'ಗಾಜಾಕ್ಕೆ ಸಹಾಯ ನೀಡುವ ಟ್ರಕ್‌ ಬಂದಲ್ಲಿ ಬಾಂಬ್‌ ಬೀಳುತ್ತದೆ..' ಈಜಿಪ್ಟ್‌ಗೆ ಇಸ್ರೇಲ್‌ ಎಚ್ಚರಿಕೆ!

By Santosh Naik  |  First Published Oct 10, 2023, 5:26 PM IST

ಗಾಜಾ ಪ್ರದೇಶದಲ್ಲಿರುವ ಜನರಿಗೆ ಸಹಾಯ ಮಾಡುವ ಮನಸ್ಸು ಬಂದು ಹಾಗೇನಾದರೂ ಅವರಿಗೆ ಸಹಾಯಗಳನ್ನು ಹೊತ್ತ ಟ್ರಕ್‌ ಬಂದಲ್ಲಿ ಅದಕ್ಕೆ ಬಾಂಬ್‌ ಬೀಳುವುದು ಖಂಡಿತ ಎಂದು ಇಸ್ರೇಲ್‌, ನೆರೆಯ ಈಜಿಪ್ಟ್‌ ದೇಶಕ್ಕೆ ನೇರ ಎಚ್ಚರಿಕೆ ನೀಡಿದೆ.


ನವದೆಹಲಿ (ಅ.10): ನಾಲ್ಕು ದಿನಗಳ ಇಸ್ರೇಲ್‌-ಹಮಾಸ್‌ ಉಗ್ರರ ನಡುವಿನ ಯುದ್ಧದ ವೇಳೆಗೆ ಇಸ್ರೇಲ್‌ನ ಉದ್ಧೇಶ ಬಹಳ ಸ್ಪಷ್ಟವಾಗಿ ಗೊತ್ತಾಗಿದೆ. 'ನೀವು ನನ್ನ ಜನರನ್ನು ಹಿಂಸೆ ಮಾಡಿದರೆ, ನಾನು ನಿಮ್ಮ ಇಡೀ ನಗರವನ್ನು ಧ್ವಂಸ ಮಾಡ್ತೇನೆ..' ಎನ್ನುವ ನಿಲುವು ತಾಳಿದೆ. ಅದರಂತೆ ಗಾಜಾ ಪ್ರದೇಶಕ್ಕೆ ಇಸ್ರೇಲ್‌ ಸಂಪೂರ್ಣ ದಿಗ್ಭಂದನ ವಿಧಿಸಿದೆ. ಗಾಜಾ ಪ್ರದೇಶಕ್ಕೆ ನೀರು, ವಿದ್ಯುತ್‌, ಆಹಾರವನ್ನು ಸಂಪೂರ್ಣವಾಗಿ ಇಸ್ರೇಲ್‌ ಬಂದ್‌ ಮಾಡಿದೆ. ಇಸ್ರೇಲ್‌ ಈ ನಿರ್ಧಾರ ಮಾಡಿದ ಬೆನ್ನಲ್ಲಿಯೇ ಇದು ಯುದ್ಧಾಪರಾಧ ಎನ್ನುವ ಕೂಗುಗಳು ಮುಸ್ಲಿಂ ದೇಶಗಳಿಂದ ಬಂದಿವೆ. ಅದಕ್ಕೂ ಉತ್ತರ ನೀಡಿರುವ ಇಸ್ರೇಲ್‌, ಮನುಷ್ಯರಾದವರಿಗೆ ಮಾತ್ರವೇ ನಿಯಮಗಳು ಅನ್ವಯಿಸುತ್ತದೆ. ಹಮಾಸ್‌ನ ಉಗ್ರರು ಪ್ರಾಣಿಗಳು ಅವರ ವಧೆ ಮಾಡಿಯೇ ಸಿದ್ಧ ಎಂದು ಹೇಳಿದೆ. ಇದರ ಬೆನ್ನಲ್ಲಿಯೇ ಇತಿಹಾಸದ ಪುಟದಲ್ಲಿ ಗಾಜಾ ಪಟ್ಟಿ ಎನ್ನುವ ಪ್ರದೇಶ ಉಳಿದುಕೊಳ್ಳಲಿದೆಯೇ ಎನ್ನುವ ಅನುಮಾನಗಳು ಕಾಡಿವೆ. ಇಸ್ರೇಲ್‌ನ ದಿಗ್ಭಂದನ ನಡುವೆ, ಗಾಜಾ ಪ್ರದೇಶಕ್ಕೆ ಸರಬರಾಜುಗಳನ್ನು ಹೊತ್ತ ಟ್ರಕ್‌ಗಳನ್ನು ಕಳಿಸಲು ನೆರೆಯ ದೇಶ ಈಜಿಪ್ಟ್‌ ಸಿದ್ಧವಾಗಿತ್ತು. ಈ ವೇಳೆ ಈಜಿಪ್ಟ್‌ಗೆ ಇಸ್ರೇಲ್‌ ನೇರ ಎಚ್ಚರಿಕೆ ನೀಡಿದ್ದು, ಹಾಗೇನಾದರೂ ನಿಮ್ಮ ಸರಬರಾಜುಗಳನ್ನು ಹೊತ್ತ ಟ್ರಕ್‌ಗಳು ಗಾಜಾಕ್ಕೆ ಬಂದಲ್ಲಿ ಅವುಗಳಿಗೂ ಬಾಂಬ್‌ ಬೀಳುತ್ತದೆ ಎಂದು ಎಚ್ಚರಿಕೆ ರವಾನಿಸಿದೆ.

ಇಸ್ರೇಲ್‌ನ ಈ ಎಚ್ಚರಿಕೆ ಕೇಳಿದ ಕೂಡಲೇ ವಿಶ್ವಕ್ಕೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ಮಾಡಲಿರುವ ಕಾರ್ಯಾಚರಣೆಯ ಬಗ್ಗೆ ಇನ್ನಷ್ಟು ಆತಂಕ ಉಂಟಾಗಿದೆ. ಅದು ಮಾತ್ರವಲ್ಲದೆ ಇಸ್ರೇಲ್‌ 1973ರ ನಂತರ ಮೊಟ್ಟಮೊದಲ ಬಾರಿಗೆ ಯುದ್ಧಕಾಲದ ತುರ್ತು ಸರ್ಕಾರವನ್ನು ರಚಿಸುವ ಕೊನೆಯ ಹಂತದಲ್ಲಿದೆ. ಯುದ್ಧಕಾಲದ ತುರ್ತು ಸರ್ಕಾರವೆಂದರೆ, ವಿವಿಧ ರಾಜಕೀಯ ಪಕ್ಷಗಳ ಸದಸ್ಯರನ್ನು ಒಳಗೊಂಡ ಸರ್ಕಾರ. ಯುದ್ಧ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಆಯಾ ಸರ್ಕಾರಗಳು ಇದರ ನಿರ್ಧಾರ ಮಾಡುತ್ತದೆ. ಕೊನೆಯ ಬಾರಿಗೆ ಇಸ್ರೇಲ್ ಅಂತಹ ಸರ್ಕಾರವನ್ನು ಹೊಂದಿದ್ದು 1973 ರಲ್ಲಿ. ಅದು ಕೂಡ ತನ್ನ ಮಹತ್ವದ ಯುದ್ಧಕಾಲದಲ್ಲಿ. ಈ ಕ್ರಮವು ಸವಾಲಿನ ಸಮಯದಲ್ಲಿ ದೇಶಕ್ಕೆ ಸ್ಥಿರತೆ ಮತ್ತು ಏಕತೆಯನ್ನು ತರಲು ಒಂದು ಮಾರ್ಗ. ಏಕೆಂದರೆ ಇದು ರಾಷ್ಟ್ರದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ವಿವಿಧ ರಾಜಕೀಯ  ನಾಯಕರನ್ನು ಒಳಗೊಂಡಿರುತ್ತದೆ.

ಇಸ್ರೇಲ್‌ ಸೇನೆಯ ಮುಂದಿನ ಕಾರ್ಯಾಚರಣೆಗಳ ಬಗ್ಎ ಮಿಲಿಟರಿ ವಕ್ತಾರರು ಮಾತನಾಡಿದ್ದು, ನಮ್ಮ ದಾಳಿಯ ವ್ಯಾಪ್ತಿ ಮೊದಲಿಗಿಂತ ದೊಡ್ಡದಾಗಿರುತ್ತದೆ ಮತ್ತು ಬಹಳ ತೀವ್ರವಾಗಿರುತ್ತದೆ. ಹಮಾಸ್‌ ವಿರುದ್ಧ ಬಹಳ ಎಂದರೆ, ಬಹಳ ಆಕ್ರಮಣಕಾರಿಯಾಗಿ ದಾಳಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

Tap to resize

Latest Videos

 

ಹಮಾಸ್‌ ರೀತಿಯಲ್ಲೇ ಭಾರತದ ಮೇಲೆ ದಾಳಿ ಮಾಡ್ತೇವೆ, ಖಲಿಸ್ತಾನಿ ನಾಯಕ ಗುರುಪತ್ವಂತ್‌ ಪನ್ನು ಎಚ್ಚರಿಕೆ!

ಇನ್ನೊಂದೆಡೆ, ಡೆನ್ಮಾರ್ಕ್‌ ಸರ್ಕಾರ ಕೂಡ ಪ್ಯಾಲಿಸ್ತೇನ್‌ ದೇಶಕ್ಕೆ ನೀಡುತ್ತಿದ್ದ ಅಭಿವೃದ್ಧಿ ನಿಧಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ನಿರ್ಧಾರ ಮಾಡಿದೆ. ಹಮಾಸ್ ಒತ್ತೆಯಾಳುಗಳನ್ನು 'ಬ್ಲ್ಯಾಕ್‌ಮೇಲ್' ಗಾಗಿ ಬಳಸುವುದು ಸ್ವೀಕಾರಾರ್ಹವಲ್ಲ ಎಂದು ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ತಿಳಿಸಿದ್ದು, ಇಸ್ರೇಲ್‌ ಕಾರ್ಯಾಚರಣೆಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ.

Israel Palestine War: ಬಂದೂಕು ಹಿಡಿದು ರಣಾಂಗಣಕ್ಕೆ ಕಾಲಿಟ್ಟ ಇಸ್ರೇಲ್‌ನ 61 ವರ್ಷದ ಮಾಜಿ ಯೋಧ ಯೈರ್‌ ಗೋಲನ್‌!

click me!