ಟೈಟಾನಿಕ್ ಅವಶೇಷ ನೋಡ ಹೊರಟ ಸಬ್‌​ಮ​ರೀ​ನ್‌ ಅವ​ಶೇಷ ಪತ್ತೆ: ​ಪ್ರವಾ​ಸಿ​ಗರು ಜಲ​ಸ​ಮಾ​ಧಿ?

By Kannadaprabha NewsFirst Published Jun 23, 2023, 10:49 AM IST
Highlights

ಅಪಘಾತಕ್ಕೊಳಗಾಗಿದ್ದ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಕ್ಕೆ ತೆರಳಿ ಕಾಣೆಯಾಗಿದ್ದ ಸಬ್‌ಮರೀನ್‌ನಲ್ಲಿದ್ದ ಆಮ್ಲಜನಕ ಖಾಲಿಯಾಗಿದ್ದು, ಅದರಲ್ಲಿದ್ದ ಐವರೂ ಪ್ರಯಾಣಿಕರು ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ದುಬೈ: ಅಪಘಾತಕ್ಕೊಳಗಾಗಿದ್ದ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಕ್ಕೆ ತೆರಳಿ ಕಾಣೆಯಾಗಿದ್ದ ಸಬ್‌ಮರೀನ್‌ನಲ್ಲಿದ್ದ ಆಮ್ಲಜನಕ ಖಾಲಿಯಾಗಿದ್ದು, ಅದರಲ್ಲಿದ್ದ ಐವರೂ ಪ್ರಯಾಣಿಕರು ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸಬ್‌ಮರೀನ್‌ನ ಅವಶೇಷ ಪತ್ತೆಯಾಗಿದೆ ಎಂದು ಅಮೆರಿಕದ ಕರಾವಳಿ ಪಡೆ ಹೇಳಿದೆ.

ಸಬ್‌ಮರೀನ್‌ನ ಪತ್ತೆಗೆ ಅಮೆರಿಕ, ಕೆನಡಾ ಮತ್ತು ಫ್ರಾನ್ಸ್‌ ದೇಶಗಳು ಕೊನೆಯ ಕ್ಷಣದ ಹುಡುಕಾಟ ನಡೆ​ಸಿ​ದವು. ಸಬ್‌ಮರೀನ್‌ ಯಾತ್ರೆ ಆರಂಭಿ​ಸಿ​ದಾ​ಗ 96 ಗಂಟೆಗಳಿಗಾಗುವಷ್ಟು ಮಾತ್ರ ಆಮ್ಲಜನಕವಿತ್ತು. ಈ 96 ತಾಸಿನ ಸಮಯ ಗುರು​ವಾರ ಸಂಜೆ 7 ಗಂಟೆಗೆ ಮುಗಿ​ದಿ​ದೆ. ಹೀಗಾ​ಗಿ ಅದರಲ್ಲಿದ್ದ ಐದು ಜನರೂ ಉಸಿರಾಡಲು ತೊಂದರೆಯಾಗಿ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಸಬ್‌ಮರೀನ್‌ನ ಅವಶೇಷ ಪತ್ತೆಯಾಗಿದ್ದು, ಈ ಬಗ್ಗೆ ಹೆಚ್ಚಿನ ಶೋಧಕಾರ್ಯ ಮುಂದು​ವ​ರಿ​ದೆ.

3 ದಿನಗಳಿಂದ ಹುಡುಕಾಟ ನಡೆಸಲಾಗುತ್ತಿದ್ದರೂ ಸಹ ಸಬ್‌ಮರೀನ್‌ ಪತ್ತೆಯಾಗಿರಲಿಲ್ಲ. ಹಾಗಾಗಿ ಈ ನಡುವೆ ಶಬ್ದ ಕೇಳಿಬರುತ್ತಿದೆ ಎಂದು ಹೇಳಲಾಗಿರುವ ಪ್ರದೇಶದಲ್ಲಿ ಕೆನಡಾದ ನೌಕೆ ನೀರಿನೊಳಗೆ ಚಲಿಸುವ ರೋಬೋಟ್‌ ಅನ್ನು ಕಳುಹಿಸಿದ್ದು, ಅದು ಸಮುದ್ರದ ತಳವನ್ನು ಮುಟ್ಟಿತ್ತು. ಅಲ್ಲಿಂದ ಹುಡುಕಾಟ ಆರಂಭಿಸಿತ್ತು. ಆದರೂ ಫಲ ನೀಡಿ​ರಲಿಲ್ಲ. ಸಬ್‌ಮರೀನ್‌ನ ಸಿಬ್ಬಂದಿ ಸೇರಿ ಇದರಲ್ಲಿ ಐವರು ಪ್ರವಾಸಿಗರಿದ್ದು, ಇದರಲ್ಲಿ ಬೆಂಗ​ಳೂ​ರಲ್ಲಿ ಈ ಹಿಂದೆ ವಾಸ​ವಾ​ಗಿದ್ದ ಹಾಗೂ ಭಾರ​ತದ ಚೀತಾ ಯೋಜ​ನೆಗೆ ಮಧ್ಯ​ಸ್ಥಿಕೆ ವಹಿ​ಸಿದ್ದ ಬ್ರಿಟಿ​ಷ್‌ ವ್ಯಕ್ತಿಯೂ ಸೇರಿದ್ದಾರೆ.

ಸಬ್‌ಮರಿನ್ ಆಮ್ಲಜನಕ 7.15PMಗೆ ಸಂಪೂರ್ಣ ಖಾಲಿ, ಪ್ರವಾಸಿಗರ ಪತ್ತೆಗೆ ಹುಡುಕಾಟ ತೀವ್ರ!

ಚಾಲ​ಕನ ಪತ್ನಿ ಟೈಟಾ​ನಿಕ್‌ ಸಂತ್ರ​ಸ್ತರ ವಂಶ​ಸ್ಥೆ

ಈ ನಡುವೆ ನತ​ದೃಷ್ಟಸಬ್‌​ಮ​ರೀನ್‌ ಚಾಲ​ಕನ ಪತ್ನಿ ಟೈಟಾ​ನಿಕ್‌ ದುರಂತ​ದಲ್ಲಿ ಮೃತ​ಪ​ಟ್ಟ ವ್ಯಕ್ತಿ​ಯೊ​ಬ್ಬರ ವಶಂಸ್ಥೆ ಆಗಿ​ದ್ದಾ​ರೆ ಎಂಬ ವಿಚಾರ ಬೆಳ​ಕಿಗೆ ಬಂದಿ​ದೆ.

1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷವನ್ನು ನೋಡುವ ಸಲುವಾಗಿ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಬಳಿಕ ನಾಪತ್ತೆಯಾಗಿತ್ತು. ಈ ನತದೃಷ್ಟ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಹೊತ್ತುಕೊಂಡು ಭಾನುವಾರ ಅಟ್ಲಾಂಟಾದ ಸಮುದ್ರದಾಳಕ್ಕೆ ಜಿಗಿದಿತ್ತು. ಹೀಗೆ ಹೊರಟ ನೌಕೆ ಬಳಿಕ ಸಂಪರ್ಕ ಕಳೆದುಕೊಂಡಿತ್ತು. ಟೈಟಾನಿಕ್‌ ಅವಶೇಷಗಳ ವೀಕ್ಷಣೆಗೆ ಅವಕಾಶ ಸೇರಿದಂತೆ  3,800m (12,500 ಅಡಿ) ಆಳ ಸಮುದ್ರದಲ್ಲಿ 8 ದಿನಗಳ ಈ ಪ್ರವಾಸಕ್ಕೆ ಪ್ರವಾಸ ಆಯೋಜಿಸಿದ ಸಂಸ್ಥೆ ಓಷನ್‌ಗೇಟ್ ಸಂಸ್ಥೆ ಒಬ್ಬರಿಗೆ  250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿ ದರ ನಿಗದಿ ಮಾಡಿತ್ತು. ಜೂ.18ರಂದು ಸಬ್‌ಮರೀನ್‌ ಹೀಗೆ ಪ್ರವಾಸ ಆರಂಭಿಸಿದ 1.45 ಗಂಟೆ ಬಳಿಕ ಸಂಪರ್ಕ ಕಡಿದುಕೊಂಡಿತ್ತು. ದಿಢೀರ್‌ ನಾಪತ್ತೆಯಾದ ಸಬ್‌ಮರೀನ್‌ ಪತ್ತೆಗಾಗಿ ಅಮೆರಿಕ, ಕೆನಡಾ ಮತ್ತು ಫ್ರಾನ್ಸ್‌ನ ತಜ್ಞರ ತಂಡ ಸತತ 4ನೇ ದಿನವೂ ತೀವ್ರ ನಾಪತ್ತೆಯಾದ ಜಲಂತರ್ಗಾಮಿ ನೌಕೆಯಲ್ಲಿ ಒಟ್ಟು ಐವರು ಪ್ರವಾಸಿಗರಿದ್ದರು, ಅದರಲ್ಲಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಅವರ ಮಗನೂ ಇದ್ದರೂ ಎಂಬ ಮಾಹಿತಿ ಲಭ್ಯವಾಗಿದೆ. 

1912 ರಲ್ಲಿ ಮುಳುಗಿದ ಟೈಟಾನಿಕ್  ಹಡಗಿನ ಅವಶೇಷವೂ ಸೇಂಟ್ ಜಾನ್ಸ್‌ನ (St John) ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ  (Newfoundland)ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ.

ಇತ್ತ ಈ ಜಲಂತರ್ಗಾಮಿ ನೌಕೆಯಲ್ಲಿ ಪಾಕಿಸ್ತಾನ ಮೂಲದ ಬ್ರಿಟನ್‌ನಲ್ಲಿ ನೆಲೆಯಾಗಿರುವ ಪ್ರಸಿದ್ಧ ಉದ್ಯಮಿ  ಶಹಜಾದಾ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್  ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಅವಶೇಷಗಳನ್ನು ನೋಡಲು ಹೊರಟಿದ್ದರು. ಈ ವಿಚಾರವನ್ನು ಅವರ ಕುಟುಂಬ ದೃಢಪಡಿಸಿದೆ. ಇವರಿಬ್ಬರ ಜೊತೆಗೆ, ಬ್ರಿಟಿಷ್ ಸಾಹಸಿ ಹಮೀಶ್ ಹಾರ್ಡಿಂಗ್ (Hamish Harding) ಕೂಡ ಈ ಕಾಣೆಯಾದ ಜಲಾಂತರ್ಗಾಮಿ ನೌಕೆಯಲ್ಲಿದ್ದಾರೆ. ನ್ಯೂಫೌಂಡ್‌ಲ್ಯಾಂಡ್‌ನಲ್ಲಿ 40 ವರ್ಷಗಳಲ್ಲೇ ಅತ್ಯಂತ ಕೆಟ್ಟದೆನಿಸಿದ ಚಳಿಗಾಲದ ಕಾರಣ, ಈ ಪ್ರವಾಸವೂ 2023 ರಲ್ಲಿ ಟೈಟಾನಿಕ್‌ಗೆ ತೆರಳುತ್ತಿರುವ ಮೊದಲ ಮತ್ತು ಏಕೈಕ ಮಾನವಸಹಿತ ನೌಕೆ ಆಗಿರಬಹುದು ಎಂದು ಅವರು ಪ್ರವಾಸದ ಆರಂಭದಲ್ಲಿ ಹಾಕಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾರ್ಡಿಂಗ್  ಹೇಳಿದ್ದರು. 

ಟೈಟಾನಿಕ್ ಅವಶೇಷಗಳ ವೀಕ್ಷಣೆಗೆ ಪ್ರವಾಸಿಗರ ಕರೆದೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆ

click me!