ಟರ್ಕಿ: ಮುಸ್ಲಿಂ ರಾಷ್ಟ್ರ ಟರ್ಕಿಯ ಇಸ್ತಾಂಬುಲ್‌ನಲ್ಲಿ ಧಾರ್ಮಿಕ ನಾಯಕನೊಬ್ಬನಿಗೆ ಅಲ್ಲಿನ ಕೋರ್ಟ್ ಒಂದು ಆತನ ಆಯಸ್ಸಿಗಿಂತಲೂ ಅಧಿಕ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. 8,658 ವರ್ಷಗಳ ಕಾಲ ಧಾರ್ಮಿಕ ನಾಯಕನಿಗೆ ಜೈಲು ಶಿಕ್ಷೆ ವಿಧಿಸಲಾಗಿದ್ದು, ಮರು ವಿಚಾರಣೆ ನಡೆಸಲು ಜೈಲಿನಲ್ಲಿರಿಸಲಾಗಿದೆ. ಆದರೆ ಜೈಲು ಶಿಕ್ಷೆ ವಿಧಿಸಲು ಕಾರಣವಾದ ಅಪರಾಧ ಮಾತ್ರ ಕ್ಷುಲ್ಲಕವೆನಿಸಿದೆ.
ಅದ್ನಾನ್ ಒಕ್ತಾರ್ ಎಂಬಾತನೇ ಹೀಗೆ 8,658 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಧಾರ್ಮಿಕ ನಾಯಕ. ಹಾಗಂತ ಈತನೇನು ಯಾರನ್ನೋ ಕೊಲೆ ಮಾಡಿಲ್ಲ. ಕೇವಲ ತುಂಡುಡುಗೆಯ ಲಲನೆಯರ ಜೊತೆ ಸಖತ್ ಆಗಿ ಪೋಸ್ ಕೊಟ್ಟಿದ್ದಾನೆ ಅಷ್ಟೇ. ಇದೇ ಈತ ಮಾಡಿದ ದೊಡ್ಡ ತಪ್ಪಾಗಿದ್ದು, ಇಸ್ತಾಂಬುಲ್‌ನ ಕೋರ್ಟ್ (Turkey Court ) ಈತನಿಗೆ 8,658 ವರ್ಷ ಶಿಕ್ಷೆ ಘೋಷಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಸರಾಸರಿ ಜೀವಿತಾವಧಿಯೇ 70 ವರ್ಷ, ಅದರಲ್ಲೂ ಕೆಲವೇ ಕೆಲವು ಅದೃಷ್ಟವಂತರು 100 ಬಾರಿಸುವರು. ಹೀಗಿರುವಾಗ 8,658 ವರ್ಷ ಶಿಕ್ಷೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ನೂಪುರ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಮುಸ್ಲಿಂ ಧಾರ್ಮಿಕ ಮುಖಂಡ ಆದಿಲ್ ಗಫೂರ್ ಅರೆಸ್ಟ್!
ಅಂದಹಾಗೆ ತುಂಡುಡುಗೆ ಸುಂದರಿಯರ ಜೊತೆ ಪೋಸ್ ಕೊಟ್ಟು ಶಿಕ್ಷೆಗೊಳಗಾದ ಈ ಅದ್ನಾನ್ ಒಕ್ತಾರ್, ಟಿವಿ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಪ್ರವಚನ ನೀಡುವ ಧಾರ್ಮಿಕ ನಾಯಕ. ಈತನ ಗೃಹಚಾರ ಕೆಟ್ಟಿತ್ತೋ ಏನೋ ಈತ ಭಾರಿ ಮೇಕಪ್ (Makeup) ಜೊತೆ ತುಂಡುಡುಗೆ ಧರಿಸಿದ ಹುಡುಗಿಯರ ಜೊತೆ ಕುಳಿತುಕೊಂಡು ಸೃಷ್ಟಿವಾದ (creationism) ಮತ್ತು ಸಂಪ್ರದಾಯವಾದಿ ಮೌಲ್ಯಗಳ (conservative values) ಬಗ್ಗೆ ಭಾಷಣ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದಕ್ಕಾಗಿ ಇಷ್ಟೊಂದು ವರ್ಷ ಶಿಕ್ಷೆ ವಿಧಿಸಿದ ಕೋರ್ಟ್ ಇದರ ಜೊತೆ ಹಲವು ಆರೋಪಗಳನ್ನು ಕೂಡ ಹೊರಿಸಿದೆ. ಇದರಲ್ಲಿ ಲೈಂಗಿಕ ದೌರ್ಜನ್ಯದ ಜೊತೆ ಬೇರೆಯವರ ಸ್ವಾತಂತ್ರ್ಯವನ್ನು ಕಸಿದುಕೊಂಡ ಆರೋಪವನ್ನು ಕೂಡ ಹೊರಿಸಲಾಗಿದೆ. ಈ ಧಾರ್ಮಿಕ ನಾಯಕನ ಜೊತೆ ಇತರ ಹತ್ತು ಜನಕ್ಕೂ ಇಷ್ಟೇ ವರ್ಷದ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
ಕೇರಳಕ್ಕೆ ಹೋಲಿಸಿದರೆ ಕರ್ನಾಟಕ ಸುರಕ್ಷಿತ: ಧರ್ಮ ಪ್ರಚಾರಕ ಭದ್ರಾನಂದ ಶ್ರೀ
ಅಲ್ಲಿನ A9 ಹೆಸರಿನ ದೂರದರ್ಶನವೊಂದಕ್ಕೆ ನೀಡುವ ಕಾರ್ಯಕ್ರಮಗಳಿಂದ ಅದ್ನಾನ್ ಒಕ್ತಾರ್ (Adnan Oktar) ಕ್ರಮೇಣ ಕುಖ್ಯಾತಿ ಗಳಿಸುತ್ತಾ ಬಂದಿದ್ದು, ಅಲ್ಲಿನ ಇತರ ಧಾರ್ಮಿಕ ನಾಯಕರು ಈತನ ಈ ಧರ್ಮ ಬೋಧನೆಯನ್ನು ಖಂಡಿಸಿದ್ದಾರೆ. ಇದಾದ ಬಳಿಕ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದು, ಈಗ ಕೋರ್ಟ್ ಸಾವಿರಾರು ವರ್ಷ ಜೈಲು ಶಿಕ್ಷೆ ಘೋಷಿಸಿದೆ. ಇದಕ್ಕೂ ಮೊದಲು ಕೂಡ ಈತನ ವಿರುದ್ಧ 2018ರಲ್ಲಿ ಪ್ರಕರಣ ದಾಖಲಾಗಿತ್ತು. ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಅಲ್ಲಿನ ಹಣಕಾಸು ಅಪರಾಧ ವಿಭಾಗ ತನಿಖೆ (financial crimes unit) ನಡೆಸಿತ್ತು.
ಹರ್ ಹರ್ ಶಂಭೋ ಹಾಡಿದ ಮುಸ್ಲಿಂ ಗಾಯಕಿ ಮೇಲೆ ಮೂಲಭೂತವಾದಿಗಳ ಕೆಂಗಣ್ಣು
ಇದೇ ರೀತಿ ವ್ಯಕ್ತಿಯೊಬ್ಬರಿಗೆ ಸಾವಿರಾರು ವರ್ಷಗಳ ಜೈಲು ಶಿಕ್ಷೆ ಘೋಷಿಸಿದ್ದು, ಇದೇ ಮೊದಲೇನಲ್ಲ. ಕಳೆದ ವರ್ಷ 66 ವರ್ಷ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ 1075 ವರ್ಷಗಳ ಜೈಲು ಶಿಕ್ಷೆ ಘೋಷಣೆ ಮಾಡಿತ್ತು, ಲೈಂಗಿಕ ಹಲ್ಲೆ (sexual assault), ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ (sexual abuse), ವಂಚನೆ, ರಾಜಕೀಯ ಹಾಗೂ ರಕ್ಷಣಾ ಬೇಹುಗಾರಿಕೆಯ ಅಪರಾಧಕ್ಕೆ ಸಂಬಂಧಿಸಿದಂತೆ ಈ ಜೈಲು (prison) ಶಿಕ್ಷೆ ವಿಧಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ