ನನ್ನ ಹಿರಿಮಗಳು ನಿಶಾ ದಿನದ 18 ಗಂಟೆ ಸೈನ್ಯದಲ್ಲಿ ಕೆಲಸ ಮಾಡುತ್ತಾಳೆ. ಇಸ್ರೇಲಿಗಳನ್ನು ರಕ್ಷಿಸುತ್ತಿರುವ ಮಗಳ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ ಎಂದು ತಂದೆ ಜೀವಭಾಯಿ ಮೂಲ್ಯಾಸಿಯ ಹೆಮ್ಮೆ ಪಡುತ್ತಾರೆ.
ಇಸ್ರೇಲ್ ಹಮಾಸ್ ನಡುವಿನ ಭೀಕರ ಯುದ್ಧ ಮುಂದುವರಿದಿದೆ. ಕಳೆದ ಶನಿವಾರ ಇಸ್ರೇಲ್ ಮೇಲೆ ಏಕಾಏಕಿ ನೆಲ, ಆಕಾಶದ ಮೂಲಕ ಸಾವಿರಾರು ರಾಕೆಟ್ ಉಡಾಯಿಸಿ ದಾಳಿ ನಡೆಸಿ ಹುತ್ತಕ್ಕೆ ಕೈಹಾಕಿದ್ದ ಹಮಾಸ್ ಉಗ್ರರು. ಇದೀಗ ಇಸ್ರೇಲ್ ಕೆರಳಿದ ಸರ್ಪದಂತಾಗಿದ್ದು ಗಾಜಾ ಪಟ್ಟಿಯ ಮೇಲೆ ಯುದ್ಧ ವಿಮಾನಗಳು ನಿರಂತರ ಬಾಂಬ್‌ಗಳ ಸುರಿಮಳೆಗೈದು ಕಟ್ಟಡ, ಮನೆ ಮಂದಿರಗಳನ್ನು ನೆಲಸಮ ಮಾಡಿ, ಇಡೀ ನಗರವನ್ನೇ ಸ್ಮಶಾನವನ್ನಾಗಿ ಮಾಡಿಬಿಟ್ಟಿದೆ.
ಹಮಾಸ್-ಇಸ್ರೇಲ್ ನಡುವೆ ನಡೆಯುತ್ತಿರುವ ಈ ಭೀಕರ ಯುದ್ಧದಲ್ಲಿ ಇಸ್ರೇಲ್ ಪರವಾಗಿ ಹೋರಾಟ ನಡೆಸಿರುವ ಭಾರತೀಯ ಮೂಲದ ಇಬ್ಬರು ಸಹೋದರಿಯರಿದ್ದಾರೆಂಬುದು ಗೊತ್ತೇ? ಹೌದು, ಇಸ್ರೇಲ್ ಸೈನ್ಯ ಸೇರ್ಪಡೆಯಾಗಿರುವ ನಿಶಾ, ರಿಯಾ ಎಂಬ ಇಬ್ಬರು ಸಹೋದರಿಯರು ಹಮಾಸ್ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸಿದ್ದಾರೆ.
'ನಾನು ಬರ್ತೀನಿ ನನ್ನಪತ್ನಿ ಮಕ್ಕಳ ಬಿಟ್ಟುಬಿಡಿ: ಹೆಂಡತಿ 2 ಮಕ್ಕಳನ್ನು ಅಪಹರಿಸಿರುವ ಹಮಾಸ್ ಉಗ್ರರು ಬಳಿ ತಂದೆ ಗೋಳಾಟ!
ಭಾರತೀಯರೆಂದರೆ ಹಾಗೆ ತಾವು ಯಾವ ದೇಶದ ಅನ್ನ ಗಾಳಿ ನೀರು ಸೇವಿಸುತ್ತಾರೋ ಆ ದೇಶಕ್ಕೆ ಪ್ರಾಣ ಮುಡಿಪಾಗಿಡಬಲ್ಲರು. ಯಾವುದೇ ದೇಶದಲ್ಲಿರುವ ಭಾರತೀಯರನ್ನ ನೋಡಿ ಅವರೆಂದೂ ಆ ದೇಶಕ್ಕೆ ಮುಳುವಾದವರಲ್ಲ, ಆ ದೇಶದ ಕಾನೂನು ಉಲ್ಲಂಘಿಸಿದವರಲ್ಲ, ಹಿಂಸಾಚಾರ ನಡೆಸಿದವರಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಮಾಡಿದವರಲ್ಲ, ಸಂಸ್ಕೃತಿ, ಆಚರಣೆಗಳಿಗೆ ವಿರುದ್ಧವಾಗಿ ನಡೆದುಕೊಂಡವರಲ್ಲ, ಒಂದು ರೀತಿ ಭಾರತೀಯರು ಹಾಲಿಗೆ ಹಾಕುವ ಸಕ್ಕರೆಯಂತೆ ತಮ್ಮ ಸಂಪ್ರಾದಯವನ್ನು, ಜೀವನಪದ್ಧತಿಯನ್ನು ಅನುಸರಿಸುತ್ತಲೇ ಆ ದೇಶದೊಂದಿಗೆ ಒಂದಾಗಿ ಬೆರೆತುಬಿಡಬಲ್ಲರು. ಅವರೆಂದು ಭಿನ್ನವಾಗಿ, ಪರಕೀಯರಂತೆ ಕಾಣುವುದೇ ಇಲ್ಲ. ಸಂಕಷ್ಟ ಬಂದಾಗ ಆ ದೇಶದ ಉಳಿವಿಗೆ ಎಲ್ಲದಕ್ಕೂ ಸಿದ್ಧವಾಗಿಬಿಡಲ್ಲರು. ಅಂತಹದ್ದೊಂದು ಗುಣ ಭಾರತೀಯರ ರಕ್ತದಲ್ಲೇ ಇದೆ. ಅದಕ್ಕೆ ಈ ಸಹೋದರಿಯರೇ ನಿದರ್ಶನ.
ಮಾಧ್ಯಮ ವರದಿಗಳ ಪ್ರಕಾರ ಗುಜರಾತ್‌ನ ಜುನಾಗಢ ಜಿಲ್ಲೆಯ ಮಾನವದರ್ ತಹಸಿಲ್ ಅಡಿಯಲ್ಲಿ ಬರುವ ಕೋಠಿ ಗ್ರಾಮದವರಾದ ನಿಶಾ, ರಿಯಾ ಎಂಬಿಬ್ಬ ಗಟ್ಟಿಗಿತ್ತಿ ಸಹೋದರಿಯರು ಐಡಿಎಫ್ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ಜೀವಭಾಯಿ ಮೂಲ್ಯಾಸಿಯಾ ರಾಜಧಾನಿ ಟೆಲ್ ಅವೀವ್‌ನಲ್ಲಿ ಸಾಮಾನ್ಯ ಅಂಗಡಿಯನ್ನು ನಡೆಸುತ್ತಿದ್ದಾರೆ. ಸುಮಾರು ಮೂವತ್ತು ವರ್ಷಗಳ ಹಿಂದೆ ತಮ್ಮ ಹಿರಿಯ ಸಹೋದರ ಸವದಾಸ್‌ಭಾಯ್ ಮೂಲ್ಯಾಸಿಯಾ ಮತ್ತು ಅವರ ಕುಟುಂಬಗಳೊಂದಿಗೆ ಇಸ್ರೇಲ್‌ನ ಟೆಲ್ ಅವಿವ್‌ಗೆ ವಲಸೆ ಹೋಗಿದ್ದರು.
ನಿಶಾ ಹಿರಿಯರಾಗಿದ್ದು ಅವರು ಇಸ್ರೇಲಿ ಸೇನೆಯ ಸಂವಹನ ಮತ್ತು ಸೈಬರ್ ಭದ್ರತಾ ವಿಭಾಗದಲ್ಲಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಇತ್ತ ಕಿರಿಯ ಸಹೋದರಿ ರಿಯಾ ಸಹ ಪಿಯುಸಿ ಮುಗಿಯುತ್ತಿದ್ದಂತೆ ಕಮಾಂಡೋ ತರಬೇತಿ ಪೂರ್ಣಗೊಳಿಸಿ ಐಡಿಎಫ್ ಸೈನ್ಯ ಖಾಯಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಸಹೋದರಿ ನಿಶಾ ಈ ಹಿಂದೆ ನಡೆದ ಹಮಾಸ್ ನಡುವೆ ನಡೆದ ಯುದ್ಧದಲ್ಲೂ ಭಾಗಿಯಾಗಿದ್ದರು. ಪ್ಯಾಲೆಸ್ತೀನ್‌ನ ಹಮಾಸ್‌ನೊಂದಿಗಿನ ಘರ್ಷಣೆಯಲ್ಲಿ ಭಾರೀ ಹಾನಿಯನ್ನುಂಟುಮಾಡುವಲ್ಲಿ ಆಕೆಯ ಇಲಾಖೆ ಪ್ರಮುಖ ಪಾತ್ರ ವಹಿಸಿದೆ ಎಂದು ಗಮನಿಸಬೇಕು.
ಯಹೂದಿಗಳ ಹಬ್ಬದ ದಿನವೇ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಲು ಇದೆ ಕಾರಣ!
ಇಸ್ರೇಲ್‌ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನರು ಸೈನ್ಯಕ್ಕೆ ಸೇರ್ಪಡೆಗೊಳ್ಳುವುದು ಕಡ್ಡಾಯವಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಕಲಾಂಗ ವ್ಯಕ್ತಿಗಳಿಗೆ ಮಾತ್ರ ವಿನಾಯಿತಿಗಳನ್ನು ನೀಡಲಾಗುತ್ತದೆ ಮತ್ತು ಕಲಾವಿದರು ಮತ್ತು ಆಟಗಾರರಿಗೆ ಅವರ ಕಡ್ಡಾಯ ಸೇರ್ಪಡೆ ಅವಧಿಯ 2 ವರ್ಷ ಮತ್ತು ಎಂಟು ತಿಂಗಳ ಪುರುಷರಿಗೆ ಮತ್ತು ಎರಡು ಮಹಿಳೆಯರಿಗೆ ಶೇಕಡಾ 75 ರಷ್ಟು ಸಡಿಲಿಕೆ ನೀಡಲಾಗುತ್ತದೆ. IDF ನಲ್ಲಿ ಪುರುಷರು ಮತ್ತು ಮಹಿಳೆಯರು ಬಹುತೇಕ ಸಮಾನ ಸಂಖ್ಯೆಯಲ್ಲಿದ್ದಾರೆ. ಆದಾಗ್ಯೂ, ಸಹೋದರಿಯರಾದ ನಿಶಾ ಮತ್ತು ರಿಯಾ ಐಡಿಎಫ್‌ನೊಂದಿಗೆ ತಮ್ಮ ಕಡ್ಡಾಯ ಕಾರ್ಯವನ್ನು ಮಾಡಿದ್ದು ಮಾತ್ರವಲ್ಲದೆ ಮಿಲಿಟರಿ ವೃತ್ತಿಜೀವನವನ್ನಾಗಿ ಆರಿಸಿಕೊಂಡಿರುವುದು ಈ ಸಹೋದರಿಯರ ಗಟ್ಟಿತನ, ಇಸ್ರೇಲ್‌ಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂಬುದನ್ನು ತೋರಿಸುತ್ತದೆ.
ನಿಶಾ ದಿನದ 18 ಗಂಟೆ ಸೈನ್ಯದಲ್ಲಿ ಕೆಲಸ ಮಾಡುತ್ತಾಳೆ. ಇಸ್ರೇಲಿಗಳನ್ನು ರಕ್ಷಿಸುತ್ತಿರುವ ನನ್ನ ಮಗಳ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ ಎಂದು ಹಿರಿಮಗಳು ನಿಶಾ ಬಗ್ಗೆ ತಂದೆ ಜೀವಭಾಯಿ ಮೂಲ್ಯಾಸಿಯ ಹೆಮ್ಮೆ ಪಡುತ್ತಾರೆ.