
ಟೆಹ್ರಾನ್ (ಮಾರ್ಚ್ 25, 2023): ಇರಾನ್‌ನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಭೂಕಂಪ ಸಂಭವಿಸಿದ್ದು, ಆಗ ತಾನೇ ಎದ್ದಿದ್ದ ಜನತೆ ಶಾಕ್‌ಗೊಳಗಾಗಿದ್ದಾರೆ. ಭೂಕಂಪಕ್ಕೆ ಹಲವು ಮನೆಗಳು ಬಿರುಕು ಬಿಟ್ಟಿದ್ದು, ವಾಯುವ್ಯ ಇರಾನ್‌ನಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಗಾಯಗೊಂಡವರ ಸಂಖ್ಯೆ 165 ಕ್ಕೆ ಏರಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಪಶ್ಚಿಮ ಅಜರ್‌ಬೈಜಾನ್ ಪ್ರಾಂತ್ಯದ ಖೋಯ್ ಕೌಂಟಿ ಬಳಿ ಸ್ಥಳೀಯ ಕಾಲಮಾನ ಬೆಳಗ್ಗೆ 6:46 ಗಂಟೆಗೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು 8 ಕಿಮೀ ಆಳವನ್ನು ಹೊಂದಿದೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ ಇರಾನಿನ ಭೂಕಂಪನ ಕೇಂದ್ರ (ಐಆರ್‌ಎಸ್‌ಸಿ) ಹೇಳಿಕೆಯನ್ನು ಶುಕ್ರವಾರ ವರದಿ ಮಾಡಿದೆ.
ಇನ್ನು, ಗಾಯಗೊಂಡ 165 ಮಂದಿಯಲ್ಲಿ, 139 ಮಂದಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ವೈದ್ಯಕೀಯ ಕೇಂದ್ರಗಳಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗೆ, ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಶ್ಚಿಮ ಅಜರ್‌ಬೈಜಾನ್‌ನ ಪ್ರಾಂತೀಯ ಗವರ್ನರ್ ಮೊಹಮ್ಮದ್-ಸಾಡೆಕ್ ಮೊಟಮೆಡಿಯನ್ ಹೇಳಿರುವುದಾಗಿ IRNA ವರದಿ ಮಾಡಿದೆ.
ಇದನ್ನು ಓದಿ: Gujarat Earthquake: ಕಛ್‌ನಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಗುಜರಾತ್ ಜನತೆ
ಸಲ್ಮಾಸ್ ಮತ್ತು ಖೋಯ್ ಕೌಂಟಿಗಳಲ್ಲಿನ 10 ಹಳ್ಳಿಗಳಲ್ಲಿ 80 ವಸತಿ ಘಟಕಗಳು ಭೂಕಂಪದಲ್ಲಿ ಹಾನಿಗೊಳಗಾಗಿವೆ ಎಂದೂ ಪಶ್ಚಿಮ ಅಜರ್‌ಬೈಜಾನ್‌ನ ಹೌಸಿಂಗ್ ಫೌಂಡೇಶನ್‌ನ ಡೈರೆಕ್ಟರ್ ಜನರಲ್ ಜಾಫರ್ ಬರ್ಜೆಗರ್ ಐಆರ್‌ಎನ್‌ಎಗೆ ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನು, ಜನವರಿ ಅಂತ್ಯದಲ್ಲಿ ಸಹ ಇರಾನ್‌ನಲ್ಲಿ ಭೂಕಂಪ ಸಂಭವಿಸಿತ್ತು. ಆ ವೇಳೆ, ಖೋಯ್ ಕೌಂಟಿಯಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದಲ್ಲಿ 3ಜನರು ಮೃತಪಟ್ಟಿದ್ದರು ಮತ್ತು 800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಸಲ್ಯೂಟ್, ಟರ್ಕಿ ಕಾರ್ಯಾಚರಣೆ ಮುಗಿಸಿ ತವರಿಗೆ ಬಂದ NDRF ತಂಡಕ್ಕೆ ಮೋದಿ ಪ್ರಶಂಸೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ