Spyware Pegasus: ತನ್ನ ವಿರುದ್ಧದ ಆರೋಪ ಸುಳ್ಳೆಂದ ಇಸ್ರೇಲ್ ಕಂಪನಿ!

By Suvarna News  |  First Published Jul 19, 2021, 2:10 PM IST

* 40 ಪತ್ರಕರ್ತರು ಸೇರಿ 300 ಗಣ್ಯರ ಮೊಬೈಲ್‌ ಹ್ಯಾಕ್‌ ಆರೋಪ

* ತನ್ನ ವಿರುದ್ಧದ ಆರೋಪ ಸುಳ್ಳೆಂದ ಇಸ್ರೇಲ್ ಕಂಪನಿ

* ಇಸ್ರೇಲ್‌ ಮೂಲದ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಸಾಫ್ಟ್‌ವೇರ್‌ನಿಂದ ಈ ಮೊಬೈಲ್‌ ಸಂಖ್ಯೆಗಳು ಹ್ಯಾಕ್‌


ನವದೆಹಲಿ(ಜು.19): ಎನ್ಎಸ್ಒ ಗ್ರೂಪ್ ಖಾಸಗಿ ಇಸ್ರೇಲಿ ಸೈಬರ್ ಭದ್ರತಾ ಸಂಸ್ಥೆಯಾಗಿದೆ. ಜುಲೈ 18 ರಂದು, ಈ ಪೆಗಾಸಸ್ ಸ್ಪೈವೇರ್ ಬೇಹುಗಾರಿಕೆ ಮಾಡುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪೆಗಾಸಸ್ ಸ್ಪೈವೇರ್‌ನ್ನು "ದೃಡೀಕರಿಸಲ್ಪಟ್ಟ ಕ್ಲೈಂಟ್‌"ಗಳ ಮೂಲಕ ಭಾರತ ಸೇರಿದಂತೆ ಜಗತ್ತಿನ ಗಣ್ಯರ ಫೋನ್‌ಗಳ ಮೇಲೆ ಕಣ್ಣಿಡಲು ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಪ್ರೋಗ್ರಾಂ ಅಭಿವೃದ್ಧಿಪಡಿಸಿದ ಇಸ್ರೇಲಿ ಇಸ್ರೇಲಿ ಸೈಬರ್ ಭದ್ರತಾ ಸಂಸ್ಥೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ.

ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಎಸ್ಒ ಗ್ರೂಪ್ ಖಾಸಗಿ ಇಸ್ರೇಲಿ ಸೈಬರ್ ಭದ್ರತಾ ಸಂಸ್ಥೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದಿದೆ. ತನ್ನ ಈ ಹೇಳಿಕೆಯಲ್ಲಿ ಪ್ಯಾರಿಸ್‌ ಮೂಲದ ಪತ್ರಿಕೆ ಪಾರ್‌ಬಿಡನ್ ಸ್ಟೋರೀಸ್‌ನ ವರದಿ ಶುದ್ಧ ಸುಳ್ಳು. ತಪ್ಪು ಗ್ರಹಿಕೆಯಿಂದ ಕೂಡಿದ ಈ ವರದಿ ಅನೇಕ ಸಂದೇಹಳನ್ನು ಮೂಡಿಸುತ್ತಿದೆ ಎಂದಿದೆ. ದಾಖಲೆಗಳ ಕೊರತೆಯೇ ಈ ವರದಿ ಸುಳ್ಳು ಎಂಬುವುದನ್ನು ಸಾಬೀತುಪಡಿಸುತ್ತದೆ ಎಂದಿದೆ.

Tap to resize

Latest Videos

undefined

40 ಪತ್ರಕರ್ತರು ಸೇರಿ 300 ಗಣ್ಯರ ಮೊಬೈಲ್‌ ಹ್ಯಾಕ್‌: ವರದಿ!

ಸರಕಾರದಿಂದಲೇ ಬೇಹುಗಾರಿಕೆ: ವಿಪಕ್ಷ ನಾಯಕರ ಆಕ್ರೋಶ

ಇನ್ನು ಪೆಗಾಸಸ್ ಸ್ಪೈವೇರ್‌ ಬಳಸಿ ಅಪರಿಚಿತ ಏಜನ್ಸಿ ಗಣ್ಯರ ಫೋನ್‍ಗಳನ್ನು ಹ್ಯಾಕ್ ಮಾಡಿದೆ ಎಂಬ ವರದಿ ಬೆನ್ನಲ್ಲೇ ಸರಕಾರದ ವಿರುದ್ಧ ವಿಪಕ್ಷ ನಾಯಕರುಗಳು ಕಿಡಿಕಾರಿದ್ದಾರೆ. ಅಲ್ಲದೇ ಈ ಬಗ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮ ಪ್ರಶ್ನಿಸಿದ್ದು, ಈ ವಿಚಾರ ಚರ್ಚೆಯಾಗಲೇಬೇಕಿದೆ. ಇದು ಸರಕಾರದಿಂದ ಬೇಹುಗಾರಿಕೆ. ಇದು ಬಹಳ ಗಂಭೀರ ವಿಚಾರ ಹಾಗೂ ನಾಗರಿಕರ ಗೌಪ್ಯತೆಯನ್ನು ಹತ್ತಿಕ್ಕುತ್ತದೆ. ನಾವು ಇದನ್ನು  ಪರಿಶೀಲಿಸಬೇಕು ಎಂದೆಲ್ಲಾ ಹೇಳಿಕೊಂಡು ಸರಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಯಾವ ಏಜನ್ಸಿಗಳು ಪೆಗಾಸಸ್ ಅನ್ನು ಖರೀದಿಸಿದ್ದವು?' ಎಂದು ಕೇಳಿದ್ದಾರೆ.

ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್‌ ಒಳಗೆ ನುಸುಳುತ್ತದೆ?

ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಈ ಬಗ್ಗೆ ಟ್ವೀಟ್ ಮಾಡುತ್ತಾ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ. ಭಾರತ ಸರಕಾರ ಪೆಗಾಸಸ್ ಅನ್ನು ಬಳಸಿಲ್ಲ ಎಂದು ಹೇಳುವಲ್ಲಿ ಸರಕಾರ ಪ್ರಾಮಾಣಿಕವಾಗಿದೆಯೆಂದಾದರೆ ವಿದೇಶಿ ಸರಕಾರ ಭಾರತೀಯ ನಾಗರಿಕರ ಮೇಲೆ ಗೂಢಚರ್ಯೆ ನಡೆಸಿದೆ ಎಂದಾಗುತ್ತದೆ" ಎಂದಿದ್ದಾರೆ.

ಅತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿ "ನಮಗೆ ಗೊತ್ತು ಅವರೇನು ಓದುತ್ತಿದ್ದಾರೆಂದು-ನಿಮ್ಮ ಫೋನ್‍ನಲ್ಲಿರುವುದೆಲ್ಲವೂ#ಪೆಗಾಸಸ್" ಎಂದು ಬರೆದಿದ್ದಾರೆ.

click me!