ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವ ಕಂಪನಿಗಳಿಗೆ ಪ್ರೋತ್ಸಾಹಕ ಧನ ಘೋಷಿಸಿದ ಜಪಾನ್!

By Suvarna NewsFirst Published Sep 4, 2020, 7:22 PM IST
Highlights

ಕೊರೋನಾ ವೈರಸ್ ನಡುವೆ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಭಾರತ ಸರ್ಕಾರದ ಪ್ರಯತ್ನಗಳ ನಡುವೆ ಇದೀಗ ಜಪಾನ್ ಸರ್ಕಾರ ಭರ್ಜರಿ ಘೋಷಣೆ ಮಾಡಿದೆ. ಜಪಾನ್ ಮೂಲಕ ಕಂಪನಿಗಳು ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಳ್ಳುತ್ತಿದ್ದರೆ ಪ್ರೋತ್ಸಾಹಕ ಧನ ಹಾಗೂ ಸಬ್ಸಿಡಿ ನೀಡಲಿದೆ.

ಟೊಕಿಯೊ(ಸೆ.04): ಕೊರೋನಾ ವೈರಸ್ ಸಮಯದಲ್ಲಿ ಭಾರತ್ತೆ 20 ಮಲಿಯನ್ ಅಮೆರಿಕನ್ ಡಾಲರ್ ವಿದೇಶಿ ಬಂಡವಾಳ ಹರಿದು ಬಂದಿದೆ. ಇದೀಗ ಜಪಾನ್ ಕಂಪನಿಗಳು ಭಾರತದತ್ತ ಮುಖಮಾಡಿದೆ. ಇದರ ಬೆನ್ನಲ್ಲೇ ಜಪಾನ್ ಸರ್ಕಾರ ಭರ್ಜರಿ ಆಫರ್ ಘೋಷಿಸಿದೆ. ಚೀನಾದಲ್ಲಿರುವ ಜಪಾನ್ ಮೂಲದ ಕಂಪನಿಗಳು ಭಾರತ ಕ್ಕೆ ಸ್ಥಳಾಂತರಿಸುವ ಯೋಜನೆ ಇದ್ದರೆ, ಸರ್ಕಾರದಿಂದ ಪ್ರೋತ್ಸಾಹಕ ಧನ ಹಾಗೂ ಸಬ್ಸಿಡಿ ನೀಡಲಿದೆ.

ಭಾರತದ ‘ಮಿತ್ರ’ ಜಪಾನ್‌ ಪ್ರಧಾನಿ ಅಬೆ ರಾಜೀನಾಮೆ!...

ಸ್ಥಳಾಂತರಕ್ಕೆ ಬೇಕಾದ ನೆರವನ್ನು ಒದಗಿಸಲು  ಜಪಾನ್ ಸರ್ಕಾರ ಮುಂದಾಗಿದೆ. ಇದಕ್ಕಾಗಿ 221 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಮೀಸಲಿಟ್ಟಿದೆ. ಭಾರತ ಹಾಗೂ ಬಾಂಗ್ಲಾದೇಶಕ್ಕೆ ಚೀನಾದಲ್ಲಿರುವ ಜಪಾನ್ ಕಂಪನಿಗಳು ಸ್ಥಳಾಂತರ ಮಾಡಲು ಈ ಹಣ ಬಳಕೆ ಮಾಡಲು ಜಪಾನ್ ಸರ್ಕಾರ ನಿರ್ಧರಿಸಿದೆ.

ಡಿಜಿಟಲ್ ಸಮರಕ್ಕೆ ಸಿಕ್ಕ ಚೀನಾದಲ್ಲಿಯೂ ಮೋದಿ ಹವಾ;  ಆ ದೇಶದ ಸರ್ವೆ ತೆರೆದಿಟ್ಟ ಅಚ್ಚರಿ ಅಂಶ!

ಜಪಾನ್‌ನ ಪೂರೈಕ ಜಾಲ ಚೀನಾವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಕೊರೋನಾ ವೈರಸ್ ಕಾರಣದಿಂದ ಚೀನಾಗೆ ರಫ್ತು ಹಾಗೂ ಆಗಮನ ಸಂಪೂರ್ಣ ಸ್ಥಗಿತಗೊಂಡಿತ್ತು. ಇದು ಜಪಾನ್‌ಗೆ ತೀವ್ರ ಹೊಡೆತ ನೀಡಿತ್ತು. ಹೀಗಾಗಿ ಜಪಾನ್ ಇದೀಗ ಏಷ್ಯಾದತ್ತ ಚಿತ್ತ ನೆಟ್ಟಿದೆ.

click me!