ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಯುದ್ಧಕ್ಕೆ ಕಾರಣವಾದ ಶಿವ ದೇಗುಲದ ಹಿನ್ನೆಲೆ ಏನು? ನಿರ್ಮಿಸಿದ್ದು ಯಾರು?

Published : Jul 25, 2025, 12:04 PM ISTUpdated : Jul 25, 2025, 12:11 PM IST
Thailand and Cambodia Clash Over Ancient Temple

ಸಾರಾಂಶ

ಗಡಿಯಲ್ಲಿರುವ ಹಿಂದೂ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ವಿಕೋಪಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಆ ದೇಗುಲದ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಬ್ಯಾಂಕಾಕ್: ಗಡಿಯಲ್ಲಿರುವ ಹಿಂದೂ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ದಶಕಗಳಿಂದ ನಡೆಯುತ್ತಿರುವ ತಿಕ್ಕಾಟ ಈಗ ಸಂಘರ್ಷದ ರೂಪ ಪಡೆದುಕೊಂಡಿದೆ. ಗುರುವಾರ ಆರಂಭವಾದ ಎರಡೂ ದೇಶಗಳ ನಡುವಿನ ವೈಮಾನಿಕ ಯುದ್ಧದಲ್ಲಿ ಕನಿಷ್ಠ 11 ನಾಗರಿಕರು ಮೃತಪಟ್ಟಿದ್ದಾರೆ. ಕಾಂಬೋಡಿಯಾ ಗುಂಡಿನ ದಾಳಿ ನಡೆಸಿದರೆ, ಥಾಯ್ಲೆಂಡ್ ಸೇನೆ ಎಫ್-16 ಯುದ್ಧವಿಮಾನ ಬಳಸಿ ನೆರೆಯ ದೇಶದ ಸೇನಾ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಮೇ ತಿಂಗಳಲ್ಲಿ ಎರಡೂ ದೇಶಗಳ ನಡುವಿನ ಸೇನಾ ತಿಕ್ಕಾಟದಲ್ಲಿ ಕಾಂಬೋಡಿ ಯಾದ ಯೋಧನೊಬ್ಬ ಮೃತಪಟ್ಟಿದ್ದ.

ಈ ಶಿವ ದೇಗುಲವನ್ನು ನಿರ್ಮಿಸಿದ್ದು ಯಾರು?

ಈಗ ಎರಡು ದೇಶಗಳ ನಡುವೆ ಸಮರಕ್ಕೆ ಕಾರಣವಾದ ಶಿವನಿಗೆ ಅರ್ಪಿತವಾದ ಈ ಪ್ರೀಹ್ ವಿಹಾರ್ ದೇಗುಲವನ್ನು 9ನೇ ಶತಮಾನದಲ್ಲಿ ಖಮೇರ್ ರಾಜವಂಶದ ರಾಜ ಉದಯಾ ದಿ.ವರ್ಮನ್-2 ನಿರ್ಮಿಸಿದ್ದ ಆತ ಕಾಂಬೋಡಿಯಾ ದೇಶವನ್ನು ಆಳುತ್ತಿದ್ದ. ಈಗಿನ ಕಾಂಬೋಡಿಯಾ-ಥಾಯ್ಲೆಂಡ್ ಗಡಿಯಲ್ಲಿರುವ ಡಾಂಗ್ರೆಕ್ ಬೆಟ್ಟದಲ್ಲಿ ಆತ ಈ ಈಶ್ವರ ದೇಗುಲವನ್ನು ಕಟ್ಟಿಸಿದ್ದ.ಕಾಲಾನಂತರ ಈ ಸ್ಥಳ ಬೌದ್ಧರ ಆಳ್ವಿಕೆಗೊಳಪಟ್ಟಿತ್ತು.ಈ ದೇಗುಲ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿದೆ. ಅದು ಇರುವ ಬೆಟ್ಟ ತಮಗೇ ಸೇರಬೇಕು. ಎಂದು ಎರಡೂ ದೇಶಗಳ ನಡುವೆ ಜಟಾಪಟಿ ನಡೆಯುತ್ತಿದ್ದು, ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕಾಂಬೋಡಿಯಾದಿಂದ ಶೆಲ್ ಬಳಸಿ ದಾಳಿ ನಡೆದಿದ್ದರೆ ಎಫ್-16 ಬಳಸಿ ಥಾಯ್ಲೆಂಡ್ ದಾಳಿ ಮಾಡಿದ್ದು, ಈ ಪುಟ್ಟ ದೇಶಗಳ ಯುದ್ಧದಲ್ಲಿ 11 ನಾಗರಿಕರು ಸಾವಿಗೀಡಾಗಿದ್ದಾರೆ.

525 ಮೀಟರ್ ಎತ್ತರದ ಬಂಡೆಯ ಮೇಲೆ ನಿರ್ಮಿತವಾದ ದೇಗುಲ

ಶಿವನ ಈ ದೇಗುಲವೂ ಕಾಂಬೋಡಿಯಾದ ಡಾಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಎತ್ತರದ ಬಂಡೆಯ ಮೇಲೆ ನೆಲೆಗೊಂಡಿದೆ. ಖಮೇರ್ ಸಾಮ್ರಾಜ್ಯದ ಅಡಿಯಲ್ಲಿ ನಿರ್ಮಿಸಲ್ಪಟ್ಟಿರುವ ಈ ದೇಗುಲ ಕಾಂಬೋಡಿಯನ್ನರಿಗೆ ಮಾತ್ರವಲ್ಲದೆ ಅವರ ಥಾಯ್ ನೆರೆಹೊರೆಯವರಿಗೂ ಧಾರ್ಮಿಕ ಮಹತ್ವದ್ದಾಗಿದೆ. ಈ ದೇಗುಲದ ಪಶ್ಚಿಮಕ್ಕೆ ಸರಿಸುಮಾರು 95 ಕಿ.ಮೀ ದೂರದಲ್ಲಿ 12 ನೇ ಶತಮಾನದ ಮತ್ತೊಂದು ಶಿವ ದೇವಾಲಯವಾದ ತಾ ಮುಯೆನ್ ಥಾಮ್ ದೇವಾಲಯವಿದೆ.

ಕಂಬೋಡಿಯಾದಲ್ಲಿರುವ ಹಿಂದೂ ಬೌದ್ಧ ಮಿಶ್ರಿತ ದೇಗುಲವಾಗಿರುವ ಅಂಕೋರ್ ವಾಟ್‌ನ ಜನಪ್ರಿಯತೆಯಿಂದ ಈ ಶಿವ ದೇಗುಲವೂ ಪ್ರಸಿದ್ಧಿಯಿಂದ ಮರೆಮಾಡಲ್ಪಟ್ಟಿದ್ದರೂ, ಈ ದೇವಾಲಯಗಳ ಸಮೂಹವು ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದಲೂ ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ.

ಫ್ರೆಂಚ್ ವಾಸಹಾತುಶಾಹಿ ಕಾಲದಿಂದಲೇ ಇದೇ ಗಲಾಟೆ

ಫ್ರೆಂಚ್ ವಾಸಹಾತುಶಾಹಿ ಕಾಲದಿಂದಲೇ ಎರಡು ದೇಶಗಳ ನಡುವೆ ಈ ದೇಗುಲ ಹಾಗೂ ಗಡಿಗೆ ಸಂಬಂಧಿಸಿದಂತೆ ವಿವಾದವಿದೆ. 1962 ರಲ್ಲಿ, ಅಂತರರಾಷ್ಟ್ರೀಯ ನ್ಯಾಯಾಲಯ (ICJ) ಕಾಂಬೋಡಿಯಾ ಪರವಾಗಿ ತೀರ್ಪು ನೀಡಿತು ಮತ್ತು ಥೈಲ್ಯಾಂಡ್‌ಗೆ ಆ ಸ್ಥಳದಿಂದ ಹಿಂದಿರುಗುವಂತೆ ಸೂಚಿಸಿತ್ತು. ಅಲ್ಲದೇ 1954ರಿಂದ ಆ ಸ್ಥಳದಿಂದ ತೆಗೆದಂತಹ ಯಾವುದೇ ಕಲಾಕೃತಿಗಳನ್ನು ಹಿಂದಿರುಗಿಸುವಂತೆ ಆದೇಶಿಸಿತು.

ಈ ತೀರ್ಪು 1907 ರ ಫ್ರೆಂಚ್ ನಿರ್ಮಿಸಿದ ಮ್ಯಾಪ್‌ ಅಥವಾ ನಕಾಶೆಯನ್ನು ಆಧರಿಸಿತ್ತು. ಈ ನಕ್ಷೆಯೂ ದೇವಾಲಯವನ್ನು ಫ್ರೆಂಚ್ ರಕ್ಷಿತವಾದ ಕಾಂಬೋಡಿಯಾದೊಳಗೆ ಇರಿಸಿತು. ಆಗ ಸಿಯಾಮ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಥೈಲ್ಯಾಂಡ್ ಆ ಸಮಯದಲ್ಲಿ ಈ ನಕ್ಷೆಯನ್ನು ಒಪ್ಪಿಕೊಂಡಿತ್ತು ಆದರೆ ನಂತರ ಗಡಿಯು ನೈಸರ್ಗಿಕ ಜಲಾನಯನ ರೇಖೆಯನ್ನು ಅನುಸರಿಸುತ್ತದೆ ಎಂಬ ತಪ್ಪು ನಂಬಿಕೆಯ ಅಡಿಯಲ್ಲಿ ಆ ತೀರ್ಪನ್ನು ಒಪ್ಪಿಕೊಂಡಿದ್ದಾಗಿ ಹೇಳಿ ನಂತರ 1907ರ ತೀರ್ಪನ್ನು ಒಪ್ಪಿಕೊಳ್ಳುವುದಕ್ಕೆ ನಿರಾಕರಿಸಿತು. ಆದರೆ ಅಂತಾರಾಷ್ಟ್ರೀಯ ನ್ಯಾಯಾಲಯವೂ ಥೈಲ್ಯಾಂಡ್ ವಾದವನ್ನು ಒಪ್ಪದೇ ಅದು ನಕ್ಷೆಯನ್ನು ಒಪ್ಪಿಕೊಂಡಿದೆ ಹಾಗೂ ಅದಕ್ಕೆ ಬದ್ಧವಾಗಿದೆ ಎಂದು ತೀರ್ಮಾನಿಸಿತು.

2011 ರಲ್ಲಿ ಆ ಸ್ಥಳದಲ್ಲಿ ಸೈನಿಕರ ನಡುವೆ ಮತ್ತೆ ಘರ್ಷಣೆ ನಡೆದ ನಂತರ, 2013 ರಲ್ಲಿ, ಅಂತಾರಾಷ್ಟ್ರೀಯ ನ್ಯಾಯಾಲಯವು ತನ್ನ ಮೂಲ ತೀರ್ಪನ್ನು ಮತ್ತೆ ಸ್ಪಷ್ಟಪಡಿಸಿತು ಜೊತೆಗೆ ದೇವಾಲಯ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶದ ಮೇಲೂ ಕಾಂಬೋಡಿಯಾಕ್ಕೆ ಸಾರ್ವಭೌಮತ್ವವನ್ನು ನೀಡಿತು ಹಾಗೂ ಥೈಲ್ಯಾಂಡ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿತು.

ಪ್ರಸ್ತುತ ಕಾಂಬೋಡಿಯಾ ಹಾಗೂ ಥೈಲ್ಯಾಂಡ್ ನಡುವಿನ ಸಂಘರ್ಷವೂ ತಾ ಮುಯೆನ್ ಥಾಮ್ ದೇವಾಲಯದ ಮೇಲೆ ಕೇಂದ್ರೀಕೃತವಾಗಿವೆ. ಡಾಂಗ್ರೆಕ್ ಪರ್ವತಗಳಲ್ಲಿನ ಒರಟಾದ ಅರಣ್ಯದ ಗಡಿಯಲ್ಲಿ ಇರುವ ಈ ಖಮೇರ್ ಸಾಮ್ರಾಜ್ಯದ ಕಾಲದ ಹಿಂದೂ ದೇಗುಲವು ಮೂರು ಪ್ರಮುಖ ದೇವಾಲಯಗಳಾದ ತಾ ಮುಯೆನ್ ಥಾಮ್, ತಾ ಮುಯೆನ್ ಮತ್ತು ತಾ ಮುಯೆನ್ ಥಾಟ್‌ಗಳನ್ನು ಹೊಂದಿದೆ.

ತಾ ಮುಯೆನ್ ಥಾಮ್‌ನ ವಾಸ್ತುಶಿಲ್ಪವು ದಕ್ಷಿಣಕ್ಕೆ ಮುಖ ಮಾಡಿರುವ ದೇವಾಲಯವನ್ನು ಹೊಂದಿದೆ. ಇದು ಸಾಂಪ್ರದಾಯಿಕವಾಗಿ ಪೂರ್ವಕ್ಕೆ ಮುಖ ಮಾಡಿರುವ ಖಮೇರ್ ದೇವಾಲಯಗಳಿಗಿಂತ ವಿಭಿನ್ನವೆನಿಸಿದದು, ನೈಸರ್ಗಿಕವಾಗಿ ರೂಪುಗೊಂಡ ಶಿವಲಿಂಗವು ಅದರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.

ಆದರೆ ಇದು ಇರುವ ಸ್ಥಳವು ಇದನ್ನು ಪದೇ ಪದೇ ಉದ್ವಿಗ್ನಗೊಳಿಸುವ ಸ್ಥಳವನ್ನಾಗಿ ಮಾಡಿದೆ. ಫೆಬ್ರವರಿಯಲ್ಲಿ, ಕಾಂಬೋಡಿಯನ್ ಸೈನಿಕರು ದೇವಾಲಯದಲ್ಲಿ ತಮ್ಮ ರಾಷ್ಟ್ರಗೀತೆಯನ್ನು ಹಾಡಿದರು ಇದು ಥಾಯ್ ಪಡೆಗಳೊಂದಿಗೆ ಘರ್ಷಣೆಗೆ ಕಾರಣವಾಯಿತು ಎಂದು ವರದಿಯಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!