ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿ ಮುಸ್ಲಿಂ ರಾಷ್ಟ್ರಗಳನ್ನು ಕೆರಳಿಸಿದೆ. ಸತತ ಎಚ್ಚರಿಕೆ ನಡುವೆ ದಾಳಿ ಮುಂದುವರಿಸಿದ ಇಸ್ರೇಲ್ ವಿರುದ್ಧ ಯೆಮನ್ ಯುದ್ದ ಘೋಷಿಸಿದೆ.ಇಸ್ರೇಲ್ ಪ್ಯಾಲೆಸ್ತಿನ್ ಸಂಘರ್ಷದ ನಡುವೆ ಇಸ್ರೇಲ್ ವಿರುದ್ಧ ಯುದ್ಧ ಘೋಷಿಸಿದ ಮೊದಲ ರಾಷ್ಟ್ರ ಯೆಮೆನ್.
ಯೆಮನ್(ಅ.31) ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುತ್ತಿದೆ. ಹಮಾಸ್ ಉಗ್ರರ ಸರ್ವನಾಶಕ್ಕೆ ಪಣತೊಟ್ಟಿದೆ. ಪ್ಯಾಲೆಸ್ತಿನಿಯರ ಮೇಲಿನ ದಾಳಿಗೆ ಮುಸ್ಲಿಂ ರಾಷ್ಟ್ರಗಳು ಕೆರಳಿ ಕೆಂಡಾಮಂಡಲವಾಗಿದೆ. ದಾಳಿ ನಿಲ್ಲಿಸುವ ಎಚ್ಚರಿಕೆ ಮೀರಿದ ಇಸ್ರೇಲ್ ವಿರುದ್ಧ ಇದೀಗ ಯೆಮೆನ್ ಅಧಿಕೃತವಾಗಿ ಯುದ್ಧ ಘೋಷಿಸಿದೆ. ಯೆಮೆನ್ ಭದ್ರತಾ ಪಡೆ ಮುಖ್ಯಸ್ಥ ಯುದ್ಧ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್ ಮೇಲೆ ಮಿಸೈಲ್‌ಗಳು ತೂರಿ ಬಂದಿದೆ.
ಯೆಮನ್ ಯುದ್ಧ ಘೋಷಣೆ ಕುರಿತು ಭದ್ರತಾ ಪಡೆ ವಕ್ತಾರ ಯಹ್ಯಾ ಸೆರಿ ವಿಡಿಯೋ ಮೂಲಕ ಘೋಷಣೆ ಮಾಡಿದ್ದಾರೆ. ಯುದ್ಧ ಘೋಷಣೆ ಬೆನ್ನಲ್ಲೇ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಆರಂಭಗೊಂಡಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು, ಇತ್ತ ಹೆಜ್‌ಬೋಲ್ಲಾ ಉಗ್ರರು ಜೊತೆಗೆ ಇದೀಗ ಯೆಮೆನ್ ಸೇನೆ ಕೂಡ ದಾಳಿ ಆರಂಭಿಸಿದೆ. ಇಸ್ರೇಲ್ ಏಕಾಂಗಿ ಹೋರಾಟ ನಡೆಸುತ್ತಿದೆ. ಹಮಾಸ್ ಉಗ್ರರ ವಶದಲ್ಲಿರುವ ತನ್ನ ನಾಗರೀಕರನ್ನು ಬಿಡಿಸಿಕೊಂಡು ಬರಲು ಇಸ್ರೇಲ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
undefined
ಇಸ್ರೇಲ್ ಮೇಲೆ ಮುಗಿಬೀಳಲು ರಣತಂತ್ರ: ಉಗ್ರ ಸಂಘಟನೆಗಳ ಜೊತೆ ಹಿಜ್ಬುಲ್ಲಾ ನಾಯಕರ ರಹಸ್ಯ ಸಭೆ
ಪ್ಯಾಲೆಸ್ತಿನ್ ಸಹೋದರ,ಸಹೋದರಿಯರಿಗೆ ನಾವು ಹೋರಾಟ ಆರಂಭಿಸಿದ್ದೇವೆ ಎಂದು ಯೆಮೆನ್ ಹೇಳಿದೆ. ಇಸ್ರೇಲ್ ದಾಳಿ ನಿಲ್ಲಿಸುವವರೆಗೆ ಯೆಮೆನ್ ಶಸಸ್ತ್ರ ಪಡೆಗಳು ಭೀಕರ ದಾಳಿ ನಡೆಸಲಿದೆ. ಇಸ್ರೇಲ್ ಘೋರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಯೆಮೆನ್ ಎಚ್ಚರಿಸಿದೆ. ಯೆಮೆನ್ ಸೇರಿದಂತೆ ಇಸ್ರೇಲ್ ಸುತ್ತಿಲಿನ ಅರಬ್ ರಾಷ್ಟ್ರಗಳ ದಾಳಿಯನ್ನು ನಿರೀಕ್ಷಿಸಿದ್ದ ಇಸ್ರೇಲ್ ಎಲ್ಲಾ ತಯಾರಿ ಮಾಡಿಕೊಂಡಿದೆ.
ಅಮೆರಿಕ ಎಚ್ಚರಿಕೆಯನ್ನು ಮೀರಿ ಯೆಮೆನ್ ಯುದ್ಧಕ್ಕೆ ಧುಮಿಕಿದೆ. ಇದೀಗ ಅಮೆರಿಕ ತನ್ನ ಪ್ರಾಬಲ್ಯವನ್ನು ತೋರಿಸುವುದರಲ್ಲಿ ಸಂಹೇದವಿಲ್ಲ. ಅಮೆರಿಕ ನೆರವಿನಿಂದ ಇಸ್ರೇಲ್ ಗಾಜಾ ಮೇಲೆ ಯುದ್ಧ ಮಾಡುತ್ತಿದೆ. ಇದೀಗ ಅರಬ್ ರಾಷ್ಟ್ರಗಳು ಒಂದೊಂದಾಗಿ ಇಸ್ರೇಲ್ ವಿರುದ್ಧ ಮುಗಿಬೀಳಲು ಆರಂಭಿಸಿದೆ. ಯೆಮೆನ್ ದಾಳಿಗೆ ಇಸ್ರೇಲ್ ನಾಶವಾಗಲಿದೆ ಎಂದು ಯೆಮೆನ್ ಸೇನಾ ವಕ್ತಾರ ಹೇಳಿದ್ದಾರೆ.
ಇಸ್ರೇಲ್ ದಾಳಿಗೆ ಗಾಜಾ ತಲ್ಲಣ: ಹಿರೋಶಿಮಾ ಬಾಂಬ್ ದಾಳಿಯಷ್ಟು ಸ್ಫೋಟಕ ಬಳಕೆ
ಹಮಾಸ್ ವಿರುದ್ಧ ದಿನದಿಂದ ದಿನಕ್ಕೆ ಯುದ್ಧವನ್ನು ತೀವ್ರಗೊಳಿಸುತ್ತಿರುವ ಇಸ್ರೇಲ್, ತನ್ನ ಭೂದಾಳಿಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಈ ನಿಟ್ಟಿನಲ್ಲಿ ಗಾಜಾ ನಗರದ ಮೇಲೆ ಎರಡು ಕಡೆಯಿಂದ ದಾಳಿ ಆರಂಭಿಸಿ ಮತ್ತಷ್ಟು ಒಳಪ್ರದೇಶಗಳಿಗೆ ರವಾನಿಸಿದೆ. ಈ ಮೂಲಕ ಇಡೀ ನಗರವನ್ನು ಸುತ್ತುವರೆದಿದೆ. ಜೊತೆಗೆ ಸುರಂಗ, ಕಟ್ಟಡದೊಳಗೆ ಅವಿತಿದ್ದ ಹಮಾಸ್ ಉಗ್ರರ ಜತೆ ಸೇನೆಯು ಚಕಮಕಿ ನಡೆಸಿ, ಹಲವು ಉಗ್ರರ ಹತ್ಯೆ ಮಾಡಿದೆ.