ಅತ್ಯಾಚಾರಿಗಳಿಗೆ ಪುರುಷತ್ವ ಹರಣ: ಇಟಲಿಯಲ್ಲಿ ಹೊಸ ಕಾಯ್ದೆಗೆ ಸಿದ್ಧತೆ

Published : Sep 22, 2024, 08:04 AM IST
ಅತ್ಯಾಚಾರಿಗಳಿಗೆ ಪುರುಷತ್ವ ಹರಣ: ಇಟಲಿಯಲ್ಲಿ ಹೊಸ ಕಾಯ್ದೆಗೆ ಸಿದ್ಧತೆ

ಸಾರಾಂಶ

ಅತ್ಯಾಚಾರಿಗಳು ಹಾಗೂ ಶಿಶುಕಾಮಿಗಳಿಗೆ ಪುರುಷತ್ವ ಹರಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಮುಂದಾಗಿದೆ. ಅತ್ಯಾಚಾರಿಗಳಾಗಿ ಬದಲಾಗಿರುವವರಿಗೆ ಚುಚ್ಚುಮದ್ದೊಂದನ್ನು ನೀಡಲಾಗುತ್ತದೆ. ಇದು ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತದೆ.

ರೋಮ್‌: ಅತ್ಯಾಚಾರಿಗಳು ಹಾಗೂ ಶಿಶುಕಾಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಇಟಲಿ ಸರ್ಕಾರ, ಅಂತಹ ವ್ಯಕ್ತಿಗಳ ಪುರುಷತ್ವ ಹರಣ ಮಾಡುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಈ ಸಂಬಂಧ ಕಾಯ್ದೆ ರೂಪಿಸುವ ಸಲುವಾಗಿ ಕರಡು ಶಾಸನ ತಯಾರಿಗೆ ಸಮಿತಿಯೊಂದನ್ನು ರಚನೆ ಮಾಡಲು ಇಟಲಿಯ ಸಂಸದರು ಒಪ್ಪಿಗೆ ನೀಡಿದ್ದಾರೆ.

ಉದ್ದೇಶಿತ ಯೋಜನೆಯ ಪ್ರಕಾರ, ಅತ್ಯಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದವರು ರಾಸಾಯನಿಕ ವಿಧಾನದಡಿ ಪುರುಷತ್ವ ಹರಣ ಮಾಡಿಸಿಕೊಂಡರೆ ಅವರ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದೊಂದು ಅಮಾನವೀಯ ಹಾಗೂ ತೀವ್ರಗಾಮಿ ನಡೆಯಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಬರೋಬ್ಬರಿ 58 ಮಂದಿ ಜೊತೆ ಸಂಬಂಧ ಚೀನಾದ ಸುಂದರಿ ಗವರ್ನರ್‌ಗೆ 13 ವರ್ಷ ಜೈಲು ಶಿಕ್ಷೆ!

ಏನಿದು ರಾಸಾಯನಿಕ ಪುರುಷತ್ವ ಹರಣ?:

ಅತಿಯಾದ ಕಾಮಾಸಕ್ತಿ ಹೊಂದುವ ಮೂಲಕ ಅತ್ಯಾಚಾರಿಗಳಾಗಿ ಬದಲಾಗಿರುವವರಿಗೆ ಚುಚ್ಚುಮದ್ದೊಂದನ್ನು ನೀಡಲಾಗುತ್ತದೆ. ಅದು ಕಾಮೋತ್ತೇಜನಕ್ಕೆ ಕಾರಣವಾಗುವ ಟೆಸ್ಟೋಸ್ಟೀರೋನ್‌ ಹಾರ್ಮೋನ್‌ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ಇದರಿಂದಾಗಿ ಆ ವ್ಯಕ್ತಿಗೆ ಕಾಮದ ಮೇಲೆ ಆಸಕ್ತಿ ಹೋಗುತ್ತದೆ ಎನ್ನಲಾಗಿದೆ.

ಕೆಲವು ದೇಶಗಳು ಹಾಗೂ ಅಮೆರಿಕದ ಕೆಲವೊಂದು ರಾಜ್ಯಗಳಲ್ಲಿ ಈ ಶಿಕ್ಷೆ ಈಗಾಗಲೇ ಜಾರಿಯಲ್ಲಿದೆ. ಆದರೆ ಅದರ ಪರಿಣಾಮ ಹಾಗೂ ಅದರಿಂದಾಗುವ ಭೌತಿಕ, ಮಾನಸಿಕ ಅಡ್ಡಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿದೆ.

30 ವರ್ಷವಾದ್ರೂ ಮದ್ವೆಯಾಗದಿದ್ರೆ ಮಾಸಿಕ ಒಂದೂವರೆ ಲಕ್ಷ ರೂ. ಹಣ: ಪ್ರತ್ಯೇಕ ಮೆಟ್ರೊ, ಕ್ಲಬ್​, ಬೀಚ್​!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ