ಮೀನು ಹಿಡಿಯಲು ಹೋದ ದಂಪತಿಗೆ ಜಾಕ್‌ಪಾಟ್, ಗಾಳಕ್ಕೆ ಸಿಕ್ಕ ಬ್ಯಾಗ್‌ನಲ್ಲಿತ್ತು 83 ಲಕ್ಷ ರೂ!

By Chethan Kumar  |  First Published Jun 3, 2024, 10:32 PM IST

ವಿಹಾರಕ್ಕಾಗಿ ದಂಪತಿ ಕೆರೆಯತ್ತ ತೆರಳಿದ್ದಾರೆ. ಇಡೀ ದಿನದ ಸಂಭ್ರಮ ಮತ್ತಷ್ಟು ಹೆಚ್ಚಿಸಲು ಮೀನಿಗೆ ಗಾಳ ಹಾಕುವ ನಿರ್ಧಾರ ಮಾಡಿದ್ದಾರೆ. ಹೀಗೆ ಮೀನಿಗೆ ಹಾಕಿದ ಗಾಳದಲ್ಲಿ ಬ್ಯಾಗ್ ಒಂದು ಸಿಲುಕಿಕೊಂಡಿದೆ. ಮೇಲಕ್ಕೆ ಎಳೆದು ನೋಡಿದಾಗ ಬರೋಬ್ಬರಿ 83 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ.
 


ನ್ಯೂಯಾರ್ಕ್(ಜೂನ್ 03) ಮೀನು ಹಿಡಿಯಲು ಹೋಗಿ ನಡೆದ ಅವಾಂತರಗಳ ಕುರಿತು ಸಾಕಷ್ಟು ಘಟನೆಗಳು ಕೇಳಿದ್ದೇವೆ. ಆದರೆ ಇಲ್ಲೊಂದು ದಂಪತಿ ವಿಹಾರ ಹಾಗೂ ಮೋಜಿಗಾಗಿ ಮೀನು ಹಿಡಿಯಲು ಕೆರೆಗೆ ತೆರಳಿ ಇದೀಗ ಜೀವನವೇ ಬದಲಾಗಿದೆ.  ಹೌದು, ಕೆರೆಯಲ್ಲಿ ಮೀನಿಗೆ ಗಾಳ ಹಾಕಿದ್ದಾರೆ. ಆದರೆ ಗಾಳಕ್ಕೆ ಮೀನು ಸಿಗಲಿಲ್ಲ. ಬದಲಾಗಿ ಬ್ಯಾಗ್ ಒಂದು ಸಿಲುಕಿದೆ. ಎಳೆದು ನೋಡಿದಾಗ ದಂಪತಿಗೆ ಅಚ್ಚರಿಯಾಗಿದೆ.ಕಾರಣ ಗಾಳಕ್ಕೆ ಸಿಲುಕಿದ ಬ್ಯಾಗ್‌ನಲ್ಲಿ ಬರೋಬ್ಬರಿ 83 ಲಕ್ಷ ರೂಪಾಯಿ ನಗದ ಹಣ ಭದ್ರವಾಗಿತ್ತು. ಈ ಘಟನೆ ನಡೆದಿರುವುದು ನ್ಯೂಯಾರ್ಕ್‌ನಲ್ಲಿ. ಮತ್ತೊಂದು ವಿಶೇಷ ಅಂದರೆ ಪೊಲೀಸರು ದಂಪತಿಗೆ ಜಾಕ್‌ಪಾಟ್ ಕೊಟ್ಟಿದ್ದಾರೆ.

ಕೆರೆ, ನದಿಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾದ, ಮೃತಪಟ್ಟ ಘಟನೆಗಳೇ ಹೆಚ್ಚಾಗಿ ಕೇಳುತ್ತಿದ್ದ ನಡುವೆ ಮೀನು ಹಿಡಿಯುವಾಗ ಈ ರೀತಿಯ ಅದೃಷ್ಟದ ಬಾಗಿಲು ತೆರೆಯಲಿದೆ ಅನ್ನೋ ಸುದ್ದಿ ಎಲ್ಲೆಡೆ ಹರಡಿದೆ. ಜೇಮ್ಸ್ ಕೇನ್ ಹಾಗೂ ಬಾರ್ಬಿ ಅಗೋಸ್ಟಿನಿ ದಂಪತಿ ನ್ಯೂಯಾರ್ಕ್‌ನ ಕೆರೆಯೊಂದಕ್ಕೆ ಮೀನು ಹಿಡಿಯಲು ತೆರಳಿದ್ದಾರೆ. ಈ ದಂಪತಿಗೆ ಮೀನು ಹಿಡಿಯವುದು ಒಂದು ಹವ್ಯಾಸವಾಗಿತ್ತು. ಬಿಡುವಿನ ಸಮಯದಲ್ಲಿ ಹೀಗೆ ಮೀನು ಹಿಡಿಯುತ್ತಾ ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ.

Tap to resize

Latest Videos

undefined

2,800 ಕೋಟಿ ರೂ ಲಾಟರಿ ಜಾಕ್‌ಪಾಟ್, ಮೊತ್ತ ಸ್ವೀಕರಿಸಲು ಹೋದ ವ್ಯಕ್ತಿಗೆ ಶಾಕ್ ಕೊಟ್ಟ ಕಂಪನಿ!

ಆದರೆ ಈ ಬಾರಿಯ ಹಾಕಿದ ಗಾಳ ಮಾತ್ರ ಹೊಸ ಇತಿಹಾಸ ರಚಿಸಿದೆ. ಇಬ್ಬರು ಗಾಳ ರೆಡಿ ಮಾಡಿಕೊಂಡು ಕೆರೆಗೆ ಹಾಕಿದ್ದಾರೆ. ಕೆಲ ಹೊತ್ತು ಮೌನವಾಗಿ ಕುಳಿತು ಕೆರೆಯತ್ತ ನೋಡಿದ್ದಾರೆ. ಮೀನು ಸಿಲುಕಿದ ರೀತಿಯ ಕಾಣಲಿಲ್ಲ. ಹೀಗಾಗಿ ಇಬ್ಬರು ಬೇರೆ ಕಡೆ ಗಾಳ ಹಾಕಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಗಾಳ ಎಳೆಯಲು ಮುಂದಾದಗ ಏನೋ ಸಿಲುಕಿದ ಅನುಭವವಾಗಿದೆ.

ಮೀನು ಸಿಲುಕಿದೆ ಎಂದು ಮೆಲ್ಲನೆ ಗಾಳದ ದಾರ ಎಳೆಯಲು ಆರಂಭಿಸಿದ್ದಾರೆ. ಆದರೆ ಗಾಳ ಎಳೆಯುತ್ತಿದ್ದಂತೆ ಇದು ಮೀನಲ್ಲ ಎಂದು ಜೇಮ್ಸ್ ಕೇನ್ ಹೇಳಿದ್ದಾರೆ. ಸರಿ ನೋಡೋ ಬಿಡೋಣ ಎಂದು ನಿಧಾನವಾಗಿ ಗಾಳದ ದಾರ ಎಳೆದಿದ್ದಾರೆ. ಮೇಲಕ್ಕೆ ಬರುತ್ತಿದ್ದಂತೆ ಭಾರ ಹೆಚ್ಚಾಗಿದೆ. ದಂಪತಿಗಳ ಕುತೂಹಲವೂ ಹೆಚ್ಚಾಗಿದೆ. ನಿಧಾನವಾಗಿ ಮೇಲಕ್ಕೆ ಎಳೆದಾಗ ಬ್ಯಾಗ್ ಒಂದು ಪತ್ತೆಯಾಗಿದೆ.

ಬ್ಯಾಗ್ ನೀರಿನಿಂದ ಮೇಲಕ್ಕೆ ಎತ್ತಬೇಕೋ ಅಲ್ಲೆ ಬಿಡಬೇಕೋ ಅನ್ನೋ ಗೊಂದಲವೂ ಸೃಷ್ಟಿಯಾಗಿದೆ. ಆದರೆ ನಾವು ಹಾಕಿದ ಗಾಳಕ್ಕೆ  ಸಿಕ್ಕ ಬ್ಯಾಗ್‌ನಲ್ಲಿ ಏನಿದೆ ನೋಡೋಣ ಎಂದು ಮೇಲಕ್ಕೆ ಎಳೆದು ಹಾಾಕಿ ತೆರೆದು ನೋಡಿದ್ದಾರೆ. ಈ ವೇಳೆ 100 ಅಮೆರಿಕನ್ ಡೌಲರ್ ಮೊತ್ತದ ನೋಟುಗಳೇ ತುಂಬಿತ್ತು. ನೀರಿನಿಂದ ಬಹುತೇಕ ನೋಟುಗಳು ಒದ್ದೆಯಾಗಿತ್ತು. ಮೇಲಕ್ಕೆ ಎಳೆದು ನೀರು ತೊಯ್ದು ಹೋಗುವಂತೆ ಬಿಟ್ಟಿದ್ದರೆ. ಬಳಿಕ ಎಣಿಸಿದಾಗ ಭಾರತೀಯ ರೂಪಾಯಿಗಳಲ್ಲಿ 83 ಲಕ್ಷ ರೂಪಾಯಿ ಪತ್ತೆಯಾಗಿತ್ತು.

ಭಾರಿ ಮೊತ್ತ, ಬ್ಯಾಗ್ ಕಂಡ ದಂಪತಿಗಳು ಬೆಚ್ಚಿ ಬಿದ್ದಿದ್ದರು. ಯಾರೋ ಕದ್ದು ತಂದು ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಕೆರೆಗೆ ಎಸೆದ ಸಾಧ್ಯತೆ ಇದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡುವುದು ಒಳಿತು ಎಂದು ನಿರ್ಧರಿಸಿದ್ದರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುತ್ತ ಮುತ್ತಲಿನ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಕುರಿತು ಪರಿಶೀಲಿಸಿದ್ದಾರೆ. ಕೆಲ ತಿಂಗಳಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆದರೆ ಎಲ್ಲೂ ಕೂಡ ಈ ರೀತಿಯ ಹಣ ಕಳುವಾಗಿರುವ ದೂರು, ಸಿಸಿಟಿವಿಯಲ್ಲಿ ಕೆರೆಗೆ ಬ್ಯಾಗ್ ಹಾಕಿದ ದೃಶ್ಯಗಳು ಪತ್ತೆಯಾಗಿಲ್ಲ.

ತಪ್ಪಿ ಲಾಟರಿ ಬಟನ್ ಒತ್ತಿದ ಮಹಿಳೆಗೆ ಜಾಕ್‌ಪಾಟ್, ಬರೋಬ್ಬರಿ 8 ಕೋಟಿ ರೂ ಬಹುಮಾನ!

ಒಂದೆಡೆರು ದಿನ ಈ ಪ್ರಕರಣದ ಹಿಂದೆ ತನಿಖೆ ನಡೆಸಿದ ಪೊಲೀಸರಿಗೆ ಇದು ಯಾರ ಹಣ ಅನ್ನೋದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಕೊನೆಗೆ ಈ ಹಣ ನೀವೆ ಇಟ್ಟುಕೊಳ್ಳಿ, ಇದರ ವಾರಸುದಾರರು ಯಾರು ಅನ್ನೋದು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ದಂಪತಿಗೆ ಹೇಳಿದ್ದಾರೆ. ಮೀನಿಗೆ ಗಾಳ ಹಾಕಿ ಇದೀಗ 83 ಲಕ್ಷ ರೂಪಾಯಿ ಒಡೆಯರಾಗಿದ್ದಾರೆ.
 

click me!