ಚೀನಾದಲ್ಲಿ ಓರ್ವ ಹಿರಿಯ ಮಹಿಳಾ ಅಧಿಕಾರಿಗೆ 13 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 1.18 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಲೈಂಗಿಕ ಹಗರಣ ಮತ್ತು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರು.
ಚೀನಾದಲ್ಲಿ ಓರ್ವ ಹಿರಿಯ ಮಹಿಳಾ ಅಧಿಕಾರಿಗೆ 13 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಆಕೆಗೆ ಸುಮಾರು 1.18 ಕೋಟಿ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ ಈ ಮಹಿಳಾ ಅಧಿಕಾರಿ ಝೋಂಗ್ ಯಾಂಗ್. ಈಗ ಆಕೆಗೆ 52 ವರ್ಷ ವಯಸ್ಸು.
ಆದರೆ ಆಕೆ ಅತ್ಯಂತ ಸುಂದರವಾಗಿರುವುದರಿಂದ ಜನರು ಅವರನ್ನು "ಸುಂದರಿ ಗವರ್ನರ್" ಎಂದೂ ಕರೆಯುತ್ತಾರೆ. ಆಕೆ ಗುಯಿಝೌ ಪ್ರಾಂತ್ಯದ ಕಿಯಾನನ್‌ನ ಗವರ್ನರ್ ಆಗಿದ್ದಳು. ಇದರೊಂದಿಗೆ ಕಮ್ಯುನಿಸ್ಟ್ ಪಕ್ಷದ ಚೀನಾ (CPC) ದ ಉಪ ಕಾರ್ಯದರ್ಶಿಯಾಗಿದ್ದಳು. ಈಗ ಆಕೆಯ ಮೇಲೆ ತನಗಾಗಿ ಕೆಲಸ ಮಾಡುವ 58 ಪುರುಷ ಸಿಬ್ಬಂದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಮತ್ತು ಸುಮಾರು 60 ಮಿಲಿಯನ್ ಯುವಾನ್ (71 ಕೋಟಿ ರೂಪಾಯಿಗೂ ಹೆಚ್ಚು) ಲಂಚ ಪಡೆದ ಆರೋಪಗಳಿವೆ.
undefined
ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ, ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
22 ನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದ್ದ ಝೋಂಗ್ :
52 ವರ್ಷದ ಝೋಂಗ್ ಯಾಂಗ್ 22 ನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದ್ದಳು. ಕ್ರಮೇಣ ಆಕೆಯ ಹುದ್ದೆ ಮೇಲಕ್ಕೇರುತ್ತಲೇ ಹೋಯ್ತು. ಮತ್ತು ಆಕೆ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ (NPC) ನಲ್ಲಿ ಉಪ ಹುದ್ದೆಯನ್ನು ತಲುಪಿದಳು. ರೈತರು ಮತ್ತು ನಿರ್ಗತಿಕ ವೃದ್ಧರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣ್ಣು ಮತ್ತು ಕೃಷಿ ಒಕ್ಕೂಟವನ್ನು ಸ್ಥಾಪಿಸಿದ್ದಕ್ಕಾಗಿ ಝೋಂಗ್ ಹೆಸರುವಾಸಿಯಾಗಿದ್ದಾಳೆ.
ಝೋಂಗ್ ರಹಸ್ಯ ಬಯಲಾಗಿದ್ದು ಹೇಗೆ?
ಜನವರಿಯಲ್ಲಿ ಗುಯಿಝೌ ರೇಡಿಯೋ ಮತ್ತು ದೂರದರ್ಶನವು ಒಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಮೂಲಕ ಝೋಂಗ್‌ಗೆ ಸಂಬಂಧಿಸಿದ ಅವ್ಯವಹಾರ ಮತ್ತು ವಿವಾದ ಬಹಿರಂಗಪಡಿಸಿತು. ಝೋಂಗ್ ಲಂಚ ಪಡೆದಿದ್ದಾಳೆ ಮತ್ತು ಆಕೆ ತನ್ನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಅವಳಿಷ್ಟದ ಕಂಪನಿಗಳಿಗೆ ಸರ್ಕಾರಿ ಹೂಡಿಕೆಯ ನೆಪದಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿರುವುದು ಬಹಿರಂಗವಾಯ್ತು.
ಹಳೆ 5 ರೂ ನೋಟಿದ್ಯಾ? ಒಂದೇ ಒಂದು ನೋಟಿನಿಂದ ಕೋಟ್ಯಾಧಿಪತಿಯಾಗಬಹುದು! ಹೇಗೆ?
ಝೋಂಗ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಓರ್ವ ಉದ್ಯಮಿಗೆ ಹೈಟೆಕ್ ಕೈಗಾರಿಕಾ ಎಸ್ಟೇಟ್‌ನಲ್ಲಿ ಭೂ ಅಭಿವೃದ್ಧಿಗೆ ಅನುಮೋದನೆ ನೀಡಿದ್ದಳು. ಡಾಕ್ಯುಮೆಂಟರಿಯಲ್ಲಿ ಝೋಂಗ್ ತನಗೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲದ ಕಂಪನಿಗಳನ್ನು ನಿರ್ಲಕ್ಷಿಸುತ್ತಿದ್ದಳು ಎಂಬುದನ್ನು ಬಹಿರಂಗಪಡಿಸಲಾಗಿದೆ.
58 ಸಿಬ್ಬಂದಿಯೊಂದಿಗೆ ಸಂಬಂಧ: ಝೋಂಗ್ ತನ್ನ ಅಧೀನದಲ್ಲಿ ಕೆಲಸ ಮಾಡುವ 58 ಸಿಬ್ಬಂದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂಬ ಆರೋಪವಿದೆ. ಝೋಂಗ್ ನೀಡಿದ ಆಮಿಷಕ್ಕೆ ಬಲಿಯಾಗಿ ಕೆಲವರು ಅವಳ ಪ್ರೇಮಿಯಾದರು. ಕೆಲವರು ಇಷ್ಟವಿಲ್ಲದಿದ್ದರೂ ತಮ್ಮ ಕೆಲಸ ಮಾಡಿಕೊಳ್ಳುವ ಸಲುವಾಗಿ ಝೋಂಗ್ ಜೊತೆ ಸಂಬಂಧ ಬೆಳೆಸುತ್ತಿದ್ದರು. ಜೊತೆಗೆ ಮಹಿಳಾ ಅಧಿಕಾರಿ ಎಂದು ಹೆದರಿ ಇದನ್ನು ಮಾಡುತ್ತಿದ್ದರು. ಆಕೆ ಓವರ್‌ಟೈಮ್‌ನ ಹೆಸರಿನಲ್ಲಿ ಪುರುಷ ಸಿಬ್ಬಂದಿಯನ್ನು ತಡೆಹಿಡಿದು ಅವರೊಂದಿಗೆ ಸಂಬಂಧ ಬೆಳೆಸುತ್ತಿದ್ದಳು. ವ್ಯಾಪಾರ ಪ್ರವಾಸಗಳಿಗೆ ಹೋಗುವ ನೆಪದಲ್ಲಿ ಆಕೆ ತಮ್ಮ ಪ್ರೇಮಿಗಳ ಜೊತೆಗೆ ಸಮಯ ಕಳೆಯುತ್ತಿದ್ದಳು.
ರಹಸ್ಯ ಬಯಲಾದ ನಂತರ ಏಪ್ರಿಲ್ 2023 ರಲ್ಲಿ ಝೋಂಗ್ ಳನ್ನು ಬಂಧಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಆಕೆಯನ್ನು ಸಿಪಿಸಿಯಿಂದ ಉಚ್ಚಾಟಿಸಲಾಯಿತು. ಸಾಕ್ಷ್ಯಚಿತ್ರದಲ್ಲಿ ಝೋಂಗ್ ತಾನು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾಳೆ. ಜೊತೆಗೆ “ನಾನು ನನ್ನ ಮಾಜಿ ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಅಥವಾ ನನ್ನನ್ನು ನೋಡಿಕೊಂಡ ಮತ್ತು ನನ್ನನ್ನು ಬೆಳೆಸಿದ ನಾಯಕರನ್ನು ಎದುರಿಸಲು ಸಾಧ್ಯವಿಲ್ಲ. ನಾನು ನಾಚಿಕೆ ಪಡುತ್ತೇನೆ ಎಂದು ಹೇಳಿಕೊಂಡಿದ್ದಾಳೆ.