ಇಸ್ರೇಲ್‌- ಪ್ಯಾಲೆಸ್ತೀನ್‌ ಯುದ್ಧದಲ್ಲಿ ಹಲವು ವಿದೇಶಿಗರ ಸಾವು, ಹಲವಾರು ಫಾರಿನರ್ಸ್ ಉಗ್ರರ ಒತ್ತೆಯಾಳು

Published : Oct 10, 2023, 12:35 PM ISTUpdated : Oct 10, 2023, 12:57 PM IST
ಇಸ್ರೇಲ್‌- ಪ್ಯಾಲೆಸ್ತೀನ್‌ ಯುದ್ಧದಲ್ಲಿ ಹಲವು ವಿದೇಶಿಗರ ಸಾವು, ಹಲವಾರು ಫಾರಿನರ್ಸ್ ಉಗ್ರರ ಒತ್ತೆಯಾಳು

ಸಾರಾಂಶ

ಇಸ್ರೇಲ್‌-ಪ್ಯಾಲೆಸ್ತೀನ್‌ ಕದನದಲ್ಲಿ ಈವರೆಗೆ ಸಾವಿನಪ್ಪಿರುವವರ ಸಂಖ್ಯೆ 1500 ದಾಟಿದೆ. ಗಾಯಗೊಂಡವರ ಸಂಖ್ಯೆ ಕೂಡ 1000 ದಾಟಿದೆ. ಇನ್ನು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಪ್ಯಾಲೆಸ್ತೀನಿ ಹಮಾಸ್‌ ಬಂಡುಕೋರರು ನಡೆಸಿದ ರಾಕೆಟ್‌ ದಾಳಿಯಲ್ಲಿ ಅನೇಕ ವಿದೇಶಿಗರು ಮೃತಪಟ್ಟಿದ್ದಾರೆ.

ಟೆಲ್‌ ಅವಿವ್‌ (ಅ.10): ಇಸ್ರೇಲ್‌-ಪ್ಯಾಲೆಸ್ತೀನ್‌ ಕದನದಲ್ಲಿ ಈವರೆಗೆ ಸಾವಿನಪ್ಪಿರುವವರ ಸಂಖ್ಯೆ 1500 ದಾಟಿದೆ. ಗಾಯಗೊಂಡವರ ಸಂಖ್ಯೆ ಕೂಡ 1000 ದಾಟಿದೆ. ಇನ್ನು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಪ್ಯಾಲೆಸ್ತೀನಿ ಹಮಾಸ್‌ ಬಂಡುಕೋರರು ನಡೆಸಿದ ರಾಕೆಟ್‌ ದಾಳಿಯಲ್ಲಿ ಅನೇಕ ವಿದೇಶಿಗರು ಮೃತಪಟ್ಟಿದ್ದಾರೆ. ಸಂಗೀತ ಉತ್ಸವದಲ್ಲಿದ್ದಾಗ ಹಮಾಸ್‌ ಉಗ್ರರು ದಾಳಿ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಅನೇಕ ವಿದೇಶಿಗರು ಕೂಡ ಭಾಗಿಯಾಗಿದ್ದರು. ಅನೇಕ ಮಂದಿ ಕಾಣಿಯಾಗಿದ್ದು, ಹಲವರನ್ನು ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.  ಮೃತರಲ್ಲಿ ಥಾಯ್ಲೆಂಡ್‌ನ 18 ಜನ, ಅಮೆರಿಕ11 ,10 ನೇಪಾಳಿಗರು,  ಉಕ್ರೇನಿಗಳು, ಬ್ರಿಟನ್‌, ಕೆನಡಾದ ಸೇರಿ ಹಲವು ಮಂದಿಯಿದ್ದಾರೆ.  ನಾಪತ್ತೆ ಆದವರು ಹಾಗೂ ಒತ್ತೆಯಾಳುಗಳ ರಕ್ಷಣೆಗೆ ಆಯಾ ಸರ್ಕಾರಗಳು ಶ್ರಮಿಸುತ್ತಿವೆ.

ಥೈಲ್ಯಾಂಡ್: 18 ಸಾವು, 11 ಒತ್ತೆಯಾಳುಗಳು
ಥಾಯ್ಲೆಂಡ್ ನ 18 ಪ್ರಜೆಗಳು ಮೃತಪಟ್ಟಿದ್ದಾರೆ. ಒಂಬತ್ತು ಗಾಯಾಳುಗಳು ಮತ್ತು 11 ಮಂದಿ ಸೆರೆಯಾಳಾಗಿದ್ದಾರೆ. ಥಾಯ್ಲೆಂಡ್‌ನ ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿ ಜಕ್ಕಾಪಾಂಗ್ ಸಂಗ್ಮಾನಿ  ಅವರ ಮಾಹಿತಿ ಪ್ರಕಾರ ಇಸ್ರೇಲ್‌ನಿಂದ  ಸಾವಿರಾರು  ಜನರನ್ನು ಸ್ಥಳಾಂತರಿಸಲು ಸರ್ಕಾರ ಕೆಲಸ ಮಾಡುತ್ತಿದೆ . ಸುಮಾರು 30,000 ಪ್ರಜೆಗಳು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಾರೆ. ಹೆಚ್ಚಾಗಿ ಕೃಷಿ ಕೆಲಸದ ಕಾರ್ಮಿಕರಾಗಿದ್ದಾರೆ. ಸುಮಾರು 3,000 ಜನರು ಥೈಲ್ಯಾಂಡ್‌ಗೆ ಮರಳಲು ವಿನಂತಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಸ್ರೇಲ್ ಉಗ್ರ ಬೇಟೆ: 500 ಹಮಾಸ್ ನೆಲೆ ಧ್ವಂಸ: ಸಾವಿನ ಸಂಖ್ಯೆ 1400ಕ್ಕೆ

ಅರ್ಜೆಂಟೀನಾದ 7 ಮಂದಿ ಸಾವು:
ಅರ್ಜೆಂಟೀನಾದ ವಿದೇಶಾಂಗ ಸಚಿವ ಸ್ಯಾಂಟಿಯಾಗೊ ಕಾಫಿರೊ ಅವರು ಇಸ್ರೇಲ್‌ನಲ್ಲಿ ನಡೆದ ದಾಳಿಯಲ್ಲಿ 7 ಅರ್ಜೆಂಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 15 ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಸುಮಾರು 625 ಅರ್ಜೆಂಟೀನಾದ ಪ್ರಜೆಗಳು ತಮ್ಮ ದೇಶಕ್ಕೆ ಮರಳಲು ವಿನಂತಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಅಮೆರಿಕದ 11 ಮಂದಿ ಸಾವು, ಹಲವರು ನಾಪತ್ತೆ:
ಕನಿಷ್ಠ 11 ಯುಎಸ್ ನಾಗರಿಕರ ಸಾವನ್ನು ಅಮೆರಿಕ ದೃಡಪಡಿಸಿದೆ. ಹಮಾಸ್ ವಶಪಡಿಸಿಕೊಂಡಿರುವ ಒತ್ತೆಯಾಳುಗಳಲ್ಲಿ ಹಲವು ಮಂದಿ ಇದ್ದಾರೆ ಎಂದು ಅಧ್ಯಕ್ಷ ಜೋ ಬಿಡೆನ್ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಭಾರತೀಯ ಮಹಿಳೆ

ಫ್ರಾನ್ಸ್ 2 ಸಾವು, 14 ಮಂದಿ ನಾಪತ್ತೆ:
ಹಮಾಸ್‌ ಉಗ್ರರ ದಾಳಿಯಲ್ಲಿ ಇಬ್ಬರು ಫ್ರೆಂಚ್ ಜನರು ಸಾವನ್ನಪ್ಪಿದ್ದಾರೆ ಎಂದು ಫ್ರೆಂಚ್ ಸರ್ಕಾರ ಹೇಳಿದೆ ಮತ್ತು ನಾಪತ್ತೆಯಾಗಿರುವ 14 ಪ್ರಜೆಗಳಲ್ಲಿ 12 ವರ್ಷ ವಯಸ್ಸಿನವನೂ ಸೇರಿದ್ದಾನೆ. "ನಮ್ಮಲ್ಲಿರುವ ಮಾಹಿತಿಯ ಆಧಾರದ ಮೇಲೆ, ಅವರಲ್ಲಿ ಕೆಲವರನ್ನು ಅಪಹರಿಸಲಾಗಿದೆ ಎಂದು ನಾವು ಪರಿಗಣಿಸುತ್ತೇವೆ" ಎಂದು ಫ್ರೆಂಚ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ, "ಈ ಸಂಖ್ಯೆಯು ಇನ್ನೂ ಬದಲಾವಣೆಗೆ ಒಳಪಟ್ಟಿರುತ್ತದೆ" ಎಂದು ಹೇಳಿದರು.

ನೇಪಾಳದ10 ಸಾವು, ಒಬ್ಬ ನಾಪತ್ತೆ:
ಹಮಾಸ್ ಹೋರಾಟಗಾರರಿಂದ ದಾಳಿಗೊಳಗಾದ ಸ್ಥಳಗಳಲ್ಲಿ ಒಂದಾದ ಕಿಬ್ಬತ್ಜ್ ಅಲ್ಯುಮಿಮ್‌ನಲ್ಲಿ ಹತ್ತು ನೇಪಾಳದ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಟೆಲ್ ಅವೀವ್‌ನಲ್ಲಿರುವ ನೇಪಾಳ ರಾಯಭಾರ ಕಚೇರಿ ತಿಳಿಸಿದೆ. ಇತರ ನಾಲ್ವರು ನೇಪಾಳದ ಪ್ರಜೆಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ ಎಂದು ರಾಯಭಾರ ಕಚೇರಿ ಹೇಳಿದೆ.

ಆಸ್ಟ್ರಿಯಾದ ಮೂವರು ನಾಪತ್ತೆ:
ಅಪಹರಣಕ್ಕೊಳಗಾದವರಲ್ಲಿ ಮೂವರು ಆಸ್ಟ್ರಿಯನ್-ಇಸ್ರೇಲಿ ಉಭಯ ನಾಗರಿಕರು ಇರಬಹುದು ಎಂದು ಆಸ್ಟ್ರಿಯಾದ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಬ್ರೆಜಿಲ್ ಮೂವರು ನಾಪತ್ತೆ:
ಸಂಗೀತ ಉತ್ಸವದಲ್ಲಿ ಭಾಗವಹಿಸಿದ ನಂತರ ಮೂವರು ಬ್ರೆಜಿಲಿಯನ್-ಇಸ್ರೇಲಿ ಪ್ರಜೆಗಳು ಕಾಣೆಯಾಗಿದ್ದಾರೆ ಎಂದು ಬ್ರೆಜಿಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಾಂಬೋಡಿಯಾ ಓರ್ವ ಸಾವು:
ಇಸ್ರೇಲ್‌ನಲ್ಲಿ ಒಬ್ಬ ಕಾಂಬೋಡಿಯನ್ ವಿದ್ಯಾರ್ಥಿ ಕೊಲ್ಲಲ್ಪಟ್ಟಿದ್ದಾನೆ ಎಂದು ಕಾಂಬೋಡಿಯಾದ ಪ್ರಧಾನಿ ಹನ್ ಮಾನೆಟ್ ಹೇಳಿದ್ದಾರೆ.

ಕೆನಡಾ ಓರ್ವ ಸಾವು, ಮೂವರು ನಾಪತ್ತೆ:
ಒಬ್ಬ ಕೆನಡಾದವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ನಾಪತ್ತೆಯಾಗಿದ್ದಾರೆ ಎಂದು ಕೆನಡಾ ಸರ್ಕಾರ ಹೇಳಿದೆ.

ಚಿಲಿ ಇಬ್ಬರು ನಾಪತ್ತೆ: ಚಿಲಿಯ ವಿದೇಶಾಂಗ ಸಚಿವಾಲಯ ತನ್ನ ಇಬ್ಬರು ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಸೋಮವಾರ ದೃಢಪಡಿಸಿದೆ. ದಂಪತಿಗಳು ಇಸ್ರೇಲ್‌ನ ಗಾಜಾದ ಗಡಿಯಿಂದ ದೂರದಲ್ಲಿರುವ ಕಿಬ್ಬತ್ಸ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕೊಲಂಬಿಯಾ ಇಬ್ಬರು ನಾಪತ್ತೆ:
ಸೂಪರ್‌ನೋವಾ ಉತ್ಸವದಲ್ಲಿದ್ದ ಇಬ್ಬರು ಕೊಲಂಬಿಯನ್ನರು ನಾಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾ ಸರ್ಕಾರ ದೃಢಪಡಿಸಿದೆ ಮತ್ತು ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದಿದೆ.

ಜರ್ಮನಿಯ ಹಲವರು ಒತ್ತೆಯಾಳು:
ಹಲವಾರು ಜರ್ಮನ್  ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಎಂದು ಜರ್ಮನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಐರ್ಲೆಂಡ್ ಒಬ್ಬರು ಕಾಣೆ:
ಐರಿಶ್-ಇಸ್ರೇಲಿ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂದು ಐರಿಶ್ ಸರ್ಕಾರ ದೃಢಪಡಿಸಿದೆ.

ಇಟಲಿಯ ಇಬ್ಬರು ನಾಪತ್ತೆ:
ಇಬ್ಬರು  ಇಟಾಲಿಯನ್ನರು ಕಾಣೆಯಾಗಿದ್ದಾರೆ ಎಂದು ಇಟಾಲಿಯನ್ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಹೇಳಿದ್ದಾರೆ.  ಅವರು ಪತ್ತೆಯಾಗಿಲ್ಲ ಮತ್ತು ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಹೇಳಿದ್ದಾರೆ.

ಮೆಕ್ಸಿಕೋ ಇಬ್ಬರು ಒತ್ತೆಯಾಳು:
ಮೆಕ್ಸಿಕೊದ ವಿದೇಶಾಂಗ ಸಚಿವ ಅಲಿಸಿಯಾ ಬಾರ್ಸೆನಾ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಮೆಕ್ಸಿಕನ್ನರು, ಒಬ್ಬ ಪುರುಷ ಮತ್ತು ಮಹಿಳೆಯನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ