ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಶ್ವೇತಭವನದೊಳಗೆ ಭಾಷಣ ಮಾಡಿದ ಮೋದಿ, 3 ದಶಕಗಳ ಹಿಂದಿನ ನೆನಪು ಬಿಚ್ಚಿಟ್ಟಿದ್ದಾರೆ
ವಾಶಿಂಗ್ಟನ್ ಡಿಸಿ(ಜೂ.22): ಮೂರು ದಶಕಗಳ ಹಿಂದೆ ಸಾಮಾನ್ಯ ವ್ಯಕ್ತಿಯಾಗಿ ಶ್ವೇತಭವನವನ್ನು ಹೊರಗಿನಿಂದ ನೋಡಿದ್ದೆ. ಬಳಿಕ ಪ್ರಧಾನಿಯಾಗಿ ಹಲವು ಭಾರಿ ಶ್ವೇತಭವನಕ್ಕೆ ಭೇಟಿ ನೀಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಭಾರತ-ಅಮೆರಿಕ ಅನಿವಾಸಿ ಭಾರತೀಯ ಸಮುದಾಯಕ್ಕೆ ಶ್ವೇತಭವನ ಬಾಗಿಲು ತೆರೆದಿದೆ ಎಂದು ಮೋದಿ ಹೇಳಿದ್ದಾರೆ. ಶ್ವೇತಭವನದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹಳೇ ನೆನಪು ಬಿಚ್ಚಿಟ್ಟಿದ್ದಾರೆ.
ಶ್ವೇತಭವನದಲ್ಲಿ ಸಿಕ್ಕಿರೂವ ಅಭೂತಪೂರ್ವ ಸ್ವಾಗತ ಎಲ್ಲಾ ಭಾರತೀಯರಿಗೆ ದೊರಕಿಗೆ ಸಮ್ಮಾನವಾಗಿದೆ. ಈ ಆದರದ ಸ್ವಾಗತಕ್ಕೆ ಜೋ ಬೈಡೆನ್ ಹಾಗೂ ಜಿಲ್ ಬೈಡನ್‌ಗೆ ನಾನು ಆಭಾರಿಯಾಗಿದೆ ಎಂದು ಮೋದಿ ತಮ್ಮ ಭಾಷಣ ಆರಂಭಿಸಿದರು. 3 ದಶಕಗಳ ಹಿಂದೆ ನಾನು ಸಾಧಾರಣ ನಾಗರೀಕನಾಗಿ ಅಮೆರಿಕ ಪ್ರವಾಸ ಮಾಡಿದ್ದೆ. ಆ ಸಂದರ್ಭದಲ್ಲಿ ನಾನು ಶ್ವೇತಭವನವನ್ನು ಹೊರಗಿನಿಂದ ನೋಡಿದ್ದೆ. ಪ್ರಧಾನಿಯಾದ ಬಳಿಕ ನಾನು ಹಲವು ಭಾರಿ ಅಮೆರಿಕಕ್ಕೆ ಆಗಮಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತ-ಅಮೆರಿಕ ಅನಿವಾಸಿ ಭಾರತೀಯ ಸಮುದಾಯಕ್ಕೆ ಶ್ವೇತಭವನದ ಬಾಗಿಲು ತೆರೆದಿದೆ ಎಂದು ಮೋದಿ ಹೇಳಿದ್ದಾರೆ.
ಭಾರತೀಯ ಸಮುದಾಯದ ಜನರು ಅಮೆರಿಕದಲ್ಲಿ ನಮ್ಮ ಹೆಮ್ಮೆಯ ಪ್ರತೀಕವಾಗಿದ್ದಾರೆ. ಭಾರತ ಹಾಗೂ ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುವಲ್ಲಿ ಅನಿವಾಸಿ ಭಾರತೀಯರ ಪಾತ್ರ ಮುಖ್ಯವಾಗಿದೆ. ನಿಮ್ಮಂದಲೇ ಈ ಬಂಧುತ್ವ ಮತ್ತಷ್ಟು ಗಟ್ಟಿಯಾಗಿದೆ ಎಂದಿದ್ದಾರೆ. ಕೋವಿಡ್ ಬಳಿಕ ವಿಶ್ವವೇ ಹೊಸ ದಿಕ್ಕಿನತ್ತ ಸಾಗುತ್ತಿದೆ. ಆದರೆ ಭಾರತ ಹಾಗೂ ಅಮೆರಿಕ ಸ್ನೇಹ ಮತ್ತಷ್ಟು ಗಟ್ಟಿಗೊಂಡಿದೆ. 2 ದೇಶಗಳು ಜಂಟಿಯಾಗಿ ಕೆಲಸ ಮಾಡಲು ಬದ್ಧತೆ ಹೊಂದಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.