
Soldiers Video:ಸೋಶಿಯಲ್ ಮೀಡಿಯಾದಲ್ಲೊಂದು ಸೈನಿಕರ ವಿಡಿಯೋ ವೈರಲ್ ಆಗಿದ್ದು, ನೋಡುಗರು ಯೋಧರ ಅಸಹ್ಯಕರ ವರ್ತನೆಗೆ ಅಸಮಾಧಾನ ಹೊರ ಹಾಕಿದ್ದಾರೆ. ವಿಡಿಯೋದಲ್ಲಿ ಸೈನಿಕನೋರ್ವ, ಮಹಿಳೆಯರ ಒಳಉಡುಪು ಧರಿಸಿ ತಿರುಗಾಡುತ್ತಿದ್ರೆ, ಇನ್ನುಳಿದವರು ಆತನನ್ನು ಪ್ರೋತ್ಸಾಹಿಸುತ್ತಿರೋದನ್ನು ಕಾಣಬಹುದಾಗಿದೆ. ಮಹಿಳೆಯರ ಒಳಉಡುಪು ಧರಿಸಿ ಸೈನಿಕರೆಲ್ಲರೂ ತಮಾಷೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವಿಡಿಯೋ ಇಸ್ರೇಲ್ ಸೈನಿಕರದ್ದು ಎಂದು ವರದಿಯಾಗಿದೆ. ಗಾಜಾದಲ್ಲಿ ಖಾಲಿಯಿರೋ ಪ್ಯಾಲಿಸ್ತಿನಿಯ ಮನೆಯೊಳಗೆ ನುಗ್ಗಿರುವ ಸೈನಿಕರೆಲ್ಲರೂ ತಮಾಷೆಯಲ್ಲಿ ತೊಡಗಿಕೊಂಡಿದ್ದಾರೆ. ಸೈನಿಕರ ಪೈಕಿಯೇ ಎಲ್ಲಾ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ
ಬಂದೂಕುದಾರಿ ಸೈನಿಕನೊಬ್ಬ ಬೆಡ್‌ರೂಮ್‌ನಿಂದ ಹೊರಗೆ ಬರುತ್ತಾನೆ. ಆತನ ಹಿಂದೆಯೇ ಕ್ಯಾಮೆರಾ ಹಿಡಿದವ ಬರುತ್ತಿರುತ್ತಾನೆ. ಬಂದೂಕುದಾರಿ ಸೈನಿಕ, ಹಾಲ್‌ನೊಳಗೆ ಬಂದು ಸೋಫಾದ ಮೇಲೆ ಕುಳಿತಿದ್ದ ವ್ಯಕ್ತಿಯ ಮುಂದೆ ನಿಲ್ಲುತ್ತಾನೆ. ನಂತರ ತಾನು ಧರಿಸಿದ್ದ ಬಂದೂಕು ಕೆಳಗೆ ಇಳಿಸಿ, ಜಾಕೆಟ್ ಕಳಚುತ್ತಾನೆ. ಆಗ ಸೈನಿಕ ಧರಿಸಿರೋದು ಕಂಡು ಬರುತ್ತದೆ. ಈ ವಿಡಿಯೋ ವೈರಲ್ ಬಳಿಕ ಇಸ್ರೇಲ್ ಸೈನಿಕರ ಅನುಚಿತ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ವೆಸ್ಟ್ ಬ್ಯಾಂಕ್‌ನ ಬೆಥ್ ಲೆಹೆಮ್ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಇಸ್ರೇಲ್ ಸೇನೆಯಿಂದ ಪ್ರತಿಕ್ರಿಯೆ
ಈ ವಿಡಿಯೋ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಇಸ್ರೇನ್ ಸೇನೆ (IDF- Israel Defense Forces) ಪ್ರತಿಕ್ರಿಯೆ ನೀಡಿದೆ. ಈ ಘಟನೆ ಇಸ್ರೇನ್ ಸೇನೆಯ ಮೌಲ್ಯಗಳು ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ. ಇದೊಂದು ಗಂಭೀರವಾದ ಘಟನೆಯಾಗಿದ್ದು , ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ಆಂತರಿಕವಾಗಿ ತನಿಖೆ ನಡೆಸಲಾಗುವುದು. ವಿಡಿಯೋದಲ್ಲಿರುವ ಎಲ್ಲರನ್ನು ವಿಚಾರಣೆಗೆ ಒಳಪಡಿಸಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಇಸ್ರೇನ್ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳು ಮತ್ತು ಫೋಟೋಗಳಲ್ಲಿ, ಸೈನಿಕನೊಬ್ಬ ತನ್ನ ಮಿಲಿಟರಿ ಸಮವಸ್ತ್ರದ ಮೇಲೆ ಗುಲಾಬಿ ಬಣ್ಣದ ಒಳ ಉಡುಪು ಮತ್ತು ಬ್ರಾ ಧರಿಸಿ ನೃತ್ಯ ಮಾಡುವುದನ್ನು ಕಾಣಬಹುದು.
ಇದನ್ನೂ ಓದಿ: ದಮ್ಮಯ್ಯ ಅಂತೀವಿ ಮೊದಲು ಇಸ್ರೇಲ್ ಅನ್ನು ನಿಯಂತ್ರಿಸಿ, ಸಿರಿಯಾದ ಹೊಸ ನಾಯಕ ಅಮೆರಿಕಕ್ಕೆ ಪತ್ರ!
ಬೆಥ್ ಲೆಹೆಮ್ ಕಾರ್ಯಾಚರಣೆಯ ವೇಳೆ ಸ್ಟ್ರಿಪ್ಟೀಸ್ ಆಕ್ಟ್ ಅನುಸರಣೆ ಮಾಡಲಾಗುತ್ತಿದೆ ಈ ವೀಡಿಯೊದಲ್ಲಿ ಈ ಸೈನಿಕನು "ಯು ಕ್ಯಾನ್ ಲೀವ್ ಯುವರ್ ಹ್ಯಾಟ್ ಆನ್" ಹಾಡಿನ ಟ್ಯೂನ್‌ಗೆ ವಿಚಿತ್ರ ಚಟುವಟಿಕೆಗಳನ್ನು ಮಾಡುತ್ತಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ.
ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಪ್ಯಾಲೇಸ್ಟಿನಿಯನ್ನರ, ಇಸ್ರೇಲ್ ಸೈನಿಕರ ವರ್ತನೆ ಅಗೌರವ ಮತ್ತು ಅಶಿಸ್ತಿನ ಸಂಕೇತ ಎಂದು ಖಾರವಾಗಿ ಟೀಕಿಸಿದ್ದಾರೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಇಸ್ರೇನ್ ಸೇನೆಯ ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ. ಸೇನೆಯ ಸೈನಿಕರೆಲ್ಲರೂ ಶಿಸ್ತು ಕಾಪಾಡಬೇಕು. ಇಂತಹ ವಿಡಿಯೋ ಮತ್ತು ಫೋಟೋಗಳು ಶಿಸ್ತು ನಿಯುಮದ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರ ಸಮ್ಮತಿ; ಇಸ್ರೇಲ್- ಹಮಾಸ್ ಕದನದಲ್ಲಿ ಮಹತ್ವದ ಬೆಳವಣಿಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ