ಮಾವಿನ ರಫ್ತುದಾರರಿಗೆ ಬಿಗ್ ಶಾಕ್: ಸತತ ಎರಡು ದಶಕಗಳ ಬಳಿಕ ಭಾರತದ ಹಣ್ಣಿಗೆ ಜಪಾನ್ ನೋ ಎಂಟ್ರಿ!

Published : May 28, 2026, 11:32 AM IST
mangoes

ಸಾರಾಂಶ

Indian Mango Export Ban: ಜಪಾನ್ ಭಾರತದ ಅತ್ಯಂತ ಪ್ರಮುಖ ಮಾವು ಖರೀದಿದಾರ ರಾಷ್ಟ್ರವಲ್ಲದಿದ್ದರೂ, ಅಲ್ಲಿನ ಈ ನಿರ್ಧಾರದಿಂದ ರಫ್ತುದಾರರು ಅಸಮಾಧಾನಗೊಂಡಿದ್ದಾರೆ. ಸಂಸ್ಕರಣೆ ಮತ್ತು ಗುಣಮಟ್ಟದ ನಿಯಂತ್ರಣದಲ್ಲಿ ಜಪಾನ್ ತನ್ನ ಏಕಸ್ವಾಮ್ಯವನ್ನು ಸಾಧಿಸಲು ಬಯಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಭಾರತೀಯ ಮಾವಿನ ಹಣ್ಣುಗಳು ಜಾಗತಿಕವಾಗಿ ಮನ್ನಣೆ ಪಡೆಯುತ್ತಿರುವ ಬೆನ್ನಲ್ಲೇ, ಈ ಋತುವಿನಲ್ಲಿ ಜಪಾನ್ ಭಾರತದಿಂದ ಮಾವಿನ ಹಣ್ಣುಗಳ ಆಮದನ್ನು ಸ್ಥಗಿತಗೊಳಿಸಿದೆ. ಭಾರತದ ಸಂಸ್ಕರಣಾ ಕೇಂದ್ರಗಳಲ್ಲಿ ಉತ್ಪಾದನಾ ವ್ಯತ್ಯಯಗಳು ಕಂಡುಬಂದಿವೆ ಎಂದು ಜಪಾನ್‌ನ ತಪಾಸಣಾ ತಂಡ ವರದಿ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

2006 ರಿಂದ ಪ್ರತಿ ವರ್ಷ ಟನ್‌ಗಟ್ಟಲೆ ಕೇಸರ್, ಅಲ್ಫಾನ್ಸೊ, ಲಂಗ್ರಾ ಮತ್ತು ಬಂಗನಪಲ್ಲಿ ತಳಿಗಳು ಜಪಾನ್‌ಗೆ ರಫ್ತಾಗುತ್ತಿದ್ದವು. ಆದರೆ ಎರಡು ದಶಕಗಳ ನಂತರ ಈ ವರ್ಷ ನಿಷೇಧ ಹೇರಲಾಗಿದೆ. ಈ ಹಿಂದೆ 1986ರಲ್ಲಿ ಹಣ್ಣಿನ ನೊಣಗಳ ಬಾಧೆಯ ಕಾರಣಕ್ಕೆ ಜಪಾನ್ ಭಾರತೀಯ ಮಾವಿನ ಹಣ್ಣುಗಳನ್ನು ನಿಷೇಧಿಸಿತ್ತು. ಆ ನಿಷೇಧವು 20 ವರ್ಷಗಳ ನಂತರವಷ್ಟೇ ತೆರವುಗೊಂಡಿತ್ತು.

ಪ್ರತಿ ವರ್ಷ ಮಾವಿನ ಸೀಸನ್ ಆರಂಭವಾಗುವ ಮೊದಲು, ಜಪಾನ್ ತನ್ನ ನಿರೀಕ್ಷಕರನ್ನು ಭಾರತಕ್ಕೆ ಕಳುಹಿಸುತ್ತದೆ. ಅವರು ಇಲ್ಲಿನ 'ವೇಪರ್ ಹೀಟ್ ಟ್ರೀಟ್‌ಮೆಂಟ್' (VHT) ಪ್ರಕ್ರಿಯೆಯನ್ನು ಪರಿಶೀಲಿಸುತ್ತಾರೆ. ಇದು ರಾಸಾಯನಿಕ ಮುಕ್ತ ಪ್ರಕ್ರಿಯೆಯಾಗಿದ್ದು, ಬಿಸಿ ಮತ್ತು ಆರ್ದ್ರ ಗಾಳಿಯ ಮೂಲಕ ಮಾವಿನ ಹಣ್ಣುಗಳನ್ನು ಕೀಟಮುಕ್ತವಾಗಿರಿಸುತ್ತದೆ.

ಈ ವರ್ಷವೂ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ರೆಹಮಾನ್‌ಪುರಕ್ಕೆ ಬಂದಿದ್ದ ಜಪಾನ್‌ನ ಕ್ವಾರಂಟೈನ್ ಅಧಿಕಾರಿಗಳ ತಂಡವು, ಭಾರತೀಯ ಸಂಸ್ಕರಣಾ ಕೇಂದ್ರಗಳಲ್ಲಿ ಸೋಂಕು ನಿವಾರಕ ಕ್ರಮಗಳಲ್ಲಿ ಲೋಪಗಳನ್ನು ಪತ್ತೆಹಚ್ಚಿದೆ. ಈ ಹಿನ್ನೆಲೆಯಲ್ಲಿ ಆಮದಿನ ಮೇಲೆ ನಿಷೇಧ ಹೇರಲಾಗಿದೆ.

ಮಾರ್ಚ್ 25 ರ ನಂತರ ಭಾರತ ನೀಡಿರುವ ತಪಾಸಣಾ ಪ್ರಮಾಣಪತ್ರಗಳನ್ನು ಹೊಂದಿರುವ ಮಾವಿನ ರಫ್ತುಗಳನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ ಎಂದು ಜಪಾನ್‌ನ 'ಯೊಕೊಹಾಮಾ ಸಸ್ಯ ಸಂರಕ್ಷಣಾ ಸಂಸ್ಥೆ' ತಿಳಿಸಿದೆ. ಕಾರ್ಯಾಚರಣೆಯ ಮಾನದಂಡಗಳನ್ನು ಸುಧಾರಿಸಿದ ನಂತರವಷ್ಟೇ ಮಾವುಗಳನ್ನು ಸ್ವೀಕರಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

"ಭಾರತೀಯ ಮಾವಿನ ಗುಣಮಟ್ಟ ಹೆಚ್ಚಿಸಲು ಸಂಪೂರ್ಣ ಹೊಸ ಸಂಸ್ಕರಣಾ ವ್ಯವಸ್ಥೆಯಿದೆ. ಒಂದು ವೇಳೆ ಜಪಾನ್ ನಿರ್ಮಿತ ವ್ಯವಸ್ಥೆಗಳಿಗೆ ಮಾತ್ರ ಅನುಮೋದನೆ ನೀಡಿದರೆ, ಅದು ತಾಂತ್ರಿಕ ಪಾಲನೆಗಿಂತ ಹೆಚ್ಚಾಗಿ ಏಕಸ್ವಾಮ್ಯ ಮತ್ತು ರಾಜತಾಂತ್ರಿಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ" ಎಂದು ಉತ್ತರ ಪ್ರದೇಶದ ರಫ್ತುದಾರ ಅಕ್ರಮ್ ಬೇಗ್ ಅಭಿಪ್ರಾಯಪಟ್ಟಿದ್ದಾರೆ.

ಅತೃಪ್ತ ರಫ್ತುದಾರರು

ಜಪಾನ್ ತನ್ನ ಕಟ್ಟುನಿಟ್ಟಾದ ಗುಣಮಟ್ಟದ ನಿಯಮಗಳಿಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು 2007ರಲ್ಲಿ ತಿರುಪತಿಯಲ್ಲಿ ಮೊದಲ VHT ಪ್ಲಾಂಟ್ ಆರಂಭಿಸಿತ್ತು. ಅಂದಿನಿಂದ ಭಾರತವು ಬಹಳ ಎಚ್ಚರಿಕೆಯಿಂದ ಸಂಸ್ಕರಿಸಿದ ನಂತರವೇ ಮಾವಿನ ಹಣ್ಣುಗಳನ್ನು ರಫ್ತು ಮಾಡುತ್ತಿದೆ.

ಜಪಾನ್ ದೊಡ್ಡ ಮಾರುಕಟ್ಟೆಯಲ್ಲದಿದ್ದರೂ, ಪ್ರಸ್ತುತ ದೇಶೀಯ ಮಾರುಕಟ್ಟೆಯೂ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಈ ನಿಷೇಧವು ರಫ್ತುದಾರರಿಗೆ ಹೊರೆಯಾಗಿದೆ. "ಎಲ್ಲಾ ಕೇಂದ್ರಗಳ ಮಾವಿನ ಹಣ್ಣುಗಳನ್ನು ತಿರಸ್ಕರಿಸಲು ಹೇಗೆ ಸಾಧ್ಯ? ತಪಾಸಣಾ ತಂಡವು ಈ ಕೇಂದ್ರಗಳನ್ನು ಹೇಗಾದರೂ ಮಾಡಿ ಅನುತ್ತೀರ್ಣಗೊಳಿಸುವ ಉದ್ದೇಶದಿಂದಲೇ ಬಂದಂತಿದೆ" ಎಂದು ಬೇಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ 5 ಮಾವು ರಫ್ತುದಾರರು

ಕಳೆದ ವರ್ಷ ಜಪಾನ್‌ಗೆ ಸುಮಾರು ಎರಡು ಮಿಲಿಯನ್ ಡಾಲರ್ ಮೌಲ್ಯದ ಮಾವಿನ ಹಣ್ಣುಗಳನ್ನು (ವಿಶೇಷವಾಗಿ ಗುಜರಾತ್‌ನ ಕೇಸರ್) ರಫ್ತು ಮಾಡಲಾಗಿತ್ತು. ಭಾರತದ ಟಾಪ್ 5 ಮಾವು ರಫ್ತು ರಾಷ್ಟ್ರಗಳೆಂದರೆ:

ಅಮೆರಿಕ (US)
ಯುಎಇ (UAE)
ಯುನೈಟೆಡ್ ಕಿಂಗ್‌ಡಮ್ (UK)
ನೆದರ್ಲೆಂಡ್ಸ್
ಸೌದಿ ಅರೇಬಿಯ

ಭಾರತ ಸರ್ಕಾರವು ಈ ನಿಷೇಧದ ಬಗ್ಗೆ ಬಹಿರಂಗವಾಗಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಭಾರತೀಯ ಮಾವು ಬೆಳೆಗಾರರ ​​ಸಂಘದ ಅಧ್ಯಕ್ಷ ಎಸ್. ಇನ್ಸ್ರಾಮ್ ಅಲಿ ಅವರು, ಕೇಂದ್ರ ಸರ್ಕಾರ ಈಗಾಗಲೇ ಜಪಾನ್ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಶೀಘ್ರದಲ್ಲೇ ಪರಿಹಾರ ಸಿಗುವ ಭರವಸೆಯಿದೆ ಎಂದು ತಿಳಿಸಿದ್ದಾರೆ. ಆದರೆ, ಸೀಸನ್ ಮುಗಿಯುತ್ತಾ ಬಂದಿರುವುದರಿಂದ ಈ ವರ್ಷ ನಿಷೇಧ ತೆರವುಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Ope. Safed sagar: ಆಗಸದಿಂದ ಭಾರತದ ಬೆಂಕಿ ಮಳೆ- ಪಾಕಿಗಳ ಹುಟ್ಟಡಗಿಸಿದ್ದ ಯೋಧರು
ಇರಾನ್‌ ಜತೆಗಿನ ಸಂಧಾನದ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ, ಒಬಾಮಾ ಮಾಡಿದಂತೆ ಮಾಡಲ್ಲ: ಟ್ರಂಪ್