ತುರ್ತು ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದಾಗಲೇ ಹೆದ್ದಾರಿಯಲ್ಲಿ ವಿಮಾನ ಪತನ: ಹಲವು ವಾಹನಗಳು ಜಸ್ಟ್ ಮಿಸ್

Published : Jul 25, 2025, 01:16 PM ISTUpdated : Jul 25, 2025, 01:22 PM IST
Plane crashes at Italian highway

ಸಾರಾಂಶ

ಇಟಲಿಯ ಬ್ರೆಸಿಕಾದಲ್ಲಿ ಪುಟ್ಟ ವಿಮಾನವೊಂದು ತುರ್ತು ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದ ವೇಳೆ ಹೆದ್ದಾರಿಯಲ್ಲೇ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಅಹ್ಮದಾಬಾದ್ ವಿಮಾನ ದುರಂತವನ್ನು ಭಾರತೀಯರು ಯಾರು ಮರೆಯಲಾರರು. ಈ ಘಟನೆ ನಡೆದು ಹೆಚ್ಚು ದಿನಗಳು ಕಳೆದಿಲ್ಲ, ಇದಾದ ನಂತರ ಒಂದಾದ ನಂತರ ಒಂದರಂತೆ ಸರಣಿಯಾಗಿ ವಿಮಾನ ಅವಘಡಗಳು ಸಂಭವಿಸುತ್ತಲೇ ಇವೆ. ನಿನ್ನೆಯಷ್ಟೇ ರಷ್ಯಾದ 50 ಜನರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಈಗ ಮತ್ತೊಂದು ವಿಮಾನ ದುರಂತದ ವೀಡಿಯೋ ವೈರಲ್ ಆಗಿದೆ.

ಹೆದ್ದಾರಿಯಲ್ಲೇ ವಿಮಾನ ಪತನ

ಪುಟ್ಟ ವಿಮಾನವೊಂದು ಪತನಗೊಂಡು ವಾಹನ ಕಿಕ್ಕಿರಿದು ತುಂಬಿದ್ದ ಹೆದ್ದಾರಿಯ ಮೇಲೆಯೇ ಬಿದ್ದಿದ್ದು, ಈ ಅವಘಢದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಇಟಲಿಯ ಬ್ರೆಸಿಕಾದಲ್ಲಿ . ಇದು ಪುಟ್ಟ ವಿಮಾನವಾಗಿದ್ದು, ವಿಮಾನದಲ್ಲಿದ್ದ 71 ವರ್ಷದ ಪೈಲಟ್ ಹಾಗೂ ಅವರ ಪತ್ನಿ ಈ ದುರಂತದಲ್ಲಿ ಮೃತಪಟ್ಟಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕಳೆಮುಖವಾಗಿ ರಸ್ತೆಗೆ ಬಿದ್ದ ವಿಮಾನ ಒಮ್ಮೆಲೇ ಬೆಂಕಿಗಾಹುತಿಯಾಗಿದ್ದು, ಘಟನೆಯಲ್ಲಿ ಪ್ರಯಾಣಿಕ ಹಾಗೂ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆಯುವ ವೇಳೆ ಈ ರಸ್ತೆಯಲ್ಲಿ ವಾಹನಗಳು ಸಾಗುತ್ತಿದ್ದು, ಕೆಲ ವಾಃನಗಳು ಕೂದಲೆಳೆ ಅಂತರದಿಂದ ಈ ಅವಘಡದಿಂದ ಬಚಾವಾಗಿವೆ. ಒಂದು ವೇಳೆ ಈ ವಿಮಾನ ವಾಹನಗಳ ಮೇಲೆ ಬಿದ್ದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇತ್ತು.

ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವಾಹನ ಚಾಲಕರಿಗೂ ಗಾಯ

ಭೀಕರ ಅಪಘಾತದಲ್ಲಿ ಮಿಲನ್‌ನ ಪೈಲಟ್ ಮತ್ತು ವಕೀಲರಾಗಿದ್ದ 75 ವರ್ಷದ ಸೆರ್ಗಿಯೊ ರವಾಗ್ಲಿಯಾ ಹಾಗೂ ಅವರ ಸಂಗಾತಿ 60 ವರ್ಷ ಪ್ರಾಯದ ಆನ್ ಮರಿಯಾ ಡಿ ಸ್ಟೆಫಾನೊ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಿಮಾನ ರಸ್ತೆಗೆ ಬಿದ್ದಿದ್ದರಿಂದ ಈ ವೇಳೆ ರಸ್ತೆಯಲ್ಲಿದ್ದ ವಾಹನಗಳ ಇಬ್ಬರು ಚಾಲಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಒಮ್ಮೆಗೆ ಹೊಗೆ ಎದ್ದು ಬೆಂಕಿ ಆವರಿಸಿದ್ದನ್ನು ಕಾಣಬಹುದು. ಅದೇ ವೇಳೆ ರಸ್ತೆಯಲ್ಲಿ ಕಾರುಗಳು ಓಡಾಡುತ್ತಿದ್ದವು.

ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ ದುರಂತ

ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಪೈಲಟ್‌ ರವಾಗ್ಲಿಯಾ ಪ್ರಯತ್ನಿಸುತ್ತಿರುವಂತೆ ಕಂಡುಬಂದರೂ ವೇಗವನ್ನು ಮರಳಿ ಪಡೆಯಲು ವಿಫಲವಾದ ಕಾರಣ ವಿಮಾನವು ನಿಯಂತ್ರಣ ತಪ್ಪಿ ಉರುಳಿತು ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಬಂದರೂ ವಿಮಾನದಲ್ಲಿದ್ದವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಘಟನೆಯ ಬಳಿಕ ಇಟಲಿಯ ರಾಷ್ಟ್ರೀಯ ವಿಮಾನ ಸುರಕ್ಷತಾ ಸಂಸ್ಥೆಯ ಸಲಹೆಗಾರರೊಬ್ಬರು ಬುಧವಾರ ಬ್ರೆಸಿಯಾಗೆ ಆಗಮಿಸಿದ್ದು ಅಪಘಾತದ ಕಾರಣದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!