
ಸತತ 9ನೇ ವರ್ಷವೂ ಜಪಾನಿನಲ್ಲಿ ಜನನ ದರ ಕುಸಿತ
ಟೋಕಿಯೊ: ಜಪಾನಿನಲ್ಲಿ ಜನನ ಪ್ರಮಾಣದ ದರ ಕುಸಿತ ಮುಂದುವರೆದಿದ್ದು, ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಜಪಾನಿನಲ್ಲಿ ಕಳೆದ ವರ್ಷ ಜನಿಸಿರುವ ಮಕ್ಕಳ ಪ್ರಮಾಣ 9 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಟ ಮಟ್ಟದಾಗಿದೆ.ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯದ ಪ್ರಕಾರ, 2024ರಲ್ಲಿ ಜಪಾನಿನಲ್ಲಿ 7,20, 998 ಶಿಶುಗಳ ಜನನವಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.5ರಷ್ಟು ಕಡಿಮೆ. ಜಪಾನಿನಲ್ಲಿ ಜನಗಣತಿ ಆರಂಭವಾದ 1899ರಿಂದ ಅಂಕಿ ಅಂಶಗಳನ್ನು ತೆಗೆದುಕೊಂಡರೆ ಇದು ಇದುವರೆಗಿನ ಅತ್ಯಂತ ಕನಿಷ್ಟ ಮಟ್ಟದಾಗಿದೆ. ಈ ವರ್ಷದ ಅಂತ್ಯಕ್ಕೆ ಶಿಶುಗಳ ಜನನ ಪ್ರಮಾಣ 7 ಲಕ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ದೇಶದ ಜನಸಂಖ್ಯೆಯೂ 2027ರ ವೇಳೆಗೆ ಸುಮಾರು ಶೇ.30ರಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು, 8.70 ಕೋಟಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಬಿಜೆಪಿ ಸೇರಲ್ಲ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಸ್ಪಷ್ಟನೆ
ಕೋಲ್ಕತಾ: ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಬಂಧು ಅಭಿಷೇಕ್ ಬ್ಯಾನರ್ಜಿ, ತಾವು ಬಿಜೆಪಿ ಸೇರುವುದಾಗಿ ಹರಡಿರುವ ಸುದ್ದಿಗಳನ್ನು ನಿರಾಕರಿಸಿದ್ದಾರೆ. ಅಲ್ಲದೆ ಮಮತಾ ಬ್ಯಾನರ್ಜಿ ಅವರ ಜೊತೆಗೆ ಭಿನ್ನಾಭಿಪ್ರಾಯ ಇದೆ ಎನ್ನುವ ವದಂತಿಯನ್ನು ಕೂಡ ತಳ್ಳಿಹಾಕಿದ್ದಾರೆ.
ಗುರುವಾರ ಪಕ್ಷದ ಸಮ್ಮೇಳನದಲ್ಲಿ ಈ ಬಗ್ಗೆ ಮಾತನಾಡಿದ ಅಭಿಷೇಕ್, ‘ನಾನು ಟಿಎಂಸಿಯ ನಿಷ್ಠಾವಂತ ನಾಯಕ. ಮಮತಾ ಬ್ಯಾನರ್ಜಿ ನಮ್ಮ ನಾಯಕರು. ನನ್ನ ಕುತ್ತಿಗೆಯನ್ನು ಸೀಳಿದರೂ ನಾನು ‘ಮಮತಾ ಬ್ಯಾನರ್ಜಿ ಜಿಂದಾಬಾದ್’ ಎನ್ನುವೆ. ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಅವರು ಸ್ವಾರ್ಥದಿಂದ ಈ ರೀತಿ ಮಾಡುತ್ತಿದ್ದಾರೆ. ಪಕ್ಷದಲ್ಲಿನ ಅಂಥ ದ್ರೋಹಿಗಳ ಬಣ್ಣ ಬಯಲು ಮಾಡುವೆ’ ಎಂದರು.
ಪತ್ನಿ, ಗರ್ಲ್ ಫ್ರೆಂಡ್ ಅಲ್ಲ ಗೊಂಬೆ ಜೊತೆಗಿರಲು ಇಷ್ಟಪಡ್ತಾರೆ ಈ ಜನ, ಅಚ್ಚರಿಯಾಗುತ್ತೆ ಕಾರಣ!
ಗೋಡ್ಸೆ ಹೊಗಳಿದ ಪ್ರಾಧ್ಯಾಪಕಿಗೆ ಎನ್‌ಐಟಿ ಕ್ಯಾಲಿಕಟ್ ಡೀನ್ ಹುದ್ದೆ: ವಿವಾದ
ನವದೆಹಲಿ: ಮಹಾತ್ಮ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್‌ಐಟಿ)-ಕ್ಯಾಲಿಕಟ್‌ನ ಪ್ರಾಧ್ಯಾಪಕರೊಬ್ಬರನ್ನು ಕೇಂದ್ರ ಸರ್ಕಾರ ಡೀನ್ ಆಗಿ ನೇಮಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದು ಮೋದಿ ಸರ್ಕಾರದ ಗಾಂಧಿ ವಿರೋಧಿ ಹಾಗೂ ಗೋಡ್ಸೆ ವೈಭವೀಕರಣ ಮನಸ್ಥಿತಿಯ ಭಾಗವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.ಎನ್‌ಐಟಿ-ಕ್ಯಾಲಿಕಟ್‌ನ ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ, ಡಾ. ಶೈಜಾ ಎ. ಅವರನ್ನು ಮಾ.7ರಿಂದ ಜಾರಿಗೆ ಬರುವಂತೆ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ. ಗೋಡ್ಸೆಯನ್ನು ಹೊಗಳಿದ ಆರೋಪದ ಮೇಲೆ ಶೈಜಾ ವಿರುದ್ಧ ಪೊಲೀಸ್ ಪ್ರಕರಣ ಬಾಕಿ ಇದೆ.
ಕಣ್ಣೀರು ಒರೆಸಲು ಬೇಕಾಗಿದ್ದಾರೆ ಸುಂದರ ಯುವಕರು! ದಿನಕ್ಕೆ 5 ಸಾವಿರ ರೂ: ಇಲ್ಲಿದೆ ಫುಲ್ ಡಿಟೇಲ್ಸ್..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ