ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ: ಇಟಲಿ ಘೋಷಣೆ| ಸೆಪ್ಟೆಂಬರ್‌ನಲ್ಲಿ ಮಾನವರ ಮೇಲೆ ಅಧಿಕೃತ ಪ್ರಯೋಗ| ಇಲಿ, ಮಾನವ ಜೀವಕೋಶದ ಮೇಲೆ ಪ್ರಯೋಗ ಯಶಸ್ವಿ
ದುಬೈ(ಮೇ.06): ಕೊರೋನಾ ವೈರಸ್‌ಗೆ ಔಷಧ ಶೋಧಿಸಲು ವಿಶ್ವದ 100ಕ್ಕೂ ಅಧಿಕ ಕಡೆ ವಿಜ್ಞಾನಿಗಳು ಹಗಲಿರುಳೆನ್ನದೆ ಶ್ರಮಿಸುತ್ತಿರುವಾಗಲೇ, ಈ ಅಪಾಯಕಾರಿ ವೈರಾಣುವಿಗೆ ವಿಶ್ವದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಇಟಲಿ ಹೇಳಿಕೊಂಡಿದೆ.
ರೋಮ್‌ನಲ್ಲಿರುವ ಲಾಜ್ಜಾರೋ ಸ್ಪಾಲಾಂಜಾನಿ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆಯಲ್ಲಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಅದನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಆ್ಯಂಟಿಬಾಡಿ (ಪ್ರತಿಕಾಯ)ಗಳನ್ನು ಇಲಿಯಲ್ಲಿ ಸೃಷ್ಟಿಸಿದೆ. ಮಾನವರ ಜೀವಕೋಶಗಳಲ್ಲೂ ಅದು ಕೆಲಸ ಮಾಡಿದೆ. ಕೊರೋನಾ ವೈರಾಣುವನ್ನು ನಿಷ್ಕ್ರಿಯ ಮಾಡಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
undefined
ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!
ಯುರೋಪ್ ಖಂಡದಲ್ಲಿ ಕೊರೋನಾದಿಂದ ಅತಿ ಹೆಚ್ಚು ಸಾವು ಸಂಭವಿಸಿರುವ ದೇಶ ಇಟಲಿ. ಕೊರೋನಾ ವೈರಸ್‌ನ ಸಂಪೂರ್ಣ ಡಿಎನ್‌ಎ ಮಾದರಿಯನ್ನು ಗುರುತಿಸಿದ ಯುರೋಪಿನ ಮೊದಲ ಸಂಸ್ಥೆ ಲಾಜ್ಜಾರೋ. ಹೀಗಾಗಿ ಆ ಸಂಸ್ಥೆ ಲಸಿಕೆ ಕಂಡುಹಿಡಿದಿದೆ ಎಂಬ ವರದಿ ಸಂಚಲನಕ್ಕೆ ಕಾರಣವಾಗಿದೆ.
ಪರೀಕ್ಷೆಗೆ ಸಿದ್ಧವಾಗಿರುವ ಲಸಿಕೆಯನ್ನು ಇಟಲಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೇಸಿಗೆ ನಂತರ ಮಾನವ ಪ್ರಯೋಗ ಆರಂಭವಾಗುವ ನಿರೀಕ್ಷೆ ಇದೆ ಎಂದು ಇಟಲಿ ಔಷಧ ಕಂಪÜನಿಯಾಗಿರುವ ‘ಟಾಕಿಸ್’ನ ಲುಯಿಗಿ ಔರಿಚ್ಚಿಯೋ ಹೇಳಿದ್ದಾರೆ. ಇಟಲಿಯಲ್ಲಿ ಜೂನ್‌ನಲ್ಲಿ ಬೇಸಿಗೆ ಆರಂಭವಾಗಿ ಆಗಸ್ಟ್‌ಗೆ ಮುಗಿಯುತ್ತದೆ. ಹೀಗಾಗಿ ಆಗಸ್ಟ್ ನಂತರ ಪ್ರಯೋಗ ನಡೆಯಬಹುದು.