ಡೆಲ್ಟಾ ತಳಿ ಎಫೆಕ್ಟ್: ಸಿಡ್ನಿಯಲ್ಲಿ 120 ವರ್ಷದಲ್ಲೇ ಗಂಭೀರ ಆರೋಗ್ಯ ಬಿಕ್ಕಟ್ಟು!

By Suvarna NewsFirst Published Jul 13, 2021, 7:58 AM IST
Highlights

* ಆಸ್ಪ್ರೇಲಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಸಿಡ್ನಿಯಲ್ಲಿ ಕೊರೋನಾ ಅಬ್ಬರ

* ಡೆಲ್ಟಾ ಕೇಸ್‌ಗಳ ಏರಿಕೆಯಿಂದ ಸಿಡ್ನಿ ನಗರಕ್ಕೆ ಸಂಕಷ್ಟ

* ಸಿಡ್ನಿಯಲ್ಲಿ 120 ವರ್ಷದಲ್ಲೇ ಗಂಭೀರ ಆರೋಗ್ಯ ಬಿಕ್ಕಟ್ಟು

ಸಿಡ್ನಿ(ಜು.13): ಆಸ್ಪ್ರೇಲಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಸಿಡ್ನಿಯಲ್ಲಿ ಸೋಮವಾರ 112 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅಂದರೆ ಭಾನುವಾರ ದಾಖಲಾದ ಕೊರೋನಾ ಪ್ರಕರಣಗಳಿಗಿಂತ ಶೇ.45ರಷ್ಟುಹೆಚ್ಚಳ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ಸಿಡ್ನಿಯಲ್ಲಿ ಕೊರೋನಾ ವೈರಸ್‌ನ ಡೆಲ್ಟಾತಳಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು, 120 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಡ್ನಿ ನಗರದಲ್ಲಿ ಆರೋಗ್ಯ ಬಿಕ್ಕಟ್ಟು ಎದುರಾಗಿದೆ ಎಂದು ನ್ಯೂ ಸೌತ್‌ ವೇಲ್ಸ್‌ ವಿವಿಯ ಸಾಂಕ್ರಾಮಿಕ ರೋಗಗಳ ಪ್ರೊಫೆಸರ್‌ ಬಿಲ್‌ ಬೌಟೆಲ್‌ ಆತಂಕ ವ್ಯಕ್ತಪಡಿಸಿದ್ದಾರೆ.

‘ಸಿಡ್ನಿಯನ್ನು ಡೆಲ್ಟಾವೈರಸ್‌ನಿಂದ ಪಾರು ಮಾಡಲು ನಗರದ ಜನರು ತಮ್ಮ-ತಮ್ಮ ಮನೆಗಳನ್ನು ಬಿಟ್ಟು ಹೊರಬರಲೇಬಾರದು. ಆಗ ಮಾತ್ರವೇ ನಗರದ ಮೇಲೆ ಹೇರಿಕೆಯಾಗಿರುವ ಲಾಕ್‌ಡೌನ್‌ ಶೀಘ್ರವೇ ತೆರವು ಮಾಡಲು ಅನುವಾಗುತ್ತದೆ’ ಎಂದಿದ್ದಾರೆ.

ಆಸ್ಪ್ರೇಲಿಯಾವು ತನ್ನ ಶೇ.17.8ರಷ್ಟುಜನರಿಗೆ ಮಾತ್ರವೇ ಲಸಿಕೆ ನೀಡಿದ್ದು, ಹೆಚ್ಚು ಮಂದಿ ಲಸಿಕೆ ಪಡೆಯುವಂತೆ ಉತ್ತೇಜಿಸಲು ಆಸ್ಪ್ರೇಲಿಯಾ ಸರ್ಕಾರ ಟೀವಿ ಜಾಹೀರಾತಿನ ಮೊರೆ ಹೋಗಿದೆ.

click me!