
ಇರಾನ್ ನಡೆಸಿದ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಾವನ್ನಪ್ಪಿದ್ದಾರೆ ಎಂಬ ಊಹಾಪೋಹಾಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಹಿನ್ನೆಲೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸ್ವತಃ ತಮ್ಮ ವೀಡಿಯೋ ಪೋಸ್ಟ್ ಮಾಡುತ್ತಾ ಇಸ್ರೇಲ್ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋವೂ ವೈರಲ್ ಆಗಿದ್ದು, ವಿಡಿಯೋದಲ್ಲಿ ನೆತನ್ಯಾಹು ಕೆಫೆಯೊಂದರಲ್ಲಿ ಕಾಫಿ ಆರ್ಡರ್ ಮಾಡುತ್ತಾ ತಮ್ಮ ಸಾವಿನ ವದಂತಿಗಳ ಬಗ್ಗೆ ತಮಾಷೆ ಮಾಡುತ್ತಿರುವುದನ್ನು ನೋಡಬಹುದು.
ನಾನು ಕಾಫಿಗಾಗಿ ಸತ್ತಿದ್ದೇನೆ ಎಂದ ನೆತನ್ಯಾಹು:
ನಾನು ಕಾಫಿಗಾಗಿ ಸತ್ತಿದ್ದೇನೆ (I am dead… for coffee)ಎಂದು ಅವರು ಹೀಬ್ರೂ ಭಾಷೆಯ ಪ್ರಸಿದ್ಧ ಪ್ರಾಸವನ್ನು ಬಳಸಿ ಹೇಳಿದ್ದು, ಅದರರ್ಥ ಏನನ್ನಾದರೂ ಸಾಯುವಷ್ಟು ಪ್ರೀತಿಸುವುದು. ನಿಮಗೆ ಗೊತ್ತಾ? ನಾನು ನನ್ನ ಜನರಿಗಾಗಿ ಸಾಯುತ್ತಿದ್ದೇನೆ. ಅವರು ವರ್ತಿಸುವ ರೀತಿ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ. ವೀಡಿಯೋದಲ್ಲಿ ನೆತನ್ಯಾಹು ತಮ್ಮ ಎರಡೂ ಕೈಗಳನ್ನು ಎತ್ತಿ ಕ್ಯಾಮೆರಾಗೆ ತೋರಿಸುತ್ತಾ ತಮ್ಮ ಬೆರಳುಗಳನ್ನು ತೋರಿಸಿ ಹಲವು ಊಹಾಪೋಹಾಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಏಕೆಂದರೆ ಗುರುವಾರ ಅವರು ಪತ್ರಿಕಾಗೋಷ್ಠಿ ನಡೆಸುತ್ತಿರುವ ವೀಡಿಯೊವೊಂದರಲ್ಲಿ ಅವರ ಒಂದು ಕೈಯಲ್ಲಿ ಆರು ಬೆರಳುಗಳಿರುವುದು ಕಾಣಿಸಿತ್ತು. ಹಾಗೂ ಈ ವೀಡಿಯೋವನ್ನು ಎಐ ಮೂಲಕ ಮಾಡಲಾಗಿದೆ ಎಂದು ವರದಿಯಾಗಿದ್ದರಿಂದ ಅವರ ಸಾವಿನ ಬಗ್ಗೆ ಅನುಮಾನ ಮೂಡಿದ್ದವು.
ಈ ಹಿನ್ನೆಲೆ ತಮ್ಮ ಇತ್ತೀಚಿನ ವೀಡಿಯೋದಲ್ಲಿ ಪ್ರತಿಕ್ರಿಯಿಸಿದ ಅವರು ನನ್ನ ಬೆರಳುಗಳನ್ನು ಎಣಿಸಲು ನೀವು ಬಯಸುವಿರಾ? ನೀವು ಅವುಗಳನ್ನು ಇಲ್ಲಿ ನೋಡಬಹುದು. ನೋಡಿ? ತುಂಬಾ ಚೆನ್ನಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಯುದ್ಧದ ನಡುವೆ ಇಸ್ರೇಲಿ ನಾಗರಿಕರಿಗೆ ನೆತನ್ಯಾಹು ನೀಡಿದ ನೀಡಿದ ಸಂದೇಶದಲ್ಲಿ ಅವರು ಹೀಗೆ ಹೇಳಿದ್ದಾರೆ.
ಹೊರಗೆ ಹೋಗಿ ಸ್ವಲ್ಪ ತಾಜಾ ಗಾಳಿಯನ್ನು ಉಸಿರಾಡಿ, ಆದರೆ ಸಂರಕ್ಷಿತ ಸ್ಥಳದ ಬಳಿ ಇರಿ. ನಿಮ್ಮ ಸ್ಥಿರತೆ ಅದ್ಭುತವಾಗಿದೆ ಇದು ನನಗೆ, ಸರ್ಕಾರಕ್ಕೆ, ಐಡಿಎಫ್‌ಗೆ ಮತ್ತು ಮೊಸಾದ್‌ಗೆ ಬಲವನ್ನು ನೀಡುತ್ತದೆ. ನಾನು ಮಾಡಲಾಗದ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ... ಈ ಕ್ಷಣದಲ್ಲಿ, ಆದರೆ ನಾವು ಇಂದಿಗೂ ಇರಾನ್ ಮೇಲೆ ತೀವ್ರ ದಾಳಿ ಮಾಡುತ್ತಿದ್ದೇವೆ. ನೀವು ನನಗೆ ಮುಂದುವರಿಯಲು ಹೇಳುತ್ತಿದ್ದೀರಾ? ನಾನು ನಿಮ್ಮೆಲ್ಲರಿಗೂ ಹೇಳುತ್ತೇನೆ: ನೀವು ಸಹ ಮುಂದುವರಿಯಿರಿ.
ಯಾವಾಗಲೂ ಸುರಕ್ಷಿತ ಸ್ಥಳದ ಬಳಿ ಇರುವಂತೆ ಹೋಮ್ ಫ್ರಂಟ್ ಕಮಾಂಡ್ ನೀಡುವ ಸೂಚನೆಗಳನ್ನು ಕೇಳುವುದನ್ನು ಮುಂದುವರಿಸಿ, ಹೋಮ್ ಫ್ರಂಟ್ ಕಮಾಂಡ್ ಮತ್ತು ನಗರ ಮೇಯರ್‌ಗಳ ಸೂಚನೆಗಳನ್ನು ಸಹ ಆಲಿಸಿ, ನಾವು ಸಾಧ್ಯವಾದಷ್ಟು ನಿರ್ಬಂಧಗಳನ್ನು ಸಡಿಲಿಸುತ್ತೇವೆ. ಮತ್ತು ಕಾಫಿಗೆ ಧನ್ಯವಾದಗಳು, ಇದು ಅತ್ಯುತ್ತಮವಾಗಿದೆ. ಕ್ಯಾಲೋರಿಗಳ ಬಗ್ಗೆ ನನಗೆ ತಿಳಿದಿಲ್ಲಎಂದು ಅವರು ಹೇಳಿದರು.
ಇದನ್ನೂ ಓದಿ: ಹೊನ್ನಾವರ : KSRTC ಬಸ್ - ಓಮ್ನಿ ನಡುವೆ ಭೀಕರ ಅಪಘಾತ: ಓಮ್ನಿ ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು
ಇದಕ್ಕೂ ಮುನ್ನ, ಇರಾನ್ ಭಾನುವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹಿಂಸಿಸಿ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿತ್ತು. ಈ ಮಕ್ಕಳನ್ನು ಕೊಲ್ಲುವ ಅಪರಾಧಿ ಜೀವಂತವಾಗಿದ್ದರೆ ನಾವು ಅವನನ್ನು ಪೂರ್ಣ ಬಲದಿಂದ ಬೆನ್ನಟ್ಟಿ ಕೊಲ್ಲುತ್ತೇವೆ ಎಂದು ಇರಾನ್‌ನ ಪಡೆಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು 16 ನೇ ದಿನಕ್ಕೆ ಕಾಲಿಟ್ಟಿರುವ ಸಮಯದಲ್ಲಿ ಇರಾನ್ ಹೇಳಿಕೆ ಬಂದಿದೆ. ಫೆಬ್ರವರಿ 28ರಂದು ಅಮೆರಿಕಾ ಹಾಗೂ ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ನಂತರ ಈ ಸಂಘರ್ಷ ಉಲ್ಬಣಗೊಂಡಿದೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ. ಈ ದಾಳಿ ಮಧ್ಯಪ್ರಾಚ್ಯದಾದ್ಯಂತ ವ್ಯಾಪಕ ಸಂಘರ್ಷಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಉಪ ಚುನಾವಣೆ ಘೋಷಣೆ: ಬಾಗಲಕೋಟೆಯಲ್ಲಿ ರಾಜಕಾರಣಿಗಳ ಫ್ಲೆಕ್ಸ್, ಸರ್ಕಾರಿ ಜಾಹೀರಾತು ಫಲಕ ಬ್ಯಾನರ್‌ಗಳ ತೆರವು
ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಇಸ್ರೇಲ್ ಮೇಲೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿತು, ಆದರೆ ಇಸ್ರೇಲ್ ಮತ್ತು ಅಮೆರಿಕ ಇರಾನಿನ ಗುರಿಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿವೆ. ವರದಿಗಳ ಪ್ರಕಾರ ಯುದ್ಧವು ಈಗಾಗಲೇ 2,000 ಕ್ಕೂ ಹೆಚ್ಚು ಜನರ ಬಲಿ ಪಡೆದಿದೆ. ಅವರಲ್ಲಿ ಹೆಚ್ಚಿನವರು ಇರಾನ್‌ನವರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ