ಇರಾನ್‌ ಜತೆಗಿನ ಸಂಧಾನದ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ, ಒಬಾಮಾ ಮಾಡಿದಂತೆ ಮಾಡಲ್ಲ: ಟ್ರಂಪ್

Gowthami K   | Kannada Prabha
Published : May 26, 2026, 09:50 AM IST
Donald Trump

ಸಾರಾಂಶ

ಇರಾನ್‌ ಜೊತೆಗಿನ ಮಾತುಕತೆ ಉತ್ತಮವಾಗಿ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಒಂದೋ ಅದ್ಭುತ ಒಪ್ಪಂದವಾಗಲಿದೆ ಅಥವಾ ಒಪ್ಪಂದವೇ ಆಗುವುದಿಲ್ಲ ಎಂದಿರುವ ಅವರು, ಅಬ್ರಹಾಂ ಅಕಾರ್ಡ್‌ಗೆ ಸಹಿ ಹಾಕುವಂತೆಯೂ ಒತ್ತಾಯಿಸಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಖಮೇನಿಯವರ ನಿರ್ಧಾರದಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್‌: ಇರಾನ್‌ ಜತೆಗಿನ ಸಂಧಾನದ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಒಂದೋ ಅದ್ಭುತವಾದ ಒಪ್ಪಂದ ಏರ್ಪಡಲಿದೆ. ಇಲ್ಲವೇ ಒಪ್ಪಂದವೇ ಆಗುವುದಿಲ್ಲ’ ಎಂದು ಹೇಳಿದ್ದಾರೆ.ಈ ಬಗ್ಗೆ ಟ್ರುತ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಇರಾನ್ ಜೊತೆ 2015ರಲ್ಲಿ ಒಬಾಮಾ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಪರಮಾಣು ಒಪ್ಪಂದಕ್ಕೆ ಪೂರ್ಣ ವಿರುದ್ಧವಾದ ನಿರ್ಧಾರ ನನ್ನದಾಗಿರಲಿದೆ’ ಎಂದಿದ್ದಾರೆ. ಆ ಒಪ್ಪಂದದಲ್ಲಿ ಇರಾನ್‌ ಪರಮಾಣುವಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ತಗ್ಗಿಸಿತ್ತು ಹಾಗೂ ಅದಕ್ಕೆ ಪ್ರತಿಯಾಗಿ ಅಮೆರಿಕ ನಿರ್ಬಂಧಗಳನ್ನು ಸಡಿಲಿಸಿತ್ತು. ಆದರೆ ತಾವು ಇರಾನ್‌ ಮೇಲೆ ಅಣ್ವಸ್ತ್ರ ಹೊಂದದಂತೆ ಅಧಿಕ ಒತ್ತಡ ಹೇರುತ್ತೇವೆ ಎಂಬರ್ಥದಲ್ಲಿ ಟ್ರಂಪ್‌ ಹೇಳಿದ್ದಾರೆ.

ಅಬ್ರಹಾಂ ಅಕಾರ್ಡ್‌ ಸೇರಿ:

ಇಸ್ರೇಲ್‌ ಜತೆ ಅರಬ್‌ ರಾಷ್ಟ್ರಗಳ ಸಂಬಂಧ ವೃದ್ಧಿಸಲೆಂದು ಸೃಷ್ಟಿಸಲಾಗಿರುವ ಅಬ್ರಹಾಂ ಅಕಾರ್ಡ್‌ಗೆ ಸಹಿ ಹಾಕುವಂತೆ ಅಧ್ಯಕ್ಷ ಟ್ರಂಪ್‌ ಅವರು ಇರಾನ್‌ ಹಾಗೂ ಅದರೊಂದಿಗಿನ ತಮ್ಮ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳಿಗೆ ಒತ್ತಾಯಿಸಿದ್ದಾರೆ. ‘ಎಲ್ಲಾ ರಾಷ್ಟ್ರಗಳು ಕಡ್ಡಾಯವಾಗಿ ಅಕಾರ್ಡ್‌ಗೆ ಸಹಿ ಮಾಡಬೇಕು. ಹಾಗೆ ಮಾಡದಿರಲು ಬಲವಾದ ಕಾರಣವಿದ್ದಲ್ಲಿ ಒಂದೆರಡು ದೇಶಗಳಿಗೆ ವಿನಾಯಿತಿ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಯುಎಇ ಮತ್ತು ಬಹ್ರೈನ್‌ ಈಗಾಗಲೇ ಅಕಾರ್ಡ್‌ನ ಭಾಗವಾಗಿವೆ. ಪ್ರಮುಖ ಸಂಧಾನಕಾರ ಪಾಕಿಸ್ತಾನ ಸೇರಿದಂತೆ ಸೌದಿ ಅರೇಬಿಯಾ, ಕತಾರ್, ಟರ್ಕಿ, ಈಜಿಪ್ಟ್ ಮತ್ತು ಜೋರ್ಡಾನ್‌ಗಳು ಇದಕ್ಕಿನ್ನೂ ಸಹಿ ಮಾಡಿಲ್ಲ.

ಡೀಲ್‌ ಬಗ್ಗೆ ಖಮೇನಿ ನಿರ್ಧಾರ

ಫೆ.28ರಂದು ಯುದ್ಧ ಶುರುವಾದಾಗಿನಿಂದ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡೇ ಇರದ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಯವರು ಒಪ್ಪಂದದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿರುವರಾದ ಕಾರಣ ಪ್ರಕ್ರಿಯೆಯಲ್ಲಿ ತಡವಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಜತೆಗೆ, ಖಮೇನಿ ಪ್ರಸ್ತುತ ಅಮೆರಿಕ ಪ್ರಸ್ತಾಪಿಸಿರುವ ಕರಡು ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಅಮೆರಿಕದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಖಮೇನಿ, ಇರಾನ್‌ನ ಯಾವ ಅಧಿಕಾರಿಯನ್ನೂ ನೇರವಾಗಿ ಭೇಟಿ ಆಗುತ್ತಿಲ್ಲ. ಅವರೊಂದಿಗಿನ ಎಲ್ಲಾ ಸಂವಹನಗಳು ಪತ್ರಗಳ ಮುಖೇನ ನಡೆಯುತ್ತಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕ್ ಪ್ರಜಾಪ್ರಭುತ್ವದ ಮುಖವಾಡ ಕಳಚಿದ ಸೈಫರ್‌; ಇಮ್ರಾನ್ ಖಾನ್ ಪದಚ್ಯುತಿಯ ಹಿಂದೆ ಅಮೆರಿಕದ ಕುತಂತ್ರ ಬಯಲು!
Viral: ನಡುಆಕಾಶದಲ್ಲೇ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದ ಲಘು ವಿಮಾನ: ರೆಕ್ಕೆ ಸೀಳಿಬಿದ್ದರೂ ಪ್ರಾಣಾಪಾಯದಿಂದ ಪಾರಾದ ಮಹಿಳೆ!