ಗಡಿ ಭಾಗದಲ್ಲಿ ಹೆಚ್ಚಿದ ಟ್ಯಾಂಕರ್‌ ಜಮಾವಣೆ: ಸದ್ಯಕ್ಕೆ ಭಾರತೀಯರ ತೆರವು ಕಷ್ಟ

By Kannadaprabha News  |  First Published Oct 20, 2023, 6:42 AM IST

 ಇಸ್ರೇಲ್‌ ದಾಳಿಯಲ್ಲಿರುವ ಗಾಜಾದಲ್ಲಿ ಈಗಿರುವ ಸ್ಥಿತಿಯಲ್ಲಿ ಭಾರತೀಯರ ರಕ್ಷಣೆ ಕಷ್ಟ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.


ನವದೆಹಲಿ: ಇಸ್ರೇಲ್‌ ದಾಳಿಯಲ್ಲಿರುವ ಗಾಜಾದಲ್ಲಿ ಈಗಿರುವ ಸ್ಥಿತಿಯಲ್ಲಿ ಭಾರತೀಯರ ರಕ್ಷಣೆ ಕಷ್ಟ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. ವಕ್ತಾರ ಅರಿಂದಮ್‌ ಬಗ್ಚಿ ಮಾತನಾಡಿ, ಗಾಜಾದಲ್ಲಿ ಪ್ರಸ್ತುತ ನಾಲ್ಕು ಭಾರತೀಯರು ಇದ್ದಾರೆ. ಗಾಜಾದಲ್ಲಿ ಭಾರತೀಯರ ಸಾವು ದಾಖಲಾಗಿಲ್ಲ. ಈಗಿನ ಸ್ಥಿತಿಯಲ್ಲಿ ಗಾಜಾದಲ್ಲಿ ಜನರ ಸ್ಥಳಾಂತರ ಕಷ್ಟ ಸಾಧ್ಯ. ಒಂದೊಮ್ಮೆ ಸಾಧ್ಯವಾದಲ್ಲಿ ನಾಲ್ಕು ಜನರ ಸ್ಥಳಾಂತರ ಮೊದಲ ಆದ್ಯತೆ ಎಂದರು.

ಗಡಿ ಭಾಗದಲ್ಲಿ ಹೆಚ್ಚಿದ ಟ್ಯಾಂಕರ್‌ ಜಮಾವಣೆ

Tap to resize

Latest Videos

ಖಾನ್‌ ಯೂನಿಸ್‌: ಹಮಾಸ್‌ ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಪಣತೊಟ್ಟಿರುವ ಇಸ್ರೇಲ್ ಗಾಜಾಪಟ್ಟಿಯ ಮೇಲೆ ತನ್ನ ವಾಯುದಾಳಿಯನ್ನು ಗುರುವಾರವೂ ಮುಂದುವರೆಸಿದೆ. ಅಲ್ಲದೇ ಗಡಿ ಭಾಗದಲ್ಲಿ ಟ್ಯಾಂಕರ್‌ಗಳ ಜಮಾವಣೆಯನ್ನು ಹೆಚ್ಚಳ ಮಾಡಿದ್ದು, ಯಾವುದೇ ಕ್ಷಣದಲ್ಲಿ ಭೂದಾಳಿ ಆರಂಭಿಸಲು ಸಿದ್ಧತೆ ನಡೆಸಿದೆ. ಗಾಜಾಪಟ್ಟಿಯ (Gaza Strip) ಮೇಲೆ ಯುದ್ಧ ಆರಂಭವಾದಾಗಿನಿಂದಲೂ ವಾಯುದಾಳಿ ನಡೆಸುತ್ತಿರುವ ಇಸ್ರೇಲ್‌, ಸಮುದ್ರದ ಮಾರ್ಗವನ್ನು ಸಹ ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದೆ. ಇದೀಗ ಭೂ ದಾಳಿಗೂ ಮುಂದಾಗಿರುವುದರಿಂದ ಇಲ್ಲಿನ ನಾಗರಿಕರ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಸುರಕ್ಷಿತ ಸ್ಥಳ ಸಿಗದೇ ಪರದಾಡುವಂತಾಗಿದೆ. ಗಡಿ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ಇಸ್ರೇಲ್‌ ನಿಯೋಜಿಸಿದೆ.

ಇಸ್ರೇಲ್‌ ಸುರಕ್ಷಿತ ಪ್ರದೇಶ ಎಂದು ಘೋಷಿಸಿದ್ದ ದಕ್ಷಿಣದ ಮೇಲೂ ದಾಳಿ ನಡೆಸುತ್ತಿದೆ ಎಂದು ಪ್ಯಾಲೆಸ್ತೀನ್‌ ಆಡಳಿತ ಆರೋಪಿಸಿದ್ದು, ಇಸ್ರೇಲ್‌ನ ವಾಯುದಾಳಿಗೆ ಖಾನ್‌ಯೂನಿಸ್‌ನಲ್ಲಿನ ಅನೇಕ ಕಟ್ಟಡಗಳು ನಾಶಗೊಂಡಿವೆ ಎಂದು ಹೇಳಿದೆ.

ಡಾಬರ್‌ ಉತ್ಪನ್ನದಲ್ಲಿ ಕ್ಯಾನ್ಸರ್ ಕಾರಕ ಅಂಶ: ಅಮೆರಿಕಾ ಕೆನಡಾದಲ್ಲಿ ಕೇಸ್

ನೀರು, ಆಹಾರವಿಲ್ಲದೇ ಪರದಾಟ 

ಇಸ್ರೇಲ್‌ನ ವಾಯುದಾಳಿಯಿಂದ ಗಾಜಾಪಟ್ಟಿಯಲ್ಲಿರುವ ಬಹುತೇಕ ಬೇಕರಿಗಳು ಮತ್ತು ಅಂಗಡಿಗಳು ನಾಶಗೊಂಡಿದ್ದು, ಜನ ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಜನ ದಕ್ಷಿಣ ಗಾಜಾದಲ್ಲೇ ಉಳಿದುಕೊಂಡಿರುವುದರಿಂದ ಕುಡಿಯಲು ಶುದ್ಧ ನೀರು ಸಹ ಸಿಗದೇ ಕಲುಷಿತ ನೀರನ್ನೇ ಶೋಧಿಸಿ ಕುಡಿಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೆಬನಾನ್‌ನಿಂದ ರಾಕೆಟ್‌ ದಾಳಿ:

ಗಾಜಾ ಪಟ್ಟಿಯ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಕಾರವಾಗಿ ಹಮಾಸ್‌ ಉಗ್ರರ (Hamas Terrorist) ಬೆಂಬಲಿಗರಾದ ಹಿಜ್ಬುಲ್ಲಾ ಉಗ್ರರು ಲೆಬನಾನ್‌ ಕಡೆಯಿಂದ ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದಾರೆ. ಲೆಬನಾನ್‌ನಿಂದ ಹಾರಿಸಲ್ಪಟ್ಟ 4 ರಾಕೆಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ಇಸ್ರೇಲ್‌ ಸೇನೆ ಹೇಳಿದೆ. ಅಲ್ಲದೇ ಟ್ಯಾಂಕರ್‌ ಬಳಸಿ ಹಿಜ್ಬುಲ್ಲ ಉಗ್ರರ ಮೂಲ ಸೌಕರ್ಯಗಳನ್ನು ನಾಶ ಮಾಡಿರುವುದಾಗಿ ಹೇಳಿದೆ.

ಇಸ್ರೇಲ್‌ ಹಮಾಸ್‌ ಮಧ್ಯೆ ಇದೇ ಇದುವರೆಗಿನ ಭೀಕರ ಯುದ್ಧ: 7400ಕ್ಕೂ ಹೆಚ್ಚು ಬಲಿ

click me!