
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಅಮೇರಿಕಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ವಾಷಿಂಗ್ಟನ್‌ನ ರಾಯಭಾರ ಕಚೇರಿ ಆವರಣದಲ್ಲಿ ಅವರ ಶವ ಪತ್ತೆಯಾಗಿದೆ. ಭಾರತೀಯ ರಾಯಭಾರಿ ಕಚೇರಿಯ ಹೇಳಿಕೆಯ ಪ್ರಕಾರ ಸೆಪ್ಟೆಂಬರ್ 18 ರ ಬುಧವಾರ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಈಗ ಸ್ಥಳೀಯ ಪೊಲೀಸರು ಮತ್ತು ಸಿಕ್ರೇಟ್ ಸರ್ವೀಸ್‌ನಿಂದ ತನಿಖೆ ನಡೆಸಲಾಗುತ್ತಿದೆ. ಅಧಿಕಾರಿ ತಾವೇ ಸಾವಿಗೆ ಶರಣಾಗಿರಬಹುದೇ ಅಥವಾ ಇನ್ನೇನಾದರೂ ಘಟನೆ ಸಂಭವಿಸಿರಬಹುದೇ ಎಂದು ತಿಳಿಯಲು ರಾಯಭಾರ ಕಚೇರಿಯ ಅಧಿಕಾರಿಯ ಸಾವನ್ನು ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ. ಎಂದು ಭಾರತೀಯ ರಾಯಭಾರ ಕಚೇರಿಯೂ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಅತೀವವಾದ ಬೇಸರದೊಂದಿಗೆ, 2024 ರ ಸೆಪ್ಟೆಂಬರ್ 18 ರ ಸಂಜೆ ಭಾರತೀಯ ರಾಯಭಾರ ಕಚೇರಿಯ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಅತೀ ಶೀಘ್ರವಾಗಿ ಭಾರತಕ್ಕೆ ತರಲು ಎಲ್ಲಾ ಸಂಬಂಧಿತ ಏಜೆನ್ಸಿಗಳು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಅಧಿಕಾರಿ ಕುಟುಂಬದ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುವುದಕ್ಕಾಗಿ ಮೃತರ ಬಗ್ಗೆ ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡುತ್ತಿಲ್ಲ. ಈ ದುಃಖದ ಸಮಯದಲ್ಲಿ ನಮ್ಮ ಚಿಂತನೆ ಮತ್ತು ಪ್ರಾರ್ಥನೆಗಳು ಕುಟುಂಬದೊಂದಿಗೆ ಇವೆ ಎಂದು ಭಾರತೀಯ ರಾಯಭಾರ ಕಚೇರಿ ನಿನ್ನೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದು, ಅಧಿಕಾರಿಯ ಯಾರು ಎಂಬ ಬಗ್ಗೆ ವಿವರ ನೀಡಿಲ್ಲ.
ಲಾವೋಸ್‌ನಲ್ಲಿ 47 ಭಾರತೀಯ 'ಸೈಬರ್ ಗುಲಾಮರ' ರಕ್ಷಣೆ : ಏನಿದು ಪ್ರಕರಣ?
ಜರ್ಮನಿಯಲ್ಲಿ ಪಾಕಿಸ್ತಾನ ಎಂಬಸಿ ಮೇಲೆ ಅಫ್ಘಾನ್ ಪ್ರಜೆಗಳ ದಾಳಿ: ಪಾಕಿಸ್ತಾನ ಧ್ವಜ ಕಿತ್ತೆಸೆದು ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ