Israel Palestine War: ಬಂದೂಕು ಹಿಡಿದು ರಣಾಂಗಣಕ್ಕೆ ಕಾಲಿಟ್ಟ ಇಸ್ರೇಲ್‌ನ 61 ವರ್ಷದ ಮಾಜಿ ಯೋಧ ಯೈರ್‌ ಗೋಲನ್‌!

Published : Oct 10, 2023, 01:05 PM IST
Israel Palestine War: ಬಂದೂಕು ಹಿಡಿದು ರಣಾಂಗಣಕ್ಕೆ ಕಾಲಿಟ್ಟ ಇಸ್ರೇಲ್‌ನ 61 ವರ್ಷದ ಮಾಜಿ ಯೋಧ ಯೈರ್‌ ಗೋಲನ್‌!

ಸಾರಾಂಶ

ಹುಶಃ ಇಸ್ರೇಲ್‌ ಮಾಧ್ಯಮಗಳ ಪರಿಚಯ ಇಲ್ಲದೇ ಹೋದಲ್ಲಿ, ಇಸ್ರೇಲ್‌ನ ಆಂತರಿಕ ಬೆಳವಣಿಗೆಗಳ ಬಗ್ಗೆ ಗಮನವಿಲ್ಲದೇ ಇದ್ದಲ್ಲಿ ನಿಮಗೆ 61 ವರ್ಷದ ಇಸ್ರೇಲ್‌ ಮಾಜಿ ಯೋಧ ಯೈರ್‌ ಗೋಲನ್‌ ಯಾರು ಅನ್ನೋದು ನಿಮಗೆ ಅರ್ಥವಾಗಲಿಕ್ಕಿಲ್ಲ. ಸೇನೆಯಿಂದ ನಿವೃತ್ತರಾಗಿದ್ದರೂ, ಗೋಲನ್‌ ಬಂದೂಕು ಹಿಡಿದು ಇಂದು ರಣಾಂಗಣಕ್ಕೆ ಕಾಲಿಟ್ಟಿದ್ದಾರೆ.  

ನವದೆಹಲಿ (ಅ.10): ಇಸ್ರೇಲ್‌ ಅಂದರೆ ನಿಮಗೆ ಸುಮ್ಮನೆ ಅರ್ಥವಾಗುವ ದೇಶವಲ್ಲ. ಅಲ್ಲಿನ ಜನರಲ್ಲಿರುವ ದೇಶಪ್ರೇಮವೇ ಎದುರಾಳಿಗಳ ಪಾಲಿಗೆ ಮದ್ದುಗುಂಡು. ಇನ್ನು ಇಸ್ರೇಲ್‌ನ ಮಾಧ್ಯಮಗಳ ಪರಿಚಯವೇ ಇಲ್ಲದೇ ಇದ್ದಲ್ಲಿ ಇಸ್ರೇಲ್‌ನ ಯಾವ ಬೆಳವಣಿಗೆಗಳು ಕೂಡ ನಿಮಗೆ ಅರ್ಥವಾಗೋದಿಲ್ಲ, ಬೆಂಜಮಿನ್‌ ನೆತನ್ಯಾಹು ಯಾರು? ಯೈರ್‌ ಲಾಪಿಡ್‌, ಯೈರ್‌ ಗೋಲನ್‌, ಇಸ್ರೇಲ್‌ನ ಅಸಾಧ್ಯ ಮೀಸಲು ರಕ್ಷಣಾ ಪಡೆ. ಇವುಗಳ ಮಾಹಿತಿ ತಿಳಿಯಬೇಕಾದಲ್ಲಿ ನಿಮಗೆ ಇಸ್ರೇಲ್‌ನ ಮಾಧ್ಯಮಗಳನ್ನು ತಿಳಿಯೋದು ಅನಿವಾರ್ಯ. ಇಸ್ರೇಲ್‌ನಲ್ಲಿ ಮೀಸಲು ರಕ್ಷಣಾ ಪಡೆಯಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಅಂಗವೈಕಲ್ಯ ಹಾಗೂ ಧಾರ್ಮಿಕ ಸೇವೆಗಳಲ್ಲಿ ಭಾಗಿಯಾದವರನ್ನು ಹೊರತುಪಡಿಸಿ, ಯುವಕ-ಯುವತಿಯರು ಎಲ್ಲರೂ ಕಡ್ಡಾಯವಾಗಿ ಎರಡು ವರ್ಷ ಸೇನಾ ತರಬೇತಿ ಪಡೆಯಲೇಬೇಕು. 2 ವರ್ಷ ಸೇನೆಯಲ್ಲಿ ತರಬೇತಿ ಪಡೆದ ಬಳಿಕ ವಾಪಾಸ್‌ ಬರಬಹುದಾದರೂ, ಭವಿಷ್ಯದ ದಿನಗಳಲ್ಲಿ ದೇಶಕ್ಕೆ ಆಪತ್ತು ಬಂದಾಗ ಮೀಸಲು ರಕ್ಷಣಾ ಪಡೆಗೆ ಸೇರಬೇಕು. ಅಕ್ಕಪಕ್ಕದಲ್ಲಿ ಶತ್ರುಗಳೇ ತುಂಬಿರುವ ಇಸ್ರೇಲ್‌ಗೆ ಇಂಥದ್ದೊಂದು ಪಡೆ ಅನಿವಾರ್ಯ. ಹಮಾಸ್‌ ಜೊತೆಗಿನ ಯುದ್ಧದಲ್ಲಿ ಇತ್ತೀಚೆಗೆ ಇಸ್ರೇಲ್‌ನ ಮಾಜಿ ಸೈನಿಕ 61 ವರ್ಷದ ನಿವೃತ್ತ ಮೇಜರ್‌ ಜನರಲ್‌ ಯೈರ್‌ ಗೋಲನ್‌ ಬಂದೂಕು ಹಿಡಿದು ಹೋಗಿರುವುದು ಬಹಳ ಸುದ್ದಿಯಾಗಿದೆ. ಯೈರ್‌ ಗೋಲನ್‌ ಇಸ್ರೇಲ್‌ನ ಪ್ರಮುಖ ರಾಜಕಾರಣಿ ಮಾತ್ರವಲ್ಲ, ಟು-ಸ್ಟೇಟ್ಸ್ ಸಲ್ಯೂಷನ್‌ ಬಗ್ಗೆ ಒಲವು ಹೊಂದಿರುವಂಥ ವ್ಯಕ್ತಿ.

ಟು-ಸ್ಟೇಟ್ಸ್‌ ಸಲ್ಯೂಷನ್‌ ಅಂದರೆ, ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ದೇಶಗಳು ದ್ವಿಪಕ್ಷೀಯ ಚರ್ಚೆ ಮಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳಬೇಕು ಎಂದು ಒಲವಿರುವ ವ್ಯಕ್ತಿ. ಇಸ್ರೇಲ್‌ನ ಎಡಪಂಥೀಯ ನಾಯಕ. ಹಾಗಿದ್ದರೂ, ದೇಶ ರಕ್ಷಣೆಯ ವಿಚಾರ ಬಂದಾಗ ತನ್ನೆಲ್ಲಾ ಭಿನ್ನಾಭಿಪ್ರಾಯ ಬದಿಗಿಟ್ಟು ಅವರು ರಣಾಂಗಣಕ್ಕೆ ಕಾಲಿಟ್ಟಿದ್ದಾರೆ.

ಸೋಮವಾರ ಐಡಿಎಫ್‌ (ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌) ಮತ್ತು ಇಸ್ರೇಲ್‌ ಪೊಲೀಸ್‌ ಸಂಪೂರ್ಣವಾಗಿ ಗೊಂದಲದಲ್ಲಿತ್ತು. ಈ ಹಂತದಲ್ಲಿ ತನ್ನ ಹಳೆಯ ಸೇನಾ ಸಮವಸ್ತ್ರ ಧರಿಸಿ, ಕೈಯಲ್ಲಿ ಬಂದೂಕು ಹಿಡಿದು ಬಂದವರು ಯೈರ್‌ ಗೋಲನ್‌. ಯುದ್ಧಪೀಡಿತ ಪ್ರದೇಶದಲ್ಲಿ ಹಲವಾರು ಬಾರಿ ಸುತ್ತಾಡಿದ ಅವರು, ಸಂಕಷ್ಟದಲ್ಲಿದ್ದ ಸಾಕಷ್ಟು ನಾಗರೀಕರನ್ನು ಕಾಪಾಡಿದ್ದಾರೆ. ದಕ್ಷಿಣ ಇಸ್ರೇಲ್‌ನ ಔಟ್‌ಡೋರ್‌ ಪಾರ್ಟಿಯ ಮೇಲೆ ಹಮಾಸ್‌ ದಾಳಿ 260 ಜನರನ್ನು ಹತ್ಯೆ ಮಾಡಿತ್ತಲ್ಲ ಅದೇ ಪ್ರದೇಶಲ್ಲಿ ಪೊದೆಯ ನಡುವೆ ಅಡಗಿಕೊಂಡಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಇವರು ರಕ್ಷಿಸಿದ್ದಾರೆ. ಇದೇ ವೇಳೆ ಪತ್ರಕರ್ತರೊಬ್ಬರು, ನನ್ನ ಪುತ್ರ ಇಲ್ಲಿಯೇ ಎಲ್ಲೋ ಇದ್ದಾನೆ ಆತನನ್ನು ಕಾಪಾಡಿ ಎಂದು ಯೈರ್‌ ಗೋಲನ್‌ ಬಳಿಕ ಕೇಳಿದಾಗ, 'ಆತನ ಸ್ಥಳ ಎಲ್ಲಿ ಅನ್ನೋದನ್ನು ಕೇಳಿ. ಅಕ್ಕಪಕ್ಕದಲ್ಲಿ ಏನಾದರೂ ಕಾಣುತ್ತಿದೆಯೇ ಎನ್ನುವುದನ್ನು ತಿಳಿಸಿ. ಆತನನ್ನು ಕರೆತರುವ ಜವಾಬ್ದಾರಿ ನನ್ನದು ಎಂದು ಕಾರು ಹತ್ತಿದ್ದರು. ಅಂದಾಜು ಒಂದು ಗಂಟೆಯ ಬಳಿಕ ಪತ್ರಕರ್ತನ ಪುತ್ರ ಗೋಲನ್‌ ಅವರ ಕಾರ್‌ನಿಂದಲೇ ತಂದೆಗೆ ಕರೆ ಮಾಡಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು.

ಯುದ್ಧಪೀಡಿಯ ಪ್ರದೇಶದಲ್ಲಿ ಒಂದು ಸಣ್ಣ ಸಿಬ್ಬಂದಿಯನ್ನು ಸಂಗ್ರಹಿಸಿದ  ಯೈರ್‌ ಗೋಲನ್‌, ಹಮಾಸ್‌ ಭಯೋತ್ಪಾದಕರಿಂದ ದಾಳಿಗೆ ಒಳಗಾದ ಇಸ್ರೇಲ್‌ ನಾಗರೀಕರ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ಈಗ 61 ವರ್ಷ. ಸುಮನ್ನೆ ಮನೆಯಲ್ಲಿ ಇದ್ದರೂ ಅವರನ್ನು ಯಾರೂ ಕೇಳುತ್ತಿರಲಿಲ್ಲ. ಆದರೆ, ಇಸ್ರೇಲ್‌ ಎನ್ನುವ ದೇಶ ಹಾಗೂ ಅಲ್ಲಿನ ನಾಗರೀಕರು ಹಾಗಲ್ಲ. ತನಗೆ ತಿಳಿದಿಲ್ಲದ ತನ್ನ ದೇಶದ ಜನರಿಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಡಲು ನಿರ್ಧಾರ ಮಾಡುವ ವ್ಯಕ್ತಿಗಳು.

Isreal Dispatch: ಗಾಜಾಕ್ಕೆ ವಿದ್ಯುತ್‌, ಇಂಧನ, ಆಹಾರ ಬಂದ್‌; ಈವರೆಗೂ 1 ಸಾವಿರ ಟನ್‌ ಬಾಂಬ್‌ ಗಿಫ್ಟ್‌!

ಇಸ್ರೇಲ್‌ನ ಎಡಪಂಥೀಯ ವಾದದ ಅತಿದೊಡ್ಡ ದನಿ ಯೈರ್‌ ಗೋಲನ್‌. ಬಲಪಂಥೀಯರಿಂದ ಅವರ ಮೇಲೆ ನಿರಂತರವಾಗಿ ದಾಳಿ ಆಗುತ್ತಲೇ ಇರುತ್ತದೆ. ಆದರೆ, ದೇಶದ ಮೇಲೆ ದಾಳಿ ಎನ್ನುವ ಪ್ರಶ್ನೆ ಬಂದಾಗ ಮೊದಲಿಗೆ ದೇಶದ ಹಿತ ಕಾಯುವಂಥ ನಿರ್ಧಾರವನ್ನು ಮಾಡಿ ಸೇನೆಗೆ ಸೇರಿದ್ದಾರೆ.

 

ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್‌ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್‌ ಅಹಿಂಸಾ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!