
ವಿಶ್ವಪಾರಂಪರಿಕ ತಾಣ, ಇಂಗ್ಲೆಂಡ್ ಮಾಜಿ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್ ಜನಿಸಿದ ಸ್ಥಳ ಬ್ಲೆನ್‌ಹೈಮ್ ಅರಮನೆಯಲ್ಲಿದ್ದ ಚಿನ್ನದ ಟಾಯ್ಲೆಟ್ ಕಮೋಡ್ ಕಳ್ಳತನವಾದ ವಿಡಿಯೋ ಈಗ ವೈರಲ್ ಆಗಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಈ ವೀಡಿಯೋವನ್ನು ಪ್ರಸಾರ ಮಾಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. £2,800,000 ಯುರೋ ಡಾಲರ್ ಎಂದರೆ ಭಾರತೀಯ ರೂಪಾಯಿಗಳಲ್ಲಿ 30 ಕೋಟಿಗೂ ಅಧಿಕ ಮೌಲ್ಯದ (30,83,90,320 ರೂ,.) ಈ ಚಿನ್ನದ ಟಾಯ್ಲೆಟ್ ಕಮೋಡನ್ನು 2019ರಲ್ಲಿ ಕಳ್ಳರು ದರೋಡೆ ಮಾಡಿದ್ದರು. ಕೇವಲ 5 ನಿಮಿಷದಲ್ಲಿ ಕಳ್ಳರು ಈ ಚಿನ್ನದ ಕಮೋಡನ್ನು ಸುಲಭವಾಗಿ ಎಸ್ಕೇಪ್ ಮಾಡಿದ್ದು ಇದನ್ನು ನೋಡಿ ನ್ಯಾಯಾಧೀಶರೇ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಈ ಶೌಚಾಲಯವನ್ನು ನಿರ್ಮಾಣ ಮಾಡಿದ್ದರು. ವಿಶ್ವ ಪಾರಂಪರಿಕ ತಾಣದಲ್ಲಿದ್ದ ಬಹುಕೋಟಿ ಮೌಲ್ಯದ ಈ ಚಿನ್ನದ ಟಾಯ್ಲೆಟ್ ಬ್ಲೆನ್‌ಹೈಮ್‌ನ ಅಕ್ಸ್‌ಫರ್ಡ್‌ಶೈರ್‌ನಲ್ಲಿ ಪ್ರವಾಸಿ ಆಕರ್ಷಣೆಯಾಗಿತ್ತು. ಅರಮನೆಯೊಳಗೆ ನುಗ್ಗಿದ ಕಳ್ಳರು ಅದನ್ನು ಸುತ್ತಿಗೆಯಿಂದ ಹೊಡೆದು ಕೇವಲ 5 ನಿಮಿಷದಲ್ಲಿ ಕದ್ದೊಯ್ದಿದ್ದರು. ಈ ಕಳ್ಳತನ ನಡೆದ ಕೆಲವೇ ದಿನಗಳಲ್ಲಿಈ ಕದ್ದ ಚಿನ್ನಕ್ಕೆ ಕಳ್ಳರು 'ಕಾರು' ಎಂಬ ಕೋಡ್ ವರ್ಡ್ ಬಳಸಿ ವ್ಯವಹಾರ ಕುದುರಿಸುವುದಕ್ಕಾಗಿ ಹ್ಯಾಟನ್ ಗಾರ್ಡನ್‌ನ ಆಭರಣ ವ್ಯಾಪಾರಿಯನ್ನು ಸಂಪರ್ಕ ಸಾಧಿಸಿದ್ದರು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
ಅಂದಹಾಗೆ ಈ ಚಿನ್ನದ ಕಮೋಡ್ ಒಂದು ಅದ್ಭುತವಾದ ಕಲಾಕೃತಿಯಾಗಿತ್ತು, 18 ಕ್ಯಾರೆಟ್ ಚಿನ್ನದಿಂದ ಮಾಡಿದ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಶೌಚಾಲಯ ಇದಾಗಿದ್ದು, ಇದಕ್ಕೆ ಅಮೆರಿಕ ಎಂದು ಹೆಸರಿಡಲಾಗಿತ್ತು ಎಂದುಪ್ರಾಸಿಕ್ಯೂಟರ್ ಜೂಲಿಯನ್ ಕ್ರಿಸ್ಟೋಫರ್ ಕೆಸಿ ಹೇಳಿದ್ದಾರೆ. ಇದು ಸರಿಸುಮಾರು 98 ಕೆಜಿ ತೂಕವಿತ್ತು ಮತ್ತು ಇದಕ್ಕೆ £4.75 ಯುರೋ ಮಿಲಿಯನ್ ಮೊತ್ತಕ್ಕೆ ವಿಮೆ ಮಾಡಲಾಗಿತ್ತು. ಆ ಸಮಯದಲ್ಲಿ ಇದನ್ನು ತಯಾರಿಸಲು ಬಳಸಿದ್ದ ಚಿನ್ನದ ಬೆಲೆ ಸುಮಾರು £2.8 ಮಿಲಿಯನ್ ಆಗಿತ್ತು.
2019 ರ ಸೆಪ್ಟೆಂಬರ್ 14 ರಂದು ಈ ಚಿನ್ನದ ಟಾಯ್ಲೆಟ್‌ನ ದರೋಡೆಯಾಗಿದ್ದು, ಈ ಪ್ರಕರಣದಲ್ಲಿ ಶಂಕಿತನಾಗಿದ್ದ ಮೈಕೆಲ್ ಜೋನ್ಸ್ ನಿರ್ದೋಷಿಯಾಗಿದ್ದ. ಬರ್ಕ್‌ಷೈರ್‌ನ ವಿಂಡ್ಸರ್ ಸಮೀಪದ ವಿಂಕ್‌ಫೀಲ್ಡ್‌ನ 36 ವರ್ಷದ ಫ್ರೆಡೆರಿಕ್ ಸೈನ್ಸ್ ಮತ್ತು ಪಶ್ಚಿಮ ಲಂಡನ್‌ನ 41 ವರ್ಷದ ಬೋರಾ ಗುಕ್ಕುಕ್ ಕೂಡ ಈ ಕಳವು ಮಾಲನ್ನು ವರ್ಗಾಯಿಸಲು ಪಿತೂರಿ ನಡೆಸಿದ ಆರೋಪ ಎದುರಿಸಿದರೂ ತಮ್ಮ ಮೇಲಿನ ಆರೋಪವನ್ನು ಅವರು ನಿರಾಕರಿಸಿದ್ದರು. ಈ ಕಳವು ಪ್ರಕರಣವನ್ನು ಬಹಳ ಮುಂಜಾಗೃತ ಕ್ರಮದಿಂದ ಹಾಗೂ ತುಂಬಾ ವೇಗವಾಗಿ ಮಾಡಲಾಗಿತ್ತು. "ಐವರು ಪುರುಷರು, ಬೆಳಗ್ಗೆ 5 ಗಂಟೆಗೆ ಸ್ವಲ್ಪ ಮೊದಲು ಬೀಗ ಹಾಕಿದ ಮರದ ದ್ವಾರಗಳ ಮೂಲಕ ಬ್ಲೆನ್ಹೈಮ್ ಅರಮನೆಯ ಮೈದಾನಕ್ಕೆ ಎರಡು ಕದ್ದ ವಾಹನಗಳಲ್ಲಿ ಆಗಮಿಸಿದ್ದರು.
ಅವರು ಮೊದಲಿಗೆ ವಿಶಾಲವಾದ ಮೈದಾನವನ್ನು ದಾಟಿ, ಮುಂದಿನ ಮೆಟ್ಟಿಲುಗಳವರೆಗೆ ಹೋಗಿ, ಕಿಟಕಿ ಒಡೆದು ಒಳಗೆ ಹೋದರು. ಅವರಿಗೆ ನಿಖರವಾಗಿ ಎಲ್ಲಿಗೆ ಹೋಗಬೇಕೆಂಬುದು ತಿಳಿದಿತ್ತು. ಮರದ ಬಾಗಿಲನ್ನು ಒಡೆದ ಅವರು ಚಿನ್ನದ ಟಾಯ್ಲೆಟನ್ನು ಅದರಿಂದ ನೀರು ಸುರಿಯುತ್ತಿದ್ದರು ಲೆಕ್ಕಿಸದೇ ಕೆಲ ನಿಮಿಷಗಳಲ್ಲಿ ಅಲ್ಲಿಂದ ಎಬ್ಬಿಸಿ ತೆಗೆದುಕೊಂಡು ಹೋಗಿದ್ದರು. ಹೆಚ್ಚೆಂದರೆ ಈ ದರೋಡೆ ಪ್ರಕರಣಕ್ಕೆ ಅವರು ಕೇವಲ 5 ನಿಮಿಷವನ್ನಷ್ಟೇ ವ್ಯಯ ಮಾಡಿದ್ದರಬಹುದು.
ಸಾಕಷ್ಟು ಸಿದ್ಧತೆ ಇಲ್ಲದೆ ಇಂತಹ ದಿಟ್ಟವಾದ ದಾಳಿ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಅಲ್ಲದೇ ಈ ಶೌಚಾಲಯ ಕಳ್ಳತನವಾಗುವ ಹಿಂದಿನ ದಿನ ಫೋಟೋ ತೆಗೆಯಲಾಗಿತ್ತು. ಆದರೆ ಹೀಗೆ ಕಳ್ಳತನವಾದ ಚಿನ್ನದ ಟಾಯ್ಲೆಟ್ ಮತ್ತೆಂದು ಸಿಕ್ಕೇ ಇಲ್ಲ. ಈ ಚಿನ್ನದ ಟಾಯ್ಲೆಟನ್ನು ಕರಗಿಸಿ ಸಣ್ಣಪುಟ್ಟ ಭಾಗಗಳಾಗಿ ಮಾಡಿ ಮಾರಾಟ ಮಾಡಿರಬಹುದು ಎಂದು ನಂಬಲಾಗಿದೆ. ಕಳ್ಳತನದ ನಡೆದ ನಂತರದ ವಾರಗಳಲ್ಲಿ ಚಿನ್ನವನ್ನು ಮಾರಾಟ ಮಾಡಲು ಡೋ ಮತ್ತು ಗುಕ್ಕುಕ್ ಕಳ್ಳರಲ್ಲಿ ಒಬ್ಬರಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಕಳ್ಳರು ಮಾತ್ರ ಸಿಕ್ಕಿಲ್ಲ, ಪ್ರಕರಣದ ವಿಚಾರಣೆ ಮುಂದುವರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ