ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟ: ಬೆಂಕಿ ದುರಂತಕ್ಕೆ 50ಕ್ಕೂ ಅಧಿಕ ಸಾವು!

By Suvarna NewsFirst Published Jul 13, 2021, 10:58 AM IST
Highlights

* ಇರಾಕ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ದುರಂತ

* ಆಸ್ಪತ್ರೆಯಲ್ಲಿ ಬೆಂಕಿ, ಐವತ್ತಕ್ಕೂ ಅಧಿಕ ಮಂದಿ ಸಾವು

* ಆರೋಗ್ಯ ಮತ್ತು ರಕ್ಷಣಾ ವ್ಯವಸ್ಥಾಪಕರ ಅಮಾನತ್ತುಗೊಳಿಸಿ, ಬಂಧಿಸುವಂತೆ ಆದೇಶಿಸಿದ ಪಿಎಂ

ನಸ್ಸೀರಿಯಾ(ಜು.13): ಇರಾಕ್‌ನ ನಸ್ಸೀರಿಯಾದಲ್ಲಿ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದು, 67ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಕ್ಸಿಜನ್ ಟ್ಯಾಂಕ್‌ ಸ್ಪೊಟಗೊಂಡ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಘಟನೆ ಸೋಮವಾರ ರಾತ್ರಿ ಈ ದುರಂತ ಸಂಭವಿಸಿದ್ದು, ಕೋವಿಡ್‌ ವಾರ್ಡ್‌ನಲ್ಲಿದ್ದ ಆಕ್ಸಿಜನ್ ಟ್ಯಾಂಕ್‌ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿರುವವರನ್ನು ಹೊರತರಲು ರಕ್ಷಣಾ ಕಾರ್ಯ ಆರಂಭವಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾರಂಭಿಸಿದ್ದಾರೆ. ಅತ್ತ ಪ್ರಧಾನಿ ಮುಸ್ತಫಾ-ಅಲ್‌-ಖದೀಮಿ ಕೂಡಾ ತುರ್ತುಸಭೆ ಆಯೋಜಿಸಿ ಈ ಬಗ್ಗೆ ಚರ್ಚಿಸಿದ್ದಾರೆ. ಸಭೆ ಬಳಿಕ ಪ್ರಧಾನಿ ಕಚೇರಿಯಿಂದ ಪ್ರಕಟಣೆಯೊಂದನ್ನು ಹೊರಡಿಸಲಾಗಿದ್ದು ಈ ದುರಂತಕ್ಕೆ ಕಾರಣರಾದ ಆಸ್ಪತ್ರೆ ಮ್ಯಾನೇಜರ್, ನಾಸಿರಿಯಾದ ಆರೋಗ್ಯ ಮತ್ತು ರಕ್ಷಣಾ ವ್ಯವಸ್ಥಾಪಕರನ್ನು ಕೂಡಲೇ ಅಮಾನತ್ತುಗೊಳಿಸಿ ಬಂಧಿಸುವಂತೆ ಆದೇಶಿಸಲಾಗಿದೆ.

BREAKING: Big fire erupts at COVID hospital in Nasiriyah, Iraq. Reports say at least 60 people are dead. pic.twitter.com/QyMVhOp0mO

— Truthless World (@TruthlessW)

ಬೆಂಕಿ ನಿಯಂತ್ರಣಕ್ಕೆ ಬಂದಿದ್ದರೂ ಮತ್ತು ಅಲ್-ಹುಸೇನ್ ಕೋವಿಡ್‌ ಆಸ್ಪತ್ರೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆಸ್ಪತ್ರೆ ತುಂಬಾ ದಟ್ಟವಾದ ಹೊಗೆ ಆವರಿಸಿದ್ದು, ಇದರಿಂದ ರಕ್ಷಣಾ ಸಿಬ್ಬಂದಿಗೆ ಆಸ್ಪತ್ರೆಯ ಕೆಲ ಭಾಗಗಳಿಗೆ ತೆರಳಲ ಸಾಧದ್ಯವಾಗುತ್ತಿಲ್ಲ. ಇನ್ನೂ ಅನೇಕ ಮಂದಿ ಕಾಣೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿ ಎದುರಾಗಿಗಿದೆ.  ಪ್ರಾಣ ಕಳೆದುಕೊಂಡವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರೂ ಇದ್ದಾರೆ.

click me!