
ಇಸ್ಲಾಮಾಬಾದ್ (ಮೇ.1): ಭಾರತಕ್ಕೆ ಬೇಕಾಗಿರುವ ಕುಖ್ಯಾತ ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುವ ಸರಣಿ ಪ್ರಕರಣ ಮುಂದುವರೆದಿದ್ದು, ಇದೀಗ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್ ನಿಗೂಢ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಜೈಷ್ ಸಂಘಟನೆಯ ಪ್ರಮುಖ ಕಾರ್ಯಾಚರಣೆ ಸ್ಥಳಗಳ ಪೈಕಿ ಒಂದಾದ ಬಹಾವಲ್‌ಪುರದಲ್ಲಿ ನಿಗೂಢ ವಾಹನವೊಂದು ಡಿಕ್ಕಿ ಹೊಡೆದು ಸಲ್ಮಾನ್ ಅಜರ್ ಸಾವನ್ನಪ್ಪಿದ್ದಾನೆ. ಅಪಘಾತ ಹೇಗಾಯ್ತು? ಮಾಡಿದ್ದು ಯಾರು? ಎಂಬ ಮಾಹಿತಿ ರಹಸ್ಯವಾಗಿಯೇ ಉಳಿದಿದೆ. ಆದರೆ ಇತ್ತೀಚೆಗೆ ಪಾಕ್‌ನಲ್ಲಿ ನಡೆಯುತ್ತಿರುವ ಉಗ್ರರ ಹತ್ಯೆಯ ಹಿಂದಿನ ಶಕ್ತಿಯಾದ ಧುರಂಧರ್ ಕೈವಾಡವನ್ನು ಇಲ್ಲಿಯೂ ಶಂಕಿಸಲಾಗಿದೆ.
ಜೈಷ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ, ಭಾರತದ ಗಡಿಪ್ರದೇಶದಲ್ಲಿ ನಡೆದ ಹಲವು ಉಗ್ರ ಕೃತ್ಯಗಳ ಹಿಂದೆ ಈತನ ಕೈವಾಡದ ಶಂಕೆ ಇತ್ತು. ಜೊತೆಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾರತದ ವಿರುದ್ದ ದ್ವೇಷ, ಪ್ರಚೋದನಕಾರಿ ಭಾಷಣಗಳ ಮೂಲಕ ಈತ ಉಗ್ರ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದ.
ಕಳೆದ 2 ವಾರದಲ್ಲಿ ಪಾಕಿಸ್ತಾನದಲ್ಲಿ ಹೀಗೆ ಧುರಂದರ್ ದಾಳಿಗೆ ತುತ್ತಾದ ಮೂರನೇ ವ್ಯಕ್ತಿ ಈತ. ಎರಡು ದಿನಗಳ ಹಿಂದಷ್ಟೇ ಇಂಥದ್ದೇ ದಾಳಿಯಲ್ಲಿ ಲಷ್ಕರ್‌ನ ಶೇಖ್ ಯೂಸುಫ್ ಆಫ್ರಿದಿ ಸಾವನ್ನಪ್ಪಿದ್ದರೆ, ಅದಕ್ಕೂ ಮೊದಲು ನಡೆದ ದಾಳಿಯಲ್ಲಿ ಲಷ್ಕರ್ ಸಹ ಸಂಸ್ಥಾಪಕ ಅಮೀರ್ ಹಮ್ಜಾನ ಮೇಲೆ ಗುಂಡಿನ ದಾಳಿ ನಡೆದಿತ್ತಾದರೂ ಆದ ಬದುಕುಳಿದಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ