ಗಾಜಾ ಪ್ರದೇಶ ಜನವಸತಿ ಪ್ರದೇಶಗಳ ದಾಳಿಗೂ ಮುನ್ನ ಮುನ್ನೆಚ್ಚರಿಕೆ ನೀಡದೇ ಹೋದರೆ, ಪ್ರತಿ ಬಾಂಬ್ ದಾಳಿಗೆ ಪ್ರತಿಯಾಗಿ ಓರ್ವ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಹಮಾಸ್ ಉಗ್ರರು ಬೆದರಿಕೆ ಹಾಕಿದ್ದಾರೆ.
ಜೆರುಸಲೇಂ: ಗಾಜಾ ಪ್ರದೇಶ ಜನವಸತಿ ಪ್ರದೇಶಗಳ ದಾಳಿಗೂ ಮುನ್ನ ಮುನ್ನೆಚ್ಚರಿಕೆ ನೀಡದೇ ಹೋದರೆ, ಪ್ರತಿ ಬಾಂಬ್ ದಾಳಿಗೆ ಪ್ರತಿಯಾಗಿ ಓರ್ವ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಹಮಾಸ್ ಉಗ್ರರು ಬೆದರಿಕೆ ಹಾಕಿದ್ದಾರೆ.
ಹಾಗಿದ್ದರೆ ಹಮಾಸ್ ಉಗ್ರರ ಬಳಿ ಇದ್ದಾರೆ ಎನ್ನಲಾದ 150ಕ್ಕೂ ಹೆಚ್ಚು ಒತ್ತೆಯಾಳುಗಳ ಕಥೆ ಏನು? ಒತ್ತೆಯಾಳುಗಳ ಬಿಡುಗಡೆ ಬದಲಿಯಾಗಿ ತನ್ನ ಕಾರ್ಯಕರ್ತರ ಬಿಡುಗಡೆ ಮಾಡಬೇಕೆಂಬ ಹಮಾಸ್ ಉಗ್ರರ ಒತ್ತಡಕ್ಕೆ ಇಸ್ರೇಲ್ ಮಣಿಯಲಿದೆಯೇ? ಪ್ರಜೆಗಳ ಪ್ರಾಣಕ್ಕಿಂತ ಹಮಾಸ್ ಉಗ್ರರ ಮಟ್ಟ ಮೊದಲು ಎಂಬ ನೀತಿಯನ್ನು ಇಸ್ರೇಲ್ ಪಾಲಿಸಲಿದೆಯೇ? ಇಂಥ ಪ್ರಶ್ನೆಗಳು ಇದೀಗ ಎದ್ದಿವೆ.
'ಗಾಜಾಕ್ಕೆ ಸಹಾಯ ನೀಡುವ ಟ್ರಕ್ ಬಂದಲ್ಲಿ ಬಾಂಬ್ ಬೀಳುತ್ತದೆ..' ಈಜಿಪ್ಟ್‌ಗೆ ಇಸ್ರೇಲ್ ಎಚ್ಚರಿಕೆ!
ಒತ್ತೆಯಾಳು ಪ್ರಕರಣದಲ್ಲಿ ಇಸ್ರೇಲ್ ಸರ್ಕಾರ (Israel Govt) ಈ ಹಿಂದಿನ ಕಠಿಣ ನಿರ್ಧಾರಗಳನ್ನು ಅವಲೋಕಿಸಿದರೆ, ಹಮಾಸ್ ಉಗ್ರರ ಮಟ್ಟಹಾಕಿ ಅವರನ್ನು ಸೋಲಿಸುವವರೆಗೂ, ಒತ್ತೆಯಾಳುಗಳ ವಿಷಯದಲ್ಲಿ ಇಸ್ರೇಲ್ ಸರ್ಕಾರ ನೇರ ಸಂಧಾನಕ್ಕೆ ಇಳಿಯುವ ಸಾಧ್ಯತೆ ಕಡಿಮೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ದೇಶದ ಸಾರ್ವಭೌಮತೆಗಿಂತ ಯಾವುದಕ್ಕೂ ಹೆಚ್ಚಿನ ಮಹತ್ವವನ್ನು ಇಸ್ರೇಸ್ ಸರ್ಕಾರ ನೀಡದು. ಹೀಗಾಗಿ ಒತ್ತೆಯಾಳಾದ ಕುಟುಂಬಗಳ ಆಗ್ರಹದ ಹೊರತಾಗಿಯೂ ಉಗ್ರರ ಒತ್ತಡಕ್ಕೆ ಇಸ್ರೇಲ್ ಸರ್ಕಾರ ಮಣಿಯುವ ಸಾಧ್ಯತೆ ತೀರಾ ಕಡಿಮೆ. ಹೋರಾಟದಲ್ಲಿ ಮೇಲುಗೈ ಸಾಧಿಸಿದ ಬಳಿಕವಷ್ಟೇ ಇಸ್ರೇಲ್ ಸರ್ಕಾರ ಈ ಬಗ್ಗೆ ಗಮನ ಹರಿಸಲಿದೆ. ಮತ್ತೊಂದೆಡೆ ವಿಪಕ್ಷಗಳು ಕೂಡಾ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸರ್ಕಾರಕ್ಕೆ ಪೂರ್ಣ ಬೆಂಬಲ ಘೋಷಿಸಿವೆ. ಹೀಗಾಗಿ ಗಾಜಾ ಪ್ರದೇಶದಿಂದ ಉಗ್ರರ ನಿರ್ಮೂಲನೆ ಬಳಿಕವಷ್ಟೇ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಸರ್ಕಾರ ಮುಂದಾಗಲಿದೆ ಎನ್ನಲಾಗಿದೆ.
ಲುಲೂ ಮಾಲ್‌ನಲ್ಲಿ ಭಾರತದ ತಿರಂಗಗಿಂತ ದೊಡ್ಡ ಪಾಕಿಸ್ತಾನ ಧ್ವಜ, ಹೆಚ್ಚಿದ ಆಕ್ರೋಶ!
ಈ ನಡುವೆ ಒತ್ತೆಯಾಳುಗಳ (Hostages) ಸುರಕ್ಷಿತ ಬಿಡುಗಡೆ ಕುರಿತು ಇಸ್ರೇಲ್ ಪರವಾಗಿ ಕತಾರ್ ಮತ್ತು ಈಜಿಪ್ಟ್ ದೇಶಗಳು ಹಮಾಸ್ ಉಗ್ರರ ಜೊತೆ ಹಿಂಬಾಲಿಗರ ಮಾತುಕತೆ ಆರಂಭಿಸಿವೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ಒತ್ತೆಯಾಳುಗಳ ಬಿಡುಗಡೆ ಸೇರಿದಂತೆ ಯಾವುದೇ ವಿಷಯದಲ್ಲಿ ಸಂಧಾನ ಮಾತುಕತೆ ಇಲ್ಲ ಎಂದು ಹಮಾಸ್ ಉಗ್ರರ (Hamas Terrorist) ಖಡಾಖಂಡಿತವಾಗಿ ಹೇಳಿರುವ ಕಾರಣ ಒತ್ತೆಯಾಳುಗಳ ಬಿಕ್ಕಟ್ಟು ತೀವ್ರವಾಗಿದೆ ಎನ್ನಲಾಗಿದೆ.