ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿರುವ ಇಸ್ರೇಲ್ ದೇಶಕ್ಕೆ ಅಲ್ಲಿನ ದೊಡ್ಡ ಪ್ರಮುಖ ವಿರೋಧ ಪಕ್ಷದ ನಾಯಕ ಯೈರ್ ಲಾಪಿಡ್ ದೊಡ್ಡ ಬೆಂಬಲ ನೀಡಿದ್ದಾರೆ. ಈಗ ಸರ್ಕಾರವನ್ನು ಟೀಕಿಸುವ ಸಮಯವಲ್ಲ. ಎದುರಾಳಿಗಳ ವಿರುದ್ಧ ಒಟ್ಟಾಗಿ ಹೋರಾಡೋಣ ಎನ್ನುವ ಮೂಲಕ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ.
ನವದೆಹಲಿ (ಅ.7): ದೇಶದ ಯೋಧರು ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ, ಬಾಲಾಕೋಟ್‌ನಲ್ಲಿ ಏರ್‌ಸ್ಟ್ರೈಕ್ ಮಾಡಿದಾಗ ನಮ್ಮದೇ ದೇಶದ ಪ್ರಮುಖ ಪ್ರತಿಪಕ್ಷಗಳು ಅದರ ಸಾಕ್ಷ್ಯ ಕೇಳಿದ್ದು ನೆನಪಿರಬಹುದು. ಆದರೆ, ಇಸ್ರೇಲ್ ದೇಶ ಅದಕ್ಕಿಂತ ಹೇಗೆ ಭಿನ್ನ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹಮಾಸ್ ಬಂಡುಕೋರರು ದೇಶದ ಮೇಲೆ ದಾಳಿ ಮಾಡಿದ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಳ್ಳದ ಇಸ್ರೇಲ್‌ನ ಪ್ರಮುಖ ಪ್ರತಿಪಕ್ಷವಾದ ಯೆಶ್ ಆಟಿಡ್‌ನ ನಾಯಕ ಯೈರ್ ಲಾಪಿಡ್, ಈಗಿರುವ ಬೆಂಜಮಿನ್ ನೆತನ್ಯಾಹು ನೇತೃತ್ವದ ಮೈತ್ರಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅದರೊಂದಿಗೆ ಇದು ಯುದ್ಧದ ಸಮಯ, ಮೈತ್ರಿ ಸರ್ಕಾರದಲ್ಲಿ ಅದರ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡೋದಕ್ಕಿಂತ ಎಮರ್ಜೆನ್ಸಿ ಸರ್ಕಾರ ರಚಿಸಿ. ಅದರಲ್ಲಿ ಎಲ್ಲರೂ ಸೇರಿಕೊಂಡು ದೇಶವನ್ನು ಉಳಿಸಿಕೊಳ್ಳೋಣ, ಯುದ್ಧದಲ್ಲಿ ಹೋರಾಡೋಣ ಎಂದು ಹೇಳಿದ್ದಾರೆ. ಈಗಾಗಲೇ ದೇಶದಲ್ಲಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ, ಸಾಕಷ್ಟು ಇಸ್ರೇಲ್ ಪ್ರಜೆಗಳನ್ನು ಹಮಾಸ್ ಬಂಡುಕೋರರು ಹೊತ್ತೊಯ್ದಿದ್ದಾರೆ. ನಮ್ಮ ದೇಶದ ಮುಂದೆ ಕಷ್ಟಕರ ಹಾಗೂ ಸಂಕೀರ್ಣ ಕಾರ್ಯಾಚರಣೆಯಿದೆ. ಆದ್ದರಿಂದ ಮುಂದಿನ ನಿರ್ಧಾರಗಳನ್ನು ಮಾಡಲು ಎಲ್ಲವನ್ನೂ ಸೂಕ್ತ ಸಮಯದಲ್ಲಿ ನಿರ್ವಹಣೆ ಮಾಡಲು ತುರ್ತು ಸರ್ಕಾರ ರಚಿಸಿ ಎಂದು ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್ ಕರೆ ನೀಡಿದ್ದಾರೆ.
ಇಸ್ರೇಲ್ ಇಂದು ಯುದ್ಧದ ನಡುವೆ ಇದೆ. ಯುದ್ಧ ಎನ್ನುವುದು ಸುಲಭವೂ ಅಲ್ಲ, ಬೇಗನೆ ನಿಲ್ಲುವುದೂ ಇಲ್ಲ. ಇದು ಅನೇಕ ವರ್ಷಗಳಿಂದ ನಾವು ನೋಡದ ಕಾರ್ಯತಂತ್ರದ ಪರಿಣಾಮಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೇಲೆ ಎಲ್ಲರೂ ಸೇರಿಕೊಂಡು ಹೋರಾಟ ಮಾಡುವ ಸಾಧ್ಯತೆ ಇದೆ ಎಂದು ಲಾಪಿಡ್ ಹೇಳಿದ್ದಾರೆ. ಕೆಲ ಸಮಯದ ಮುಂದೆ ನಾನೇ ಸ್ವತಃ ನೆತನ್ಯಾಹು ಅವರನ್ನು ಭೇಟಿ ಮಾಡಿದೆ. ಇದು ಇಡೀ ದೇಶಕ್ಕೆ ತುರ್ತು ಸಮಯ. ನಿಮ್ಮೊಂದಿಗೆ ಇರುವ ನನ್ನೆಲ್ಲಾ ಭಿನ್ನಾಭಿಪ್ರಾಯವನ್ನು ಬದಿಗೆ ಸರಿಸಿದ್ದೇವೆ. ಒಂದು ತುರ್ತು ಸರ್ಕಾರ ರಚಿಸಿ. ಇದು ಬಹಳ ಸಣ್ಣದಾಗಿರಬೇಕು. ವೃತ್ತಿಪರ ಅಧಿಕಾರಿಗಳು ಈ ಸರ್ಕಾರದಲ್ಲಿದಲ್ಲಿರಲಿ. ಮುಂದಿರುವ ಕಷ್ಟದ ಹಾಗೂ ಸಂಕೀರ್ಣ ಸಮಯವನ್ನು ಸೂಕ್ತವಾಗಿ ನಿರ್ವಹಿಸೋಣ ಎಂದು ತಿಳಿಸಿದ್ದೇನೆ' ಎಂದು ಲಾಪಿಡ್ ಹೇಳಿದ್ದಾರೆ.
ಇನ್ನು ನೆತನ್ಯಾಹು ಅವರಿಗೂ ಇದು ತಿಳಿದಿದೆ. ಪ್ರಸ್ತುತ ಇರುವ ಕ್ಲಿಷ್ಟ ಹಾಗೂ ನಿಷ್ಕ್ರೀಯ ಭದ್ರತಾ ಕ್ಯಾಬಿನೆಟ್‌ನೊಂದಿಗೆ ಯುದ್ಧದಂಥ ಸ್ಥಿತಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಇಸ್ರೇಲ್ ಅನ್ನು ವೃತ್ತಿಪರ, ಅನುಭವಿ ಮತ್ತು ಜವಾಬ್ದಾರಿಯುತ ಸರ್ಕಾರವು ಮುನ್ನಡೆಸುವ ಅಗತ್ಯವಿದೆ. ಮಾಜಿ ರಕ್ಷಣಾ ಸಚಿವ [ಬೆನ್ನಿ] ಗ್ಯಾಂಟ್ಜ್ ಕೂಡ ಈ ರೀತಿಯ ಸರ್ಕಾರಕ್ಕೆ ಸೇರುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಲಾಪಿಡ್ ತಿಳಿಸಿದ್ದಾರೆ.
Watch: ಗಾಜಾದ ಮೇಲೆ ಮುಗಿಬಿದ್ದ ಇಸ್ರೇಲ್ ಏರ್‌ಫೋರ್ಸ್, ಬಾಂಬ್ ದಾಳಿಗೆ 160 ಪ್ಯಾಲಿಸ್ತೇನಿಯನ್ನರ ಸಾವು!
"ತುರ್ತು ವೃತ್ತಿಪರ ಸರ್ಕಾರವನ್ನು ರಚಿಸುವುದರಿಂದ ಇಸ್ರೇಲಿ ನಾಗರಿಕರಲ್ಲಿ ಹೆಚ್ಚಿನವರು ಐಡಿಎಫ್ ಮತ್ತು ಭದ್ರತಾ ಪಡೆಗಳ ಹಿಂದೆ ನಿಂತಿದ್ದಾರೆ ಎಂದು ನಮ್ಮ ಶತ್ರುಗಳಿಗೆ ಸ್ಪಷ್ಟಪಡಿಸುತ್ತದೆ. ಈ ಬೆದರಿಕೆಯ ವಿರುದ್ಧ ಇಸ್ರೇಲ್ ಜನರು ಒಗ್ಗಟ್ಟಾಗಿ ನಿಲ್ಲುತ್ತಾರೆ ಎಂಬುದನ್ನು ಇದು ವಿಶ್ವಕ್ಕೆ, ಅಂತರರಾಷ್ಟ್ರೀಯ ಸಮುದಾಯದಲ್ಲಿ ಸ್ಪಷ್ಟಪಡಿಸುತ್ತದೆ, ”ಎಂದು ಲಾಪಿಡ್ ಹೇಳಿದ್ದಾರೆ.
ದೇಶದ ಭದ್ರತೆಯ ಅಪ್‌ಡೇಟ್ ಸ್ವೀಕರಿಸಿದ ನಂತರ ನೇತನ್ಯಾಹುಗೆ ವೈಯಕ್ತಿಕವಾಗಿ ತುರ್ತು ಸರ್ಕಾರಕ್ಕಾಗಿ ಲ್ಯಾಪಿಡ್ ತನ್ನ ಪ್ರಸ್ತಾಪವನ್ನು ಮಾಡಿದರು ಎಂದು ವಿರೋಧ ಪಕ್ಷದ ನಾಯಕನಿಗೆ ಹತ್ತಿರವಿರುವ ಮೂಲಗಳು ತಿಳಿಸಿವೆ.
'ಉಗ್ರರಿಗೆ ಇದೇ Swords of Iron ಗಿಫ್ಟ್' ಫೈಟರ್ ಜೆಟ್‌ಗೆ ಬಾಂಬ್ ಜೋಡಿಸುವ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್!