‌ನ ಸಹೋದರ" ಎಂಬ ಪದಗುಚ್ಛವನ್ನು ಈ ಅಸ್ಥಿಪಂಜರದ ಬಾಕ್ಸ್‌ಗೆ ಸೇರಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಆದರೆ ಗೋಲನ್ ಮಾತ್ರ ಈ ಆರೋಪಗಳನ್ನು ತಿರಸ್ಕರಿಸಿದ್ದರು. ಒಂದು ದಶಕದ ಸುದೀರ್ಘ ವಿಚಾರಣೆಯ ಬಳಿಕ ಅವರು ಖುಲಾಸೆಗೊಂಡಿದ್ದರು. ಕಾನೂನಿನ ಅಡಿಯಲ್ಲಿ ಅವರ ಗೆಲುವಿನ ಹೊರತಾಗಿಯೂ, ಜೀಸಸ್ ಬಾಕ್ಸ್ ವಿಚಾರದ ಬಗೆಗಿನ ಗೊಂದಲ ಇನ್ನೂ ಮುಂದುವರಿದಿದೆ. ಇಸ್ರೇಲ್‌ನಲ್ಲಿ ಪತ್ತೆಯಾಗಿರುವ 2 ಸಾವಿರ ವರ್ಷಗಳಷ್ಟು ಹಳೆಯ ಬಾಕ್ಸ್‌ಅನ್ನು ಈಗ ಅಮೆರಿಕದಲ್ಲಿ ಪ್ರದರ್ಶನ ಮಾಡಲಾಗಿದೆ.
ಕ್ರಾಸ್‌ವಾಕ್ ಹೆಡ್‌ಲೈನ್ಸ್‌ಗೆ ಈ ವಿಚಾರವಾಗಿ ಮಾತನಾಡಿದ ಗೋಲನ್, "ನಾವು ಹಲವಾರು ರಾಸಾಯನಿಕ ಪರೀಕ್ಷೆಗಳನ್ನು ನಡೆಸಿದ್ದೇವೆ, ವಿಶೇಷವಾಗಿ ಅದರ ಮೇಲೆ ಬರೆದ ಅಕ್ಷರದ ಮೇಲೆ, ಇದು ಈ ಬಾಕ್ಸ್‌ನ ಅತ್ಯಂತ ನಿರ್ಣಾಯಕ ಅಂಶವಾಗಿದೆ' ಎಂದಿದ್ದಾರೆ. ಇಡೀ ಬರಹವು ಅಧಿಕೃತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇದನ್ನು ಹಲವಾರು ಸಾವಿರ ವರ್ಷಗಳ ಹಿಂದೆ ಕೆತ್ತಲಾಗಿದೆ' ಎಂದಿದ್ದಾರೆ.
ರಾಹುಲ್ ಮೊದಲ ಭಾಷಣದಲ್ಲೇ ವಿವಾದ ಸೃಷ್ಟಿಸಿಕೊಂಡ್ರಾ..? ಶಿವನ ಫೋಟೋ ಪ್ರದರ್ಶಿಸಿ ಬಿಜೆಪಿಗೆ ಅಹಿಂಸೆ ಪಾಠ..!
ಅಧಿಕೃತವೆಂದು ಸಾಬೀತಾದರೆ, ಅಸ್ಥಿಪಂಜರದ ಬಾಕ್ಸ್ ಯೇಸುಕ್ರಿಸ್ತನ ಅತ್ಯಂತ ಹಳೆಯ ಸ್ಪಷ್ಟವಾದ ಪುರಾವೆಗಳನ್ನು ಪ್ರತಿನಿಧಿಸಲಲಿದೆ. ಮೊದಲ ಶತಮಾನದ ಯಹೂದಿ ಸಮಾಧಿ ಪದ್ಧತಿಗಳಲ್ಲಿ, ಸತ್ತ ಕುಟುಂಬದ ಸದಸ್ಯರನ್ನು ಆರಂಭದಲ್ಲಿ ಗುಹೆಗಳಲ್ಲಿ ಇರಿಸಲಾಯಿತು ಮತ್ತು ಅವರ ಮೂಳೆಗಳನ್ನು ನಂತರ ಅಸ್ಥಿಪಂಜರದ ಬಾಕ್ಸ್‌ನಲ್ಲಿ ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಕೆಲವು ದಾರ್ಶನಿಕರು ಈ ಬಗ್ಗೆ ಸಂದೇಹವನ್ನೂ ಇಂದೂ ಹೊಂದಿದ್ದಾರೆ. ಜೀವಮಾನ ಪೂರ್ತಿ ಮೇರಿ ಕನ್ಯೆಯಾಗಿಯೇ ಇದ್ದರು ಎಂದು ವಾದಿಸಿದ್ದಾರೆ. ಹಾಗಾಗಿ ಇದು ಯೇಸುವಿನ ಕುಟುಂಬದವರ ಅಸ್ಥಿಪಂಜರವಾಗಿರುವ ಸಾಧ್ಯತೆ ಬಹಳ ಕಡಿಮೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ