
ಟೆಹ್ರಾನ್/ಅಬುದಾಬಿ/ರಿಯಾದ್: ಇಸ್ರೇಲ್ ಮತ್ತು ಅಮೆರಿಕ ಜಂಟಿ ಕಾರ್ಯಾಚರಣೆಗೆ ಇರಾನ್ ಆಕ್ರಮಣಕಾರಿಯಾಗಿ ಪ್ರತಿಕ್ರಿಯೆ ನೀಡುತ್ತಿದೆ. ಮೊದಲು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಅಧ್ಯಕ್ಷ ಖಮೇನಿ ಕಚೇರಿಗಳ ಮೇಲೆ ದಾಳಿ ನಡೆಸಲಾಯ್ತು. ಇದಾದ ನಂತರ ನೂರಾರು ಕ್ಷಿಪಣಿಗಳು ಹಲವಾರು ಸ್ಥಳಗಳಲ್ಲಿ ಕ್ಷಿಪಣಿ ದಾಳಿ ನಡೆಯಿತು. ಇದಕ್ಕೆ ಪ್ರತಿಯಾಗಿ ಇರಾನ್, ಬಹ್ರೇನ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕಾ ಮಿಲಿಟಿರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಅರಂಭಿಸಿದೆ. ತನ್ನ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಎರಡು ಖಂಡಾಂತರ (ಬ್ಯಾಲಿಸ್ಟಿಕ್) ಕ್ಷಿಪಣಿಗಳನ್ನು ಜೋರ್ಡಾನ್ ಹೊಡೆದುರುಳಿಸಿದೆ. ಜೋರ್ಡಾನ್ ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಯಾವ ದೇಶದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ಕತಾರ್‌ನ ಅಲ್-ಉದೈದ್ ವಾಯುನೆಲೆ, ಕುವೈತ್‌ನ ಅಲ್-ಸೇಲಂ ವಾಯುನೆಲೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್-ದಫ್ರಾ ವಾಯುನೆಲೆ ಮತ್ತು ಬಹ್ರೇನ್‌ನಲ್ಲಿರುವ ನೌಕಾನೆಲೆ ಮೇಲೆ ಇರಾನ್ ದಾಳಿ ನಡೆಸಿದೆ. ಇದರ ಜೊತೆಯಲ್ಲಿಯೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ಕ್ಷಿಪಣಿಗಳ ದಾಳಿ ಬೆನ್ನಲ್ಲೇ ಗಲ್ಫ್ ರಾಷ್ಟ್ರಗಳು ತಮ್ಮ ವಾಯುಗಡಿಯನ್ನು ಮುಚ್ಚಿಕೊಂಡಿವೆ.
ಕತಾರ್‌ನ ದೋಹಾದಲ್ಲಿರುವ ಅಮೆರಿಕೆಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿತ್ತು. ಇರಾನ್‌ನ ಹಲವು ಕ್ಷಿಪಣಿಗಳನ್ನು ಕತಾರ್ ಹೊಡೆದುರುಳಿಸಿದ್ದು, ಬಹುತೇಕ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಕತಾರ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಎಲ್ಲಾ ಕ್ಷಿಪಣಿಗಳನ್ನು ಕತಾರ್ ಭೂಮಿ ತಲುಪುವ ಮೊದಲು ತಡೆಹಿಡಿಯಲಾಗಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸುತ್ತದೆ.
ಇದನ್ನೂ ಓದಿ: ಬಾಬಾ ವಂಗಾ 3ನೇ ಮಹಾಯುದ್ಧದ ಭವಿಷ್ಯವಾಣಿ ನಿಜವಾಯ್ತಾ? ಸೌದಿ, ಬಹ್ರೇನ್, ಕತಾರ್, ಕುವೈತ್,ಯುಎಇ ಮೇಲೆ ಇರಾನ್ ದಾಳಿ
ಈ ಕ್ಷಿಪಣಿಗಳ ದಾಳಿಯಲ್ಲಿ ಇರಾನ್ ಐವರು ಶಾಲಾ ಮಕ್ಕಳು ನಿಧನರಾಗಿದ್ದಾರೆ ಎಂದು ನ್ಯೂಸ್ ಏಜೆನ್ಸಿಯೊಂದು ವರದಿ ಬಿತ್ತರಿಸಿದೆ. ಇತ್ತ ಇಸ್ರೇಲ್‌ನ 9 ಮಹಡಿ ಕಟ್ಟಡದ ಮೇಲೆ ಕ್ಷಿಪಣಿಯ ದಾಳಿಯಾಗಿದೆ ಎಂದು 'Channel 12' ರಿಪೋರ್ಟ್ ಮಾಡಿದೆ.
ಇದನ್ನೂ ಓದಿ: BREAKING: ಇರಾನ್ ಮೇಲೆ ದಾಳಿ ಆರಂಭಿಸಿದ ಇಸ್ರೇಲ್, ಟೆಹ್ರಾನ್‌ನಲ್ಲಿ ಸರಣಿ ಬಾಂಬ್ ಸ್ಫೋಟ
ಇರಾನ್ ದಾಳಿ ಕುರಿತು ಪ್ರತಿಕ್ರಿಯಿಸಿರುವ ಯುಎಇ, ಇದು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ದಾಳಿಗೆ ಪ್ರತಿಕ್ರಿಯಿಸುವ ಹಕ್ಕು ನಮ್ಮದಾಗಿದೆ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ