Latest Videos

ಮೋಡರ್ನಾ ಲಸಿಕೆ ಪಡೆದ ಇಬ್ಬರು ಸಾವು: ವ್ಯಾಕ್ಸಿನ್ ಸ್ಥಗಿತಗೊಳಿಸಿದ ಜಪಾನ್!

By Suvarna NewsFirst Published Aug 30, 2021, 7:26 PM IST
Highlights
  • ಮೋಡರ್ನಾ ಇಂಕ್ ಕೋವಿಡ್ ಲಸಿಕೆ‌ಗೆ ಬ್ರೇಕ್ ಹಾಕಿದ ಜಪಾನ್
  • ಲಸಿಕೆ ಪಡೆದ ಇಬ್ಬರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಕ್ರಮ
  • ಕೊರೋನಾ ಹೆಚ್ಚಳದಿಂದ ತತ್ತರಿಸಿರುವ ಜಪಾನ್‌ಗೆ ಮತ್ತೊಂದು ಹೊಡೆತ

ಟೋಕಿಯೋ(ಆ.30): ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಸತತ ಹೋರಾಟ ನಡೆಸುತ್ತಿದೆ. ಜಪಾನ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಜಪಾನ್‌ನಲ್ಲಿ ಕೊರೋನಾ ವೈರಸ್ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ಲಸಿಕೆ ವಿತರಣೆ ಹೆಚ್ಚಿಸಲಾಗಿದೆ. ಮೋಡರ್ನಾ ಲಸಿಕೆ ಮೇಲೆ ಹಲವು ಆರೋಪಗಳು ಕೇಳಿಬಂದಿತ್ತು. ಇದೀಗ ಲಸಿಕೆ ಪಡೆದ ಇಬ್ಬರು ಸಾವನ್ನಪ್ಪಿದ ಕಾರಣ ಮೋಡರ್ನಾ ಲಸಿಕೆಯನ್ನು ಜಪಾನ್ ಸ್ಥಗಿತೊಗಳಿಸಿದೆ.

ಕೋವಿಶೀಲ್ಡ್‌ ಲಸಿಕೆ 1ನೇ, 2ನೇ ಡೋಸ್‌ ಅಂತರ ಕಡಿತ ?

ಜಪಾನ್ ಕೆಟ್ಟ ಕೊರೋನಾ ಪರಿಸ್ಥಿತಿ ಎದುರಿಸುತ್ತಿದೆ. ಇದರ ನಡುವೆ ಮೋಡರ್ನಾ ಲಸಿಕೆ ಸ್ಥಗಿತಗೊಳಿಸಿದ ಕಾರಣ ಒಟ್ಟು 2.6 ಮಿಲಿಯನ್ ಡೋಸ್ ಸಂಗ್ರಹಾಲಯದಲ್ಲಿ ಉಳಿದಿದೆ. ಇತ್ತ ಪ್ರತಿ ದಿನ 25,000 ಕೊರೋನಾ ಪ್ರಕರಣ ದಾಖಲಾಗುತ್ತಿದೆ. ಜೊತೆಗೆ ಡೆಲ್ಟಾ ಪ್ಲಸ್ ವೇರಿಯೆಂಟ್ ಕೂಡ ಜಪಾನ್ ನಿದ್ದೆಗೆಡಿಸಿದೆ.

ಒಕಿನಾವ, ಗುನ್ಮಾ ಪ್ರಾಂತ್ಯದಲ್ಲಿ ಮೋಡರ್ನಾ ಲಸಿಕೆಯಲ್ಲಿ ಕಪ್ಪು ಬಣ್ಣ ಹಾಗೂ ಗುಲಾಬಿ ಬಣ್ಣದ ವಸ್ತು ಪತ್ತೆಯಾಗಿತ್ತು. ಹೀಗಾಗಿ ಕಳೆದವಾರವೇ 1.63 ಮಿಲಿಯನ್ ಡೋಸ್ ಲಸಿಕೆ ವಿತರಣೆ ತಡೆಹಿಡಿಯಲಾಗಿತ್ತು. ಇದರ ಬೆನ್ನಲ್ಲೇ ಮೋಡರ್ನಾ ಲಸಿಕೆ ಪಡೆದ ಇಬ್ಬರು ಸಾವನ್ನಪಿರುವ ಕಾರಣ ತಾತ್ಕಾಲಿಕವಾಗಿ ಲಸಿಕೆ ವಿತರಣೆ ಸ್ಥಗಿತಗೊಳಿಸಲಾಗಿದೆ.

ಮಕ್ಕಳಿಗೆ ಕೊರೋನಾ ಲಸಿಕೆ: ಗುಡ್‌ನ್ಯೂಸ್‌ ಕೊಟ್ಟ ಝೈಡಸ್‌ ಸಂಸ್ಥೆ!

ಸಾವಿನ ಪ್ರಕರಣ ತನಿಖೆ ಮಾಡಲಾಗುತ್ತಿದೆ. ತಾತ್ಕಾಲಿಕವಾಗಿ ಲಸಿಕೆ ಸ್ಥಗಿತ ಮಾಡಲಾಗಿದೆ. ತನಿಖೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಪಾನ್ ಸರ್ಕಾರ ಹೇಳಿದೆ. ಮೋಡರ್ನಾ ಲಸಿಕೆಯಲ್ಲಿ ಕಲುಷಿತ ಪದಾರ್ಥಗಳೇ ಸಾವಿಗೆ ಕಾರಣ ಎಂಬುದು ಪ್ರಾಥಮಿಕ ತನಿಖಾ ವರದಿಯಾಗಿದೆ.

ಲಸಿಕೆ ಪಡೆದ ಬಳಿಕವೂ ಹಲವರು ಅಡ್ಡಪರಿಣಾಮದಿಂದ ಬಳಲಿದ್ದಾರೆ. ಹೀಗಾಗಿ ಈ ಎಲ್ಲಾ ವರದಿ ಆಧರಿ ಮೋಡರ್ನಾ ಲಸಿಕೆ ಸ್ಥಗಿತಗೊಳಿಸಲಾಗಿದೆ ಎಂದು ಜಪಾನ್ ಹೇಳಿದೆ. 

click me!