ಹಮಾಸ್ ಉಗ್ರರ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್, ಬಹುತೇಕ ಗಾಜಾ ಗಡಿಯಲ್ಲಿ ಹಿಡಿತ ಸಾಧಿಸಿದೆ. ಬಿಲದಿಂದ ಹೊರಬರಲ ಪರದಾಡುತ್ತಿರುವ ಉಗ್ರರು ಇದೀಗ ಹೊಸ ತಂತ್ರ ಪ್ರಯೋಗಿಸಿದ್ದಾರೆ. ಒತ್ತೆಯಾಳುಗಳ ಹತ್ಯೆ ಬೆದರಿಕೆ ಹಾಕಿದ್ದಾರೆ.
ಇಸ್ರೇಲ್(ಅ.10) ಹಮಾಸ್ ಉಗ್ರರು ನಡೆಸಿದ ಏಕಾಏಕಿ ಭಯೋತ್ಪಾದನಾ ದಾಳಿಯಲ್ಲಿ 900ಕ್ಕೂ ಹೆಚ್ಚು ಇಸ್ರೇಲಿಗರು ಮೃತಪಟ್ಟಿದ್ದಾರೆ. 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 1,500ಕ್ಕೂ ಹೆಚ್ಚು ಇಸ್ರೇಲ್ ನಾಗರೀಕರನ್ನು ಉಗ್ರರು ಒತ್ತೆಯಾಳಾಗಿ ವಶದಲ್ಲಿಟ್ಟುಕೊಂಡಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಏರ್‌ಸ್ಟ್ರೈಕ್ ನಡೆಸಿ ಭರ್ಜರಿ ಮೇಲುಗೈ ಸಾಧಿಸಿದೆ. ಹಮಾಸ್ ಉಗ್ರರ ನೆಲೆಗಳನ್ನೇ ಧ್ವಂಸ ಮಾಡಲಾಗುತ್ತಿದೆ. ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ. ಹಮಾಸ್ ಉಗ್ರರಿಗೆ ಮುನ್ಸೂಚನೆ ಸಿಗುತ್ತಿದ್ದಂತೆ ಇದೀಗ ಹೊಸ ತಂತ್ರ ಪ್ರಯೋಗಿಸಿದ್ದಾರೆ. ಇಸ್ರೇಲ್ ದಾಳಿ ಮುಂದುವರಿದರೆ ಒತ್ತೆಯಾಳಾಗಿಟ್ಟುಕೊಂಡಿರುವ ಇಸ್ರೇಲ್ ನಾಗರೀಕರ ಹತ್ಯೆ ಮಾಡುವುದಾಗಿ ಉಗ್ರರು ಬೆದರಿಕೆ ಹಾಕಿದ್ದಾರೆ.
ಶನಿವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿ ನರಮೇಧ ನಡೆಸಿದ್ದಾರೆ. ಇದೇ ವೇಳೆ ಇಸ್ರೇಲ್ ಸೇರಿದಂತೆ ಹಲವು ದೇಶಗಳ ನಾಗರೀಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇದೀಗ ಇಸ್ರೇಲ್ ಪ್ರತಿದಾಳಿಯಿಂದ ಬೆಚ್ಚಿ ಬಿದ್ದಿರುವ ಹಮಾಸ್ ಉಗ್ರರು, ಅಮೆರಿಕ ಸೇರಿದಂತೆ ಇಸ್ರೇಲ್ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜತೆ ದೃಢವಾಗಿ ನಿಂತಿದೆ: ಇಸ್ರೇಲ್ ಪ್ರಧಾನಿಗೆ ಮೋದಿ ಅಭಯ
ಹಮಾಸ್ ಮಿಲಿಟರ್ ವಿಂಗ್ ಮುಖ್ಯಸ್ಥ ಅಬು ಒಬೈದಾ ಈ ಎಚ್ಚರಿಕೆ ನೀಡಿದ್ದಾರೆ. ಗಾಜಾದ ನಿವಾಸಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಗಾಜಾ ನಿವಾಸಿದಳು ಹತ್ಯೆಯಾಗಿದ್ದಾರೆ. ಇದೀಗ ನಮ್ಮ ಬಳಿ ಇರುವ ಒತ್ತೆಯಾಳಾಗಿರುವ ಇಸ್ರೇಲ್ ಹಾಗೂ ಇತರ ದೇಶದ ಪ್ರಜೆಗಳನ್ನು ನಾವು ಹತ್ಯೆ ಮಾಡುತ್ತೇವೆ ಎಂದು ಅಬು ಒಬೈದಾ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಇಸ್ರೇಲ್ ಮೇಲೆ ಏಕಾಏಕಿ 4500 ರಾಕೆಟ್ ಮೂಲಕ ದಾಳಿ ನಡೆಸಿ, ಇಸ್ರೇಲಿ ಗಡಿಯೊಳಗೆ 1000 ಜನರನ್ನು ನುಸುಳಿಸಿ 700ಕ್ಕೂ ಹೆಚ್ಚು ನಾಗರಿಕರು, ಯೋಧರ ಬಲಿ ಪಡೆದಿದ್ದ ಹಮಾಸ್ ಉಗ್ರರು, ಭಾನುವಾರದಿಂದೀಚೆಗೆ ಬಹುತೇಕ ತಣ್ಣಗಾಗಿದ್ದಾರೆ. ಗಾಜಾಪಟ್ಟಿ ಪ್ರದೇಶದಿಂದ ಇಸ್ರೇಲ್ ಕಡೆಗೆ ಒಂದಿಷ್ಟು ರಾಕೆಟ್ ಹಾರಿಬಂದಿದ್ದು ಬಿಟ್ಟರೆ ಉಗ್ರರ ಕಡೆಯಿಂದ ಹೆಚ್ಚಿನ ದಾಳಿ ನಡೆದಿಲ್ಲ. ಅಲ್ಲಲ್ಲಿ ಕೆಲ ದಾಳಿ ಘಟನೆ ಹೊರತುಪಡಿಸಿದರೆ ಬೇರೆಲ್ಲೂ ಕಾದಾಟ ನಡೆಯುತ್ತಿಲ್ಲ ಎಂದು ಇಸ್ರೇಲ್ ಸೆನೆಯ ವಕ್ತಾರ ಡೇನಿಯಲ್ ಹಗರಿ ಮಾಹಿತಿ ನೀಡಿದ್ದಾರೆ.
ವಿದೇಶಿಗರ ಪ್ರಾಣ ನುಂಗ್ತಿದ್ದಾರೆ ಹಮಾಸ್ ಉಗ್ರರು: ನಡುರಸ್ತೆಯಲ್ಲೇ ಕಿಡ್ನಾಪ್ ಮಾಡಿದ ರಾಕ್ಷಸರು!
ಗಾಜಾಪಟ್ಟಿ ಪ್ರದೇಶದ 1000ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿರುವ ಇಸ್ರೇಲಿ ಪಡೆಗಳು, ಮತ್ತೊಂದೆಡೆ ಗಾಜಾಪ್ರದೇಶಕ್ಕೆ ಇಂಧನ, ವಿದ್ಯುತ್, ಆಹಾರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ಪೂರ್ಣ ದಿಗ್ಭಂಧನಕ್ಕೆ ಆದೇಶಿಸಿದೆ. ಇದು ಹಂತಹಂತವಾಗಿ ಗಾಜಾಪಟ್ಟಿ ಪ್ರದೇಶದಲ್ಲಿನ ಹಮಾಸ್ ಉಗ್ರರ ನೆಲೆಯನ್ನು ಪೂರ್ಣ ನಾಶ ಮಾಡುವುದರ ಜೊತೆಗೆ, ಆ ಪ್ರದೇಶವನ್ನು ಸಂಪೂರ್ಣ ತನ್ನ ವಶಕ್ಕೆ ತೆಗೆದುಕೊಳ್ಳುವ ಯೋಜನೆಯ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.