
ಗಾಜಾ(ಅ.19) ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭೀಕರ ನರಮೇಧವನ್ನು ಖಂಡಿಸಿದವರ ಸಂಖ್ಯೆ ತೀರಾ ವಿರಳ. ಆದರೆ ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ, ಹಮಾಸ್ ಉಗ್ರರ ಮೇಲೆ ನಡೆಸುತ್ತಿರುವ ದಾಳಿಯನ್ನು ವಿಶ್ವಾದ್ಯಂತ ಖಂಡಿಸುತ್ತಿದ್ದಾರೆ. ಪ್ಯಾಲೆಸ್ತಿನ್ ಮಾನವ ಹಕ್ಕುಗಳು, ಪ್ಯಾಲೆಸ್ತಿನಲ್ಲಿ ಭೀಕರತೆ ಕುರಿತು ಕಣ್ಮೀರು ಸುರಿಸುತ್ತಿದ್ದಾರೆ. ಸುತ್ತ ಮುತ್ತಲಿನ ಮುಸ್ಲಿಂ ರಾಷ್ಟ್ರಗಳು, ಅರಬ್ ಒಕ್ಕೂಟಗಳು ಪ್ಯಾಲೆಸ್ತಿನಿಯರು, ಗಾಜಾದ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ. ಪ್ಯಾಲೆಸ್ತಿನ್ ಬೆಂಬಲಕ್ಕೆ ನಿಂತಿದೆ. ಆದರೆ ಇದೇ ಗಾಜಾದ ನಿರಾಶ್ರಿತರನ್ನು ಸುತ್ತ ಮುತ್ತಲಿನ ಅರಬ್ ರಾಷ್ಟ್ರಗಳು ತಮ್ಮ ಗಡಿಯೊಳಕ್ಕೆ ಬಿಟ್ಟುಕೊಡುತ್ತಿಲ್ಲ. ಈಗಾಗಲೇ ಈಜಿಪ್ಟ್, ಇರಾನ್ ದೇಶಗಳು ನಿರಾಶ್ರಿತರಿಗೆ ಗಡಿಯ ಬಾಗಿಲ್ ಬಂದ್ ಎಂದು ಘೋಷಿಸಿದೆ.
ಹಮಾಸ್ ಉಗ್ರರ ಮೇಲಿನ ದಾಳಿಯಿಂದ ಪ್ಯಾಲೆಸ್ತಿನ್ ನಿರಾಶ್ರಿತರನ್ನು ಸುತ್ತಲಿರುವ ಅರಬ್ ರಾಷ್ಟ್ರಗಳು ಪ್ರವೇಶ ನೀಡುವ ಸಾಧ್ಯತೆ ಇಲ್ಲ. ಕಾರಣ 1948ರಿಂದ ಇದೇ ರೀತಿ ಹಲವು ನಿರಾಶ್ರಿತರು ಲಿಬೆನಾನ್, ಸಿರಿಯಾ, ಜೋರ್ಡಾನ್‌ನ ನಿರಾಶ್ರಿತರ ಶಿಬಿರಗಳಲ್ಲಿದ್ದಾರೆ. ಇದೀಗ ಇಸ್ರೇಲ್ ಟಾರ್ಗೆಟ್ ಮಾಡಿರುವುದು ಹಮಾಸ್ ಉಗ್ರರನ್ನು. ನಿರಾಶ್ರಿತರನ್ನು ತಮ್ಮ ತಮ್ಮ ದೇಶಗಳ ಒಳಗೆ ಬಿಟ್ಟುಕೊಂಡರೆ ಹಮಾಸ್ ಉಗ್ರರೂ ಕೂಡ ದೇಶದೊಳಕ್ಕೆ ನುಸುಳುವ ಆತಂಕ ಸುತ್ತಲಿನ ಅರಬ್ ರಾಷ್ಟ್ರಕ್ಕಿದೆ. ಹಾಗಂತ ಹಮಾಸ್ ಉಗ್ರರು ಭಯ ಅರಬ್ ರಾಷ್ಟ್ರಗಳಿಗಿಲ್ಲ. ಕಾರಣ ಜೋರ್ಡನ್, ಈಜಿಪ್ಟ್, ಇರಾನ್, ಲಿಬಿಯಾ, ಸಿರಿಯಾಗಳು ಈ ಹಮಾಸ್ ಉಗ್ರರ ಜೊತೆ ಉತ್ತಮ ಸಂಬಂಧ ಹೊಂದಿದೆ. ದ್ವಿಪಕ್ಷೀಯ ಮಾತುಕತೆ, ನೆರವು, ಆಡಳಿತ, ವ್ಯಾಪಾರ ವಹಿವಾಟುಗಳನ್ನು ಹಮಾಸ್ ಉಗ್ರರ ಜೊತೆ ನಡೆಸುತ್ತಿದೆ.
ನಾಗರೀಕರ ಸಾವು ನೋವು ಆಘಾತ ತಂದಿದೆ, ಗಾಜಾ ಆಸ್ಪತ್ರೆ ಮೇಲಿನ ದಾಳಿ ಮರುಗಿದ ಮೋದಿ!
ಹೀಗಿದ್ದರೂ ನಿರಾಶ್ರಿತರನ್ನೂ ಒಳಗೆ ಬಿಟ್ಟುಕೊಡಲು ಆತಂಕವಿದೆ. ಕಾರಣ, ಸುತ್ತಲಿನ ಅರಬ್ ರಾಷ್ಟ್ರಗಳಲ್ಲಿ ಪ್ರತಿ ದೇಶದಲ್ಲೂ ಪ್ರಬಲ ಉಗ್ರ ಸಂಘಟನೆಗಳಿವೆ. ಹೆಝಬೊಲ್ಲಾ, ಐಸಿಸ್ ಸೇರಿದಂತೆ ವಿಶ್ವದ ಭಯೋತ್ಪಾದಕ ಸಂಘಟನೆಗಳು ಸುತ್ತಿಲಿನ ಅರಬ್ ರಾಷ್ಟ್ರಗಳಲ್ಲಿವೆ. ಈ ಉಗ್ರ ಸಂಘಟನೆಗಳ ಬಲದಿಂದಲೇ ಅಲ್ಲಿನ ಸರ್ಕಾರಗಳು ನಡೆಯುತ್ತಿದೆ. ಮತ್ತೊಂದು ಉಗ್ರ ಸಂಘಟನೆಯನ್ನು ದೇಶದೊಳಕ್ಕೆ ಬಿಟ್ಟುಕೊಡುವು ಉಚಿತವಲ್ಲ ಅನ್ನೋದು ಅರಬ್ ರಾಷ್ಟ್ರಗಳ ನಿಲುವು. ಇಷ್ಟೇ ಅಲ್ಲ ಈಗಾಗಲೇ ಶಿಬಿರಗಳಲ್ಲಿರುವ ನಿರಾಶ್ರಿತರಿಂದ ಆರ್ಥಿಕ ಹೊರೆ ಹೆಚ್ಚಾಗಿದೆ.
ಸದ್ಯ ಅರಬ್ ರಾಷ್ಟ್ರಗಳು ಪ್ಯಾಲೆಸ್ತಿನ್ ಸ್ವತಂತ್ರಗೊಳಿಸಲು ಗಟ್ಟಿ ನಿರ್ಧಾರ ಮಾಡಿದೆ. ಪ್ಯಾಲೆಸ್ತಿನಿಯರಿಗೆ ಗಾಜಾಪಟ್ಟಿಯಲ್ಲೇ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಲು ಅರಬ್ ರಾಷ್ಟ್ರಗಳು ನಿರ್ಧರಿಸಿದೆ. ಹೀಗಾಗಿ ಇಸ್ರೇಲ್ ಮೇಲೆ ಎಚ್ಚರಿಕೆ ನೀಡುತ್ತಲೇ ಇದೆ. ಇತ್ತ ಲೆಬನಾನ್, ಸಿರಿಯಾ, ಇರಾನ್ ಗಡಿಗಳಿಂದ ಉಗ್ರರು ರಾಕೆಟ್ ದಾಳಿ ನಡೆಸುತ್ತಿದ್ದಾರೆ.
ಗಾಜಾ ಆಸ್ಪತ್ರೆ ಮೇಲೆ ದಾಳಿಯಿಂದ ಭುಗಿಲೆದ್ದ ವಿವಾದ, ಅರಬ್ ಜೊತೆ ಬೈಡೆನ್ ಮಾತುಕತೆ ರದ್ದು!
ಇಸ್ರೇಲ್ ಈಗಾಗಲೇ ತನ್ನ ದಾಳಿ ಕುರಿತು ಸ್ಪಷ್ಟನೆ ನೀಡಿದೆ. ಇಸ್ರೇಲ್ ದಾಳಿ ಹಮಾಸ್ ಉಗ್ರರ ವಿರುದ್ಧ ಅಕ್ಟೋಬರ್ 7 ರಂದು ಉಗ್ರರು ನಡೆಸಿದ ದಾಳಿಗೆ ಕ್ಷಮೆ ಇಲ್ಲ. ಮಕ್ಕಳ, ಹೆಣ್ಣುಮಕ್ಕಳು, ಮಹಿಳೆಯರು ಸೇರಿ ನಾಗರೀಕರ ಮೇಲೆ ನಡೆಸಿದ ದಾಳಿಯನ್ನು ಇಸ್ರೇಲ್ ಯಾವತ್ತೂ ಕ್ಷಮಿಸಲ್ಲ. ಹೀಗಾಗಿ ಹಮಾಸ್ ಉಗ್ರರ ಸಂಪೂರ್ಣ ನಾಶ ಮಾಡಿಯೇ ಯುದ್ಧ ನಿಲ್ಲಲಿದೆ ಎಂದು ಸ್ಪಷ್ಟವಾಗಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ