
ಇಸ್ಲಮಾಬಾದ್(ಮೇ.04): ಪಾಕಿಸ್ತಾನ ಸಾಮಾನ್ಯವಾಗಿ ಬಹುತೇಕ ಎಲ್ಲಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಮೇಲಾಗುವ ಅದರಲ್ಲೂ ವಿಶೇಷವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ಬೇಧ ಬಾವದ ಕುರಿತು ತುಟಿ ಬಿಚ್ಚಿವುದಿಲ್ಲ. ಆದರೀಗ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ವರದಿ ಇಮ್ರಾನ್ ಖಾನ್‌ರವರ ಈ ಎಲ್ಲಾ ಸುಳ್ಳುಗಳನ್ನು ಬಯಲಿಗೆಳೆದಿದೆ. ಈ ವರದಿಯಲ್ಲಿ 2019ರಲ್ಲಿ ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿತ್ತು ಹಾಗೂ ಅಲ್ಪಸಂಖ್ಯಾತರ ಮೇಲೆ ಬಹಳಷ್ಟು ದೌರ್ಜನ್ಯ ಕೂಡಾ ನಡೆದಿದೆ ಎಂದಿದೆ.
'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತನ್ನ ವಾರ್ಷಿಕ ವರದಿಯಲ್ಲಿ 2019ರಲ್ಲಿ ಕೊರೋನಾ ವೈರಸ್ ಮಹಾಮಾರಿಯಿಂದ ಬಡವರ ಹಾಗೂ ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸಂವಿಧಾನದಲ್ಲಿ ನೀಡಲಾದ ಹಕ್ಕು, ಇಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ನರಿಗೆ ತಮ್ಮ ಧಾರ್ಮಿಕ ಸ್ವಾತತ್ರ್ಯ ಅನುಭವಿಸಲಾಗುತ್ತಿಲ್ಲ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಪಸಂಖ್ಯಾತ ಸಮುದಾಯದ ಯುವತಿಯರ ಅಪಹರಣ
ಇಷ್ಟೇ ಅಲ್ಲದೇ ಈ ವರದಿಯಲ್ಲಿ ಅನೇಕ ಸಮುದಾಯಗಳಿಗೆ ಅವರ ಧರ್ಮಕ್ಕನುಸಾರವಾಗಿ ಬೇದ ಭಾವ ಮಾಡಲಾಗುತ್ತಿದೆ. ಯುವತಿಯರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತದೆ ಹಾಗೂ ಉದ್ಯೋಗದ ವಿಚಾರದಲ್ಲೂ ಬೇದ ಭಾವ ಮಾಡಲಾಗುತ್ತಿದೆ. ಅದರಲ್ಲೂ ವ್ಯಾಪಕವಾಗಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗಿರುವವರಿಗೆ ಅವರ ನೋವು ಕೇಳಿಸುತ್ತಿಲ್ಲ ಎಂದಿದೆ.
'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ
ಮಾಧ್ಯಮಗಳಿಗೂ ಕಡಿವಾಣ
ಮಾಧ್ಯಮಗಳ ಧ್ವನಿ ಅಡಗಿಸಲು ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳಲಾಗಿದ್ದು, ಇವುಗಳ ಸ್ವಾತಂತ್ರ್ಯವನ್ನು ಕಡಿಮೆ ಮಾಡಲಾಘಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ